ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಅವರು ಮದುವೆ ಸಂಭ್ರಮದಲ್ಲಿದ್ದಾರೆ. ಏಪ್ರಿಲ್ 17 ರಂದು ರೇವತಿಯೊಂದಿಗೆ ನಿಖಿಲ್ ಸಪ್ತಪದಿ ತುಳಿಯಲಿದ್ದು, ಅದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ಆರಂಭಗೊಂಡಿವೆ. ಈ ಮಧ್ಯೆ ತಮ್ಮ ಭಾವಿ ಪತ್ನಿ ರೇವತಿ ಜೊತೆಗೆ ಕೈ-ಕೈ ಹಿಡಿದುಕೊಂಡು ತೆಗೆಸಿಕೊಂಡಿರುವ ಫೋಟೋವನ್ನು ನಿಖಿಲ್ ಅವರು ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ “ಜಸ್ಟ್ ನನ್ನ ಕೈ ಹಿಡಿದುಕೋ, ನಾನು ಯಾವತ್ತೂ ನಿನ್ನ ಕೈ ಬಿಡಲ್ಲ” ಎಂದು ಬರೆದು ಹೃದಯದ ಚಿಹ್ನೆ ಹಾಕಿದ್ದಾರೆ.
https://www.instagram.com/p/B9bJjVBpfVl/








