ನಾನು ಮನೆಯಿಂದ ಹೊರ ಹೊಗುವಂತೆ ಒತ್ತಾಯ ಮಾಡಲಾಯಿತು – ಗುಲಾಂ ನಬಿ ಆಜಾದ್..
ಒತ್ತಾಯದಿಂದ ನಾನು ಪಕ್ಷ ತೊರೆಯುವಂತೆ ಮಾಡಲಾಯಿತು ಎಂದು ದೇಶದ ಅತ್ಯಂತ ಹಳೆಯ ಪಕ್ಷಕ್ಕೆ ರಾಜೀನಾಮೆ ನೀಡಿರುವ ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆಜಾದ್ ನಾನು ನನ್ನ ಮನೆ ತೊರೆಯುವಂತೆ ಬಲವಂತ ಮಾಡಲಾಯಿತು ಎಂದು ಹೆಳಿದ್ದಾರೆ.
ಪಕ್ಷಕ್ಕೆ ರಾಜೀನಾಮೆ ಕುರಿತು ಮಾತನಾಡಿದ ಮಾತನಾಡಿದ ಅವರು ಮೋದಿಯವರೊಂದು ನೆಪ, ಜಿ23 ಗ್ರೂಪ್ ನಿಂದ ಹೈಕಮಾಂಡ್ ಗೆ ಪತ್ರ ಬರೆದಾಗಿನಿಂದ ನನ್ನೊಂದಿಗೆ ಬಿನ್ನಾಭಿಪ್ರಾವಿದೆ. ಅವರನ್ನ ಪ್ರಶ್ನಸಿಸುವಂತಹ ಯಾವುದೇ ಬರವಣಿಗೆ ಅವರಿಗೆ ಬೇಕಾಗಿರಲಿಲ್ಲ ಎಂದು ತಿಳಿಸಿದರು.
ಹಲವಾರು ಭಾರಿ ಕಾಂಗ್ರೆಸ್ ಸಭೆಗಳು ನಡೆದರು ಒಂದೇ ಒಂದು ನಮ್ಮ ಸಲಹೆಯನ್ನ ತೆಗೆದುಕೊಳ್ಳಲಿಲ್ಲ ಎಂದು ಆಜಾದ್ ಹೇಳಿದ್ದಾರೆ. ಪಕ್ಷದ ಅಧಃ ಪತನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರಣ ಎಂದು ಆರೋಪಿಸಿ ಗುಲಾಂ ನಬಿ ಆಜಾದ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದರು.








