ADVERTISEMENT
Friday, March 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಾನು ವಿಧಿಯಾಟವನ್ನು ನಂಬುತ್ತೇನೆ… ಹಣೆಬರೆಹದಲ್ಲಿ ಏನಾಗುತ್ತೋ ಅದೇ ಆಗುತ್ತೆ -ಮಹಮ್ಮದ್ ಅಜರುದ್ದೀನ್

admin by admin
July 30, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ನಾನು ವಿಧಿಯಾಟವನ್ನು ನಂಬುತ್ತೇನೆ… ಹಣೆಬರೆಹದಲ್ಲಿ ಏನಾಗುತ್ತೋ ಅದೇ ಆಗುತ್ತೆ -ಮಹಮ್ಮದ್ ಅಜರುದ್ದೀನ್

ಮಹಮ್ಮದ್ ಅಜರುದ್ದೀನ್.. ಭಾರತ ಕ್ರಿಕೆಟ್ ತಂಡವನ್ನು ಸುಮಾರು ಒಂದು ದಶಕಗಳ ಕಾಲ ಮುನ್ನಡೆಸಿದ್ದ ನಾಯಕ. ಅಷ್ಟೇ ಅಲ್ಲ, ಮೂರು ವಿಶ್ವಕಪ್ ಟೂರ್ನಿಗಳಿಗೆ ಭಾರತ ಕ್ರಿಕೆಟ್ ತಂಡದ ಸಾರಥಿಯಾಗಿದ್ದರು. ಸ್ಟೈಲೀಶ್ ಆಟದ ಮೂಲಕ ಗಮನ ಸೆಳೆದಿರುವ ಮಹಮ್ಮದ್ ಅಜರುದ್ದೀನ್ ಅದ್ಭುತ ಬ್ಯಾಟ್ಸ್ ಮೆನ್ ಹಾಗೂ ಚುರುಕಿನ ಫೀಲ್ಡರ್ ಕೂಡ ಹೌದು. ಆದ್ರೆ ಮ್ಯಾಚ್ ಫಿಕ್ಸಿಂಗ್ ಕಳಂಕ ಮಹಮ್ಮದ್ ಅಜರುದ್ದೀನ್ ಅವರ ಕ್ರಿಕೆಟ್ ಬದುಕಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು.
ಮ್ಯಾಚ್ ಫಿಕ್ಸಿಂಗ್ ಆರೋಪದ ಬಳಿಕ ಕ್ರಿಕೆಟ್ ನಿಂದ ದೂರ ಉಳಿದಿದ್ದ ಮಹಮ್ಮದ್ ಅಜರುದ್ದೀನ್ ಸಂಸದರಾಗಿದ್ದರು. ಸದ್ಯ ಹೈದ್ರಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ತನ್ನ ಮೇಲಿನ ಆರೋಪದ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ಅಜರುದ್ದೀನ್‍ಗೆ 2012ರಲ್ಲಿ ನ್ಯಾಯ ಸಿಕ್ಕಿದ್ರೂ ಆ ಕಳಂಕ ಮಾತ್ರ ಇನ್ನೂ ಹೋಗಿಲ್ಲ.
ಈ ಬಗ್ಗೆ ಮಾತನಾಡಿರುವ ಮಹಮ್ಮದ್ ಅಜರುದ್ದೀನ್, ನಾನು ಯಾರನ್ನು ದೂಷಣೆ ಮಾಡುವುದಿಲ್ಲ… ನನಗೆ ಯಾಕೆ ನಿಷೇಧ ಹೇರಿದ್ರೂ ಎಂಬುದು ಸಹ ನನಗೆ ಗೊತ್ತಿಲ್ಲ. ನಾನು ವಿಧಿಯಾಟವನ್ನು ನಂಬುತ್ತೇನೆ. ಹಣೆಬರೆಹದಲ್ಲಿ ಏನು ಆಗಬೇಕೋ ಅದೇ ಆಗುತ್ತೆ ಎಂದು ಬೇಸರದಿಂದಲೇ ಹೇಳಿಕೊಂಡಿದ್ದಾರೆ.
ಆದ್ರೆ ನಾನು ನನ್ನ ಆರೋಪ ಮೇಲೆ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದೆ. 12ವರ್ಷಗಳ ಬಳಿಕ ನನಗೆ ನ್ಯಾಯ ಸಿಕ್ಕಿದೆ. ನಾನು ಆರೋಪದಿಂದ ಮುಕ್ತನಾಗಿದ್ದೇನೆ. ನನಗೆ ಈ ಬಗ್ಗೆ ಸಮಾಧಾನವಿದೆ. ನಾನು ಹೈದ್ರಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾದ ಬಳಿಕ ನಾನು ಬಿಸಿಸಿಐ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕು ಮೊದಲು ಮಹಮ್ಮದ್ ಅಜರುದ್ದೀನ್ ಅವರಿಗೆ ಬಿಸಿಸಿಐ ನಿಷೇಧ ಹೇರಿತ್ತು. ಬಿಸಿಸಿಐ ಮಹಮ್ಮದ್ ಅಜರುದ್ದೀನ್ ಅವರನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಯಾವುದೇ ಕಾರ್ಯಕ್ರಮ, ಸಭೆಗೂ ಆಹ್ವಾನಿಸಿರಲಿಲ್ಲ.
ನಾನು ಭಾರತದ ಪರ ಸುಮಾರು 16ರಿಂದ 17 ವರ್ಷ ಆಡಿದ್ದೇನೆ. ಹತ್ತು ವರ್ಷಗಳ ಕಾಲ ನಾಯಕನಾಗಿದ್ದೆ. ಇದಕ್ಕಿಂತ ಹೆಚ್ಚು ನಾನು ಏನು ಕೇಳಲಿ ? ಎಂದು ಮಹಮ್ಮದ್ ಅಜರುದ್ದೀನ್ ಹೇಳ್ತಾರೆ. ಮಹಮ್ಮದ್ ಅಜರುದ್ದೀನ್ ಅವರು 99 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 6125 ರನ್ ಗಳಿಸಿದ್ದಾರೆ. ಹಾಗೇ 334 ಏಕದಿನ ಪಂದ್ಯಗಳಲ್ಲಿ 9378 ರನ್ ಪೇರಿಸಿದ್ದಾರೆ. ಕ್ರಿಕೆಟ್ ಬದುಕಿನ ಆರಂಭದಲ್ಲೇ ಮೂರು ಶತಕಗಳನ್ನು ಸಿಡಿಸಿ ಮಿಂಚು ಹರಿಸಿದ್ರು.
ಇದೇ ವೇಳೆ, ಮಹಮ್ಮದ್ ಅಜರುದ್ದೀನ್ ಅವರು ಪಾಕಿಸ್ತಾನದ ಜಹೀರ್ ಅಬ್ಬಾಸ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ನಾನು 1989ರಲ್ಲಿ ಪಾಕ್ ಸರಣಿಗೆ ಆಯ್ಕೆಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆಗ ನಾನು ಕೆಟ್ಟ ಫಾರ್ಮ್‍ನಲ್ಲಿದ್ದೆ. ನನಗೆ ಇನ್ನೂ ನೆನಪಿದೆ. ಕರಾಚಿಯಲ್ಲಿ ಜಹೀರ್ ಅಬ್ಬಾಸ್ ಅವರು ನಾವು ಅಭ್ಯಾಸ ಮಾಡುವುದನ್ನು ನೋಡುತ್ತಿದ್ದರು. ಆಗ ಅವರು ನನ್ನ ಬಳಿ ಕೇಳಿದ್ದರು .. ನೀನು ಯಾಕೆ ಬೇಗ ಔಟಾಗುತ್ತಿದ್ದೀಯಾ ಅಂತ. ಆಗ ಅವರ ಬಳಿ ನನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದೆ. ಆಗ ಅವರು ನನಗೆ ಸಲಹೆ ಕೊಟ್ರು. ಬ್ಯಾಟ್ ಹಿಡಿತವನ್ನು ಬದಲಾವಣೆ ಮಾಡಿಕೊ ಎಂದು ಹೇಳಿದ್ದರು. ಅವರು ಹೇಳಿದ್ದ ಹಾಗೇ ನಾನು ನನ್ನ ಬ್ಯಾಟಿಂಗ್ ನಲ್ಲಿ ಬದಲಾವಣೆ ಮಾಡಿಕೊಂಡೆ. ಇದು ನನಗೆ ವರದಾನವಾಯ್ತು. ಆಕ್ರಮಣಕಾರಿ ಆಡಲು ಸಾಧ್ಯವಾಯ್ತು ಎಂದು ಹೇಳಿದ್ದಾರೆ.
ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯ ಬಗ್ಗೆ ಮಾತನಾಡಿದ ಅಜರು, ನಾನು ಈ ಬಗ್ಗೆ ಏನು ಮಾತನಾಡುವುದಿಲ್ಲ. ಯಾಕಂದ್ರೆ ಅದು ನಮ್ಮ ಕೈಯಲ್ಲಿ ಇಲ್ಲ. ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು. ರಾಜಕೀಯ ಬಿಕ್ಕಟ್ಟು ಮುಗಿದ ನಂತರ ಕ್ರಿಕೆಟ್ ಆಟ ಶುರುವಾಗಬಹುದು ಎಂದು ಹೇಳಿದ್ರು.

Related posts

ಜಾತಿ ಧರ್ಮದ ಹೆಸರಲ್ಲಿ ದೇಶ ಒಡೆದ ಬಳಿಕ ಈಗ ಒಂದಾಗಿ ಇರೋಣ ಎನ್ನಲು ನಾಚಿಕೆಯಾಗಲ್ವಾ : ಮೋದಿ ವಿರುದ್ಧ ನಟ ಕಿಶೋರ್ ಆಕ್ರೋಶ

ಜಾತಿ ಧರ್ಮದ ಹೆಸರಲ್ಲಿ ದೇಶ ಒಡೆದ ಬಳಿಕ ಈಗ ಒಂದಾಗಿ ಇರೋಣ ಎನ್ನಲು ನಾಚಿಕೆಯಾಗಲ್ವಾ : ಮೋದಿ ವಿರುದ್ಧ ನಟ ಕಿಶೋರ್ ಆಕ್ರೋಶ

March 27, 2026
ಈ ಮಾರ್ಗಗಳಲ್ಲಿ 3 ದಿನ ವಾಹನ ಸಂಚಾರ ನಿರ್ಬಂಧ

ಈ ಮಾರ್ಗಗಳಲ್ಲಿ 3 ದಿನ ವಾಹನ ಸಂಚಾರ ನಿರ್ಬಂಧ

March 27, 2026
Tags: Andhra Pradesh High Court rbcciHyderabad cricket associationindian cricket teammatch fixingMohammad Azharuddinpakisthanteam india
ShareTweetSendShare
Join us on:

Related Posts

ಜಾತಿ ಧರ್ಮದ ಹೆಸರಲ್ಲಿ ದೇಶ ಒಡೆದ ಬಳಿಕ ಈಗ ಒಂದಾಗಿ ಇರೋಣ ಎನ್ನಲು ನಾಚಿಕೆಯಾಗಲ್ವಾ : ಮೋದಿ ವಿರುದ್ಧ ನಟ ಕಿಶೋರ್ ಆಕ್ರೋಶ

ಜಾತಿ ಧರ್ಮದ ಹೆಸರಲ್ಲಿ ದೇಶ ಒಡೆದ ಬಳಿಕ ಈಗ ಒಂದಾಗಿ ಇರೋಣ ಎನ್ನಲು ನಾಚಿಕೆಯಾಗಲ್ವಾ : ಮೋದಿ ವಿರುದ್ಧ ನಟ ಕಿಶೋರ್ ಆಕ್ರೋಶ

by Shwetha
March 27, 2026
0

ಸಮಾಜದ ಆಗುಹೋಗುಗಳ ಬಗ್ಗೆ ಸದಾ ನಿರ್ಭೀತಿಯಿಂದ ದನಿ ಎತ್ತುತ್ತಾ, ಕಳೆದ ದಶಕದಿಂದ ಬಲಪಂಥೀಯ ವಿಚಾರಧಾರೆಗಳ ವಿರುದ್ಧ ಸಮರ ಸಾರಿರುವ ಬಹುಭಾಷಾ ನಟ ಕಿಶೋರ್, ಇದೀಗ ಮತ್ತೊಮ್ಮೆ ಕೇಂದ್ರ...

ಈ ಮಾರ್ಗಗಳಲ್ಲಿ 3 ದಿನ ವಾಹನ ಸಂಚಾರ ನಿರ್ಬಂಧ

ಈ ಮಾರ್ಗಗಳಲ್ಲಿ 3 ದಿನ ವಾಹನ ಸಂಚಾರ ನಿರ್ಬಂಧ

by Shwetha
March 27, 2026
0

ಬೆಂಗಳೂರು ನಗರದಲ್ಲಿ ಮೆಟ್ರೋ ಕಾಮಗಾರಿಗಳ ಹಿನ್ನೆಲೆ ಮಾರತಹಳ್ಳಿ ಬ್ರಿಡ್ಜ್ ಮೇಲೆ ಇಂದಿನಿಂದ 3 ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇದೇ ವೇಳೆ ರಾತ್ರಿ 12 ಗಂಟೆಯಿಂದ...

SSLC ತೃತೀಯ ಭಾಷೆ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ

SSLC ತೃತೀಯ ಭಾಷೆ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ

by Shwetha
March 27, 2026
0

ಮಾ.30ರಂದು ನಡೆಯಬೇಕಿದ್ದ SSLC ತೃತೀಯ ಭಾಷೆ ಪರೀಕ್ಷೆಯನ್ನು ಮಾ.31ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ತಿಳಿಸಿದೆ. ಮಹಾವೀರ ಜಯಂತಿ ರಜೆಯಲ್ಲಿ ಮಾಡಿದ ಪರಿಷ್ಕರಣೆ ಹಿನ್ನೆಲೆಯಲ್ಲಿ...

ನಮಾಜ್ ವೇಳೆ ಮೊಳಗಿದ ದುರ್ಗಾ ಸೂಕ್ತಂ: ಬಿಜೆಪಿ ನಾಯಕಿ ಮಾಧವಿ ಲತಾ ನಡೆಗೆ ಭುಗಿಲೆದ್ದ ವಿವಾದ, ಪರ-ವಿರೋಧದ ವಾದಗಳೇನು?

ನಮಾಜ್ ವೇಳೆ ಮೊಳಗಿದ ದುರ್ಗಾ ಸೂಕ್ತಂ: ಬಿಜೆಪಿ ನಾಯಕಿ ಮಾಧವಿ ಲತಾ ನಡೆಗೆ ಭುಗಿಲೆದ್ದ ವಿವಾದ, ಪರ-ವಿರೋಧದ ವಾದಗಳೇನು?

by Shwetha
March 27, 2026
0

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾರ್ಥನಾ ಮಂದಿರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಮುಸ್ಲಿಂ ಮಹಿಳೆಯರು ನಮಾಜ್ ಮಾಡುತ್ತಿದ್ದರೆ,...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (27-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 27, 2026
0

ದಿನ ಭವಿಷ್ಯ: 27-03-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಹೆಚ್ಚು ಉತ್ಸಾಹ ಕಂಡುಬರುತ್ತದೆ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ನೀವು ಅಂದುಕೊಂಡ ಕೆಲಸಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram