ಮಂಗಳೂರು: ನಾನು ಕೂಡ ಮಠದಲ್ಲೇ ಬೆಳೆದಿದ್ದೇನೆ. ಆದಿಚುಂಚನಗಿರಿ ಮಠದಲ್ಲೇ ನಾನು ಬೆಳೆದಿದ್ದೇನೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಗೆ ಬರಲು ಆದಿಚುಂಚನಗಿರಿಯ ಹಿರಿಯ ಸ್ವಾಮೀಜಿಗಳು ಕಾರಣ. ನಾನು ಪ್ರತಿ ಶನಿವಾರ ಬೆಳಗ್ಗೆಯಿಂದ ಸಂಜೆವರೆಗೂ ಮಠದಲ್ಲೇ ಇರುತ್ತೇನೆ. ಸ್ವಾಮೀಜಿ ಮಡಿಲಲ್ಲಿ ಬೆಳೆದವ ನಾನು. ಬೇಕಾದರೆ ಕುಮಾರಸ್ವಾಮಿಗೆ ಕೇಳಿ ಎಂದು ಹೇಳಿದ್ದಾರೆ.
ನಾನು ದೇವೇಗೌಡ ಕುಟುಂಬ ಖರೀದಿ ಮಾಡುತ್ತೇನೆ ಅಂತ ಹೇಳಿಲ್ಲ. ಕುಮಾರಸ್ವಾಮಿ ಮುಸ್ಲಿಮರು ನನಗೆ ಬೇಕಾಗಿಲ್ಲ ಅಂತ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಿದ್ದು. ಮುಸ್ಲಿಂ ವೋಟ್ ಬೇಡ ಅಂತ ದುಡ್ಡು ಕೊಟ್ಟು ಖರೀದಿ ಮಾಡುತ್ತಿದ್ದೀರಿ ಅಲ್ವಾ, ಎಷ್ಟು ಸರಿ ಅಂತ ಕೇಳಿದ್ದು. ಮುಸ್ಲಿಂ ಪಂಚರ್ ಹಾಕುವವರು, ವೆಡ್ಡಿಂಗ್ ಮಾಡುವರು ಅಂತ ಲಘವಾಗಿ ಮಾತಾಡಿದ್ದಾರೆ ಎದು ಆರೋಪಿಸಿದ್ದಾರೆ.
ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ? ಯೂಟರ್ನ್ ಕುಮಾರಸ್ವಾಮಿ ಅಂತ ಅವರಿಗೆ ಹೆಸರಿದೆ. ಅವರ ಒಡನಾಟ ಇದ್ದ ಪ್ರತಿಯೊಬ್ಬರಿಗೂ ಈ ಅನುಭವವಾಗಿದೆ ಎಂದು ಹೇಳಿದ್ದಾರೆ.