ಮೈಸೂರು : ವಿಧಾನ ಪರಿಷತ್ ಗೆ ಹೆಚ್ ವಿಶ್ವನಾಥ್ ( MLC H Vishwanath) ಅವರನ್ನು ನೇಮಿಸಿರುವ ಬಗ್ಗೆ ಪ್ರಶ್ನಿಸಿ ಹೈಕೋರ್ಟ್ ಗೆ ಮೂರು ಪ್ರತ್ಯೇಕ ಪಿಐಎಲ್ ಅರ್ಜಿಗಳು ಸಲ್ಲಿಕೆಯಾಗಿವೆ. ಇಂದು ಹೈಕೋರ್ಟ್‍ನಲ್ಲಿ ರುಕ್ಮಾಂಗದ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಲಿದೆ.
ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಹೆಚ್. ವಿಶ್ವನಾಥ್ ( MLC H Vishwanath) ಮಾತನಾಡಿದ್ದು, ಯಾರ್ಯಾರೋ ಪಿಐಎಲ್ ಹಾಕಿದ್ದಾರೆ. ಕೋರ್ಟ್ ಕಾನೂನಿಗೆ ಅಂತ ಒಬ್ಬೊಬ್ಬ ಲಾಯರ್ ನ ಇಟ್ಕೊಂಡಿದ್ದೀವಿ, ಅವರು ನೋಡ್ಕೋತಾರೆ ಎಂದರು.
ಇದನ್ನೂ ಓದಿ : ನುಚ್ಚು ನೂರಾಯಿತೇ ಡಿಸಿಎಂ ಕನಸು : ಬಿಜೆಪಿಯಲ್ಲಿ ಇವರು ಆಟಕ್ಕುಂಟು ಲೆಕ್ಕಕ್ಕಿಲ್ಲ..?
ಇನ್ನು ನಾನು ಕೂಡ ಮೂಲತಃ ಅಡ್ವೋಕೇಟ್, ನನಗೆ ಗೊತ್ತಿದೆ, ಏನು ಮಾಡಬೇಕು ಅಂತ. ಇದೇನು ಅಂತ ಬಹಳ ಗಂಭೀರವಾದ ಪ್ರಕರಣ ಏನಲ್ಲ. ಎಲ್ಲವನ್ನು ನಮ್ಮ ಲಾಯರ್ ನೋಡ್ಕೋತಾರೆ ಎಂದು ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಸೋತ ವಿಶ್ವನಾಥ್ ಅವರನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ನವರು ಸಾಹಿತ್ಯ ಕ್ಷೇತ್ರದಿಂದ ವಿಧಾನಪರಿಷತ್ ಗೆ ನಾಮ ನಿರ್ದೇಶನ ಮಾಡಿದರು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸರ್ಕಾರ ರಚನೆ ವೇಳೆ ಸಮಾಜ ಕಲ್ಯಾಣ ಇಲಾಖೆ ಕೇಳಿದ್ದೆ, ಅಸಮಾಧಾನವಿಲ್ಲ : ಶ್ರೀರಾಮುಲು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








