Mitchell Marsh : ಭಾರತದಲ್ಲಿ ನನಗೆ ಶಾಪ ತಗುಲಿದೆ..
ಆಸ್ಟ್ರೇಲಿಯನ್ ಆಲ್ ರೌಂಡರ್ ಮಿಚೆಲ್ ಮಾರ್ಷ್ ಸಂಚಲನ ವ್ಯಾಖ್ಯಾನಗಳನ್ನು ಕೊಟ್ಟಿದ್ದಾರೆ. ಭಾರತದಲ್ಲಿ ಅವರಿಗೆ ಶಾಪ ತಗುಲಿದೆ ಎಂದು.. ಇಲ್ಲಿಗೆ ಬಂದ ಪ್ರತಿ ಬಾರಿಯೂ ಒಂದಲ್ಲಾ ಒಂದು ರೀತಿಯಲ್ಲಿ ನಾನು ಗಾಯಪಡುತ್ತಿದ್ದೇನೆ ಎಂದಿದ್ದಾರೆ.
ಪ್ರಸ್ತುತ ಮೂರು ಪಂದ್ಯಗಳ ಟಿ 20 ಸಿರೀಸ್ ಆಡೋದಕ್ಕೆ ಆಸ್ಟ್ರೇಲಿಯಾ ತಂಡ ಶ್ರೀಲಂಕಾಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಿಚೆಲ್ ಮಾರ್ಷ್ ಮಿಡಿಯಾದೊಂದಿಗೆ ಮಾತನಾಡಿದ್ದು, ನಾನು ಭಾರತಕ್ಕೆ ಬರುವುದಕ್ಕೂ ಮೊದಲೇ ಪಾಕಿಸ್ತಾನದಲ್ಲಿ ಗಾಯಗೊಂಡಿದ್ದೆ.
ಇಲ್ಲಿಗೆ ಬಂದು ಒಂದೇ ಒಂದು ಪಂದ್ಯವನ್ನಾಡದೇ ಕೊರೊನಾ ಸೋಂಕಿಗೆ ತುತ್ತಾದೆ. ಆಗ ನನಗೆ ನಿಜವಾಗಿಯೂ ಶಾಕ್ ಆಯ್ತು. ಏನಾದ್ರೂ ಶಾಪ ತಗುಲಿದ್ಯಾ..? ಅಂತಾ ಅನಿಸಿತ್ತು.
ಆದ್ರೆ ನಾನು ಕೊರೊನಾ ಸೋಂಕಿನಿಂದ ಬೇಗ ಚೇತರಿಸಿಕೊಂಡೆ. ನಂತರ ಡೆಲ್ಲಿ ಕ್ಯಾಪಿಟಲ್ಸ್ ಪರ ಉತ್ತಮ ಪ್ರದರ್ಶನ ನೀಡುತ್ತಾ ಗೇಮ್ ಎಂಜಾಯ್ ಮಾಡಿದ್ದೇನೆ ಎಂದಿದ್ದಾರೆ.

ಇನ್ನು ನಾನು ತಂಡ ಸೇರಿಕೊಂಡಾಗ ಕೋಚ್ ರಿಕ್ಕಿ ಪಾಂಟಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಕ್ರಿಕೆಟ್ ನಲ್ಲಿ ಅವರು ಏನನ್ನ ಸಾಧಿಸಿದ್ದಾರೆ ಅನ್ನೋದು ಒಬ್ಬ ಆಸೀಸ್ ಕ್ರಿಕೆಟಿಗನಾಗಿ ನನಗೆ ಗೊತ್ತಿದೆ.
ಆದ್ರೆ ಅವರೊಂದಿಗೆ ನಾನು ಜರ್ನಿ ಮಾಡಿದಾಗ ಪಾಂಟಿಂಗ್ ಇತರೆ ಆಟಗಾರರನ್ನ ಹೇಗೆ ನೋಡಿಕೊಳ್ಳುತ್ತಾರೆ ಅನ್ನೋದು ಗೊತ್ತಾಯ್ತು.
ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಎಷ್ಟು ಮುಖ್ಯ ಅಂತಾ ಪಾಂಟಿಂಗ್ ನನಗೆ ಹೇಳಿದ್ರು. ಅದೇ ರೀತಿಯಲ್ಲಿ ನಾನು ಪ್ರದರ್ಶನ ನೀಡಿದೆ. ಅವರು ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದಾರೆ ಎಂದು ಮಾರ್ಷ್ ಹೇಳಿದ್ದಾರೆ.
2020 ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ ಮಾರ್ಷ್, ಟೂರ್ನಿಯ ಆರಂಭದಲ್ಲಿಯೇ ಗಾಯಗೊಂಡಿದ್ದರು.
ಈ ಸೀಸನ್ ನಲ್ಲಿ ಎಂಟು ಪಂದ್ಯಗಳನ್ನಾಡಿದ ಮಾರ್ಷ್ 251 ರನ್ ಗಳನ್ನು ಗಳಿಸಿದರು. ಇದರಲ್ಲಿ ಎರಡು ಅರ್ಧಶತಕಗಳಿವೆ.








