ನಾಳೆಯೇ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ: ಸಿ.ಎಂ ಇಬ್ರಾಹಿಂ Saaksha Tv
ಹುಬ್ಬಳ್ಳಿ: ನಾನು ಕಾಂಗ್ರೆಸ್ ಪಕ್ಷದಿಂದ ಹೊರ ಬಂದಿದ್ದೇನೆ.ಮತ್ತೆ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಎಂಎಲ್‌ಸಿ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ನಾನು ವಿಷಕಂಠನಿದ್ದಂತೆ ಎಲ್ಲವೂ ನುಂಗಿಕೊಂಡಿದ್ದೆ. ನನ್ನ ಶಾಪ ತುಂಬಾ ಕೆಟ್ಟದ್ದು, ಅದು ಇವಾಗ ತಟ್ಟುತ್ತಿದೆ. ಇನ್ನು ನನ್ನನ್ನು ಎಂಎಲ್‌ಸಿ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ನಾಳೆಯೇ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧಿಸಲಿ ಯಾರು ಗೆಲ್ಲುತ್ತಾರೆಂದು ನೋಡೋಣ. ಅಲ್ಪಸಂಖ್ಯಾತ ಲಿಂಗಾಯತರು, ಗೌಡ ಅಲ್ಪಸಂಖ್ಯಾತರು ಎಂದು ಅಹಿಂದ ಮಾಡಿಲ್ಲವೇ ಅವರು ಎಂದು ಕಣ್ಣೀರು ಹಾಕಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
ಇನ್ನು ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧವೂ ಕಿಡಿಕಾರಿದ ಇಬ್ರಾಹಿಂ, “ಡಿಕೆಶಿ ಬಹಳ ದೊಡ್ಡವರು. ಅವರು ನಮ್ಮಂತಹವರನ್ನೆಲ್ಲಾ ಏಕೆ ಮಾತನಾಡಿಸುತ್ತಾರೆ. 6 ತಿಂಗಳ ಹಿಂದೆ ಎಲ್ಲವೂ ಸರಿ ಮಾಡುವುದಾಗಿ ಹೇಳಿದ್ದರು. ಆದರೆ ಈವರೆಗೆ ಏನೂ ಆಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.