2009ರ ಐಪಿಎಲ್ ನಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನನ್ನನ್ನು ಮೂರ್ಖನಂತೆ ಮಾಡಿದ್ರು ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೋಹ್ಲಿ ಹೇಳಿದ್ದಾರೆ. ಭಾರತದ ಫುಟ್ ಬಾಲ್ ಆಟಗಾರ ಸುನೀಲ್ ಚೆಟ್ರಿ ಅವರ ಜೊತೆಗಿನ ಇನ್‍ಸ್ಟಾಗ್ರಾಂ ಲೈವ್ ನಲ್ಲಿ ವಿರಾಟ್ ಕೊಹ್ಲಿ ಈ ರೀತಿ ಹೇಳಿದ್ದಾರೆ.
ವಿರಾಟ್ ಕೊಹ್ಲಿಗೆ ಸುನೀಲ್ ಚೆಟ್ರಿ ಒಂದು ಪ್ರಶ್ನೆಯನ್ನು ಕೇಳಿದ್ದಾರೆ. ಕೊನೆಯ ಎಸೆತದಲ್ಲಿ ಮೂರು ರನ್‍ಗಳು ಬೇಕು. ಬೌಲರ್‍ಗಳ ಆಯ್ಕೆಯನ್ನು ನಾನೇ ನೀಡುತ್ತೇನೆ. ಶೇನ್ ವಾರ್ನ್ ಮತ್ತು ವಾಕರ್ ಯೂನಸ್. ಯಾರನ್ನು ಮೊದಲು ಆಯ್ಕೆ ಮಾಡಿಕೊಳ್ಳುತ್ತೀರಿ ಅಂತ ಚೆಟ್ರಿ ಕೊಹ್ಲಿಯವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವಿರಾಟ್ ಉತ್ತರ ಹೀಗಿರುತ್ತೆ. ಮೊದಲ ಆಯ್ಕೆ ಶೇನ್ ವಾರ್ನ್. ಶೇನ್ ವಾರ್ನ್ ಡೆತ್ ಓವರ್‍ಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡ್ತಾರೆ. ಹಾಗೇ ವಕಾರ್ ಯೂನಸ್ ಕೂಡ. ಯಾಕಂದ್ರೆ ಯಾರ್ಕರ್ ಎಸೆತಗಳಿಗೆ ನಾನು ರನ್ ಗಳಿಸುತ್ತೇನೆ ಅನ್ನೋ ವಿಶ್ವಾಸ ನನಲ್ಲಿರುತ್ತೆ ಅಂತ ಹೇಳಿದ್ದಾರೆ.
ಅಂದ ಹಾಗೇ 2009ರ ಐಪಿಎಲ್ ನಲ್ಲಿ ಶೇನ್ ವಾರ್ನ್ ನನ್ನನ್ನು ಮೂರ್ಖನನ್ನಾಗುವಂತೆ ಮಾಡಿದ್ದರು. ಆದ್ರೆ 2011ರ ಐಪಿಎಲ್ ನಲ್ಲಿ ಮತ್ತೆ ವಿರುದ್ಧವಾಗಿಯೇ ಆಡಿದ್ದೇವು. ಆ ಪಂದ್ಯದಲ್ಲಿ ನಾನು ಶೇನ್ ವಾರ್ನ್ ಎಸೆತಗಳಿಗೆ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ. ಆದ್ರೆ ನಾನು ಅವರಿಗೆ ವಿಕೆಟ್ ಒಪ್ಪಿಸಿರಲಿಲ್ಲ. ಪಂದ್ಯ ಮುಗಿದ ಬಳಿಕ ಶೇನ್ ವಾರ್ನ್ ನನ್ನ ಬಳಿ ಬಂದು ಬೌಲರ್‍ಗೆ ಯಾವತ್ತೂ ಹಿಂದಿನಿಂದ ಹೇಳಬಾರದು ಅಂತ ಹೇಳಿದ್ರು. ಅದಕ್ಕೆ ನಾನು ಏನು ರಿಯಾಕ್ಟ್ ಮಾಡಲಿಲ್ಲ. ಅವರ ಮಾತನ್ನು ಕೇಳಲಿಲ್ಲ ಅಂತ ನಕ್ಕುಕೊಂಡು ವಿರಾಟ್ ಹೇಳಿದ್ರು.
ಇನ್ನು ದಕ್ಷಿಣ ಆಫ್ರಿಕಾದ ಹಾರುವ ಹಕ್ಕಿ ಜಾಂಟಿ ರೋಡ್ಸ್ ಬೆಸ್ಟ್ ಫೀಲ್ಡರ್ ಅಂತ ಚೆಟ್ರಿ ಬಳಿ ವಿರಾಟ್ ಹೇಳಿಕೊಂಡಿದ್ದಾರೆ. ಹಾಗೇ ನೀವು ನೋಡಿರುವ ಬೆಸ್ಟ್ ಇನಿಂಗ್ಸ್ ಯಾವುದು ಅನ್ನೋ ಚೆಟ್ರಿ ಪ್ರಶ್ನೆಗೆ ವಿರಾಟ್ ಉತ್ತರ ಹೀಗಿತ್ತು. ಮರಭೂಮಿಯ ಸುಂಟರಗಾಳಿ ಇನಿಂಗ್ಸ್. ಅದು 1998ರ ಶಾರ್ಜಾಕಪ್ ಸೆಮಿಫೈನಲ್ ಮ್ಯಾಚ್. ಸಚಿನ್ ತೆಂಡುಲ್ಕರ್ ಅವರ 140 ಪ್ಲಸ್ ರನ್ ಇನಿಂಗ್ಸ್ ಅಂತ ಹೇಳಿದ್ದಾರೆ.








