ನನಗೆ ಅದ್ಭುತವಾದ ನಾಯಕನಿದ್ದಾನೆ… ಹೀಗಾಗಿ ನಾನು ಯಾಕೆ ಚಿಂತೆ ಮಾಡಲಿ.. ಸಿಎಸ್‌ಕೆ ಮಾಲೀಕ ಶ್ರೀನಿವಾಸನ್ ಸ್ಪಷ್ಟನೆ…!
ನ
ನ್ನ ಬಳಿ ಅತ್ಯಂತ ಶ್ರೇಷ್ಠ ನಾಯಕನಿದ್ದಾನೆ. ಹೀಗಾಗಿ ನಾನು ಕ್ರಿಕೆಟ್ ವಿಚಾರವಾಗಿ ಮಧ್ಯೆ ಪ್ರವೇಶ ಮಾಡುವುದಿಲ್ಲ ಎಂದು ಸಿಎಸ್‌ಕೆ ತಂಡದ ಮಾಲೀಕ ಹಾಗೂ ಮಾಜಿ ಬಿಸಿಸಿಐ ಬಾಸ್ ಎನ್. ಶ್ರೀನಿವಾಸನ್ ಹೇಳಿದ್ದಾರೆ.
ಸುರೇಶ್ ರೈನಾ ಸಿಎಸ್‌ಕೆ ತಂಡದಿAದ ಹೊರ ನಡೆದಾಗ ಶ್ರೀನಿವಾಸನ್ ಅವರು ಸಿಡಿಮಿಡಿಗೊಂಡಿದ್ದರು. ಬಳಿಕ ಶಾಂತರಾದ ಶ್ರೀನಿವಾಸನ್ ಅವರು ರೈನಾ ಬಗ್ಗೆ ಮಾತನಾಡಿರುವುದಕ್ಕೆ ಸ್ಪಷ್ಟಿಕರಣ ನೀಡಿದ್ದಾರೆ. ಇನ್ನೊಂದೆಡೆ ಸುರೇಶ್ ರೈನಾ ಮತ್ತೆ ಸಿಎಸ್‌ಕೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ.
ಸುರೇಶ್ ರೈನಾ ನನಗೆ ಮಗ ಇದ್ದ ಹಾಗೆ. ಆದ್ರೆ ರೈನಾ ಅವರು ತಂಡವನ್ನು ಮತ್ತೆ ಸೇರುವುದನ್ನು ನಿರ್ಧಾರ ಮಾಡುವುದು ನಾನಲ್ಲ. ಟೀಮ್ ಮ್ಯಾನೇಜ್‌ಮೆಂಟ್ ಅಂದ್ರೆ ಸಿಇಓ ಕಾಸಿ ವಿಶ್ವನಾಥನ್ ಅದಕ್ಕಿಂತ ಹೆಚ್ಚಾಗಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಂದು ಶ್ರೀನಿವಾಸನ್ ಹೇಳಿದ್ದಾರೆ.
ನಾನು ಆತನನ್ನು ಮಗನ ರೀತಿಯಲ್ಲೇ ನೋಡಿಕೊಂಡಿದ್ದೇನೆ. ನಾನು ಕ್ರಿಕೆಟ್ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡಿಲ್ಲ. ಎಲ್ಲವನ್ನೂ ಟೀಮ್ ಮ್ಯಾನೇಜ್‌ಮೆಂಟ್‌ಗೆ ಬಿಟ್ಟಿದ್ದೇವೆ. ಇದ್ರಿಂದಾಗಿ ಐಪಿಎಲ್ ನಲ್ಲಿ ಸಿಎಸ್‌ಕೆ ಯಶಸ್ಸಿ ಸಾಧಿಸಲು ಸಾಧ್ಯವಾಗಿದೆ. ೧೯೬೦ರಿಂದ ನಾವು ಇಂಡಿಯನ್ಸ್ ಸಿಮೆಂಟ್ಸ್ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದೇವೆ. ನಾನು ಯಾವತ್ತೂ ಕ್ರಿಕೆಟ್ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡಿಲ್ಲ ಅಂತಾರೆ ಶ್ರೀನಿವಾಸನ್.
ನಾನು ಕ್ರಿಕೆಟ್ ತಂಡದ ನಾಯಕನಲ್ಲ. ನಾನು ಯಾವತ್ತೂ ಟೀಮ್ ಮ್ಯಾನೇಜ್ ಮೆಂಟ್ ಬಳಿ ಯಾರನ್ನು ಆಡಿಸಬೇಕು, ಹರಾಜಿನಲ್ಲಿ ಯಾರನ್ನು ಖರೀದಿಸಬೇಕು ಎಂದು ಹೇಳಿಲ್ಲ. ನನ್ನ ಬಳಿ ಗ್ರೇಟ್ ಕ್ಯಾಪ್ಟನ್ ಇದ್ದಾನೆ. ಹೀಗಾಗಿ ನಾನು ಯಾಕೆ ಮಧ್ಯೆ ಪ್ರವೇಶ ಮಾಡಬೇಕು. ನಮ್ಮ ತಂಡವಿದೆ. ನಮ್ಮ ಫ್ರಾಂಚೈಸಿ ಇದೆ. ಹಾಗಂತ ನಾವು ಆಟಗಾರರ ಮಾಲೀಕರಲ್ಲ. ತಂಡ ನಮ್ಮದು. ಆದ್ರೆ ಆಟಗಾರರು ನಮ್ಮವರಲ್ಲ. ನಾನು ಆಟಗಾರರ ಮಾಲೀಕನಲ್ಲ ಎಂದು ಶ್ರೀನಿವಾಸನ್ ಹೇಳಿದ್ದಾರೆ.








