ಕೋವಿಡ್ ಲಸಿಕೆಯನ್ನು ನಾನೇ ಮೊದಲು ಪಡೆಯುತ್ತೇನೆ : ಸುಧಾಕರ್
ಬೆಂಗಳೂರು : ರಾಜ್ಯದಲ್ಲಿ ಮೊದಲು ನಾನೇ ಕೋವಿಡ್ ಲಸಿಕೆಯನ್ನು ಪಡೆಯುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೋವಿಡ್ ಲಸಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಕುರಿತು ಸೋಮವಾರ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಲಿದೆ.
ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಉಗ್ರರು ಸಾವನ್ನಪ್ಪಿದ್ದು ನಿಜ : ಸತ್ಯ ಒಪ್ಪಿಕೊಂಡ ಪಾಕ್..!
ಅದರಲ್ಲಿ ಯಾರಿಗೆ ಹೇಗೆ ಯಾವಾಗ ಲಸಿಕೆ ನೀಡಬೇಕು ಎಂಬ ಅಂಶವನ್ನು ತಿಳಿಸಲಾಗಿರುತ್ತದೆ.
ಜನಪ್ರತಿನಿಧಿಗಳು ಪಡೆಯಬಹುದು ಎಂಬ ಅವಕಾಶವಿದ್ದರೆ ನಾನೇ ಮೊದಲ ಲಸಿಕೆ ಪಡೆದು ಆರೋಗ್ಯ ಕಾರ್ಯಕರ್ತರ, ಜನಸಾಮಾನ್ಯರ ಆತ್ಮವಿಶ್ವಾಸ ಹೆಚ್ಚಿಸುತ್ತೇನೆ. ಲಸಿಕೆ ಕುರಿತು ಯಾವುದೇ ಅನುಮಾನವಿಲ್ಲ, ಯಾವುದೇ ಆತಂಕವೂ ಇಲ್ಲ ಎಂದರು.
ಇನ್ನು ಇದೇ ವೇಳೆ ಮೊದಲ ಹಂತದಲ್ಲಿ ರಾಜ್ಯದ ಪಾಲಿಗೆ ಸಿಗಲಿರುವ ಕೊರೊನಾ ಲಸಿಕೆಯನ್ನು ಸಂಗ್ರಹಿಸಲು ನಗರದ ಆನಂದ್ ರಾವ್ ವೃತ್ತದ ಆರೋಗ್ಯ ಇಲಾಖೆ ಹಳೇ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ ಅವರು,
ಬೆಳಗಾವಿ ಹೊರತು ಪಡಿಸಿ ಬೆಂಗಳೂರು ವಿಭಾಗದ ಜಿಲ್ಲೆಗಳಿಗೆ ವಿತರಣೆಯಾಗುವ 11 ಲಕ್ಷ ಡೋಸ್ ಲಸಿಕೆಯ ಸಂಗ್ರಹಿಸಲಾಗುತ್ತದೆ. ಬೃಹತ್ ವಾಕ್ ಇನ್ ಕೂಲರ್ ವ್ಯವಸ್ಥೆ ಮಾಡಲಾಗಿದೆ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









