ನಾನು ಹಿಜಾಬ್ ಧರಿಸಿಯೇ ಅಸೆಂಬ್ಲಿಯಲ್ಲಿ ಕೂಡುತ್ತೇನೆ: ಖನೀಜ್ ಫಾತಿಮಾ Saaksha Tv
ಕಲಬುರಗಿ :ನಾನು ಹಿಜಾಬ್ ಧರಿಸಿಯೇ ಅಸೆಂಬ್ಲಿಯಲ್ಲಿ ಕೂಡುತ್ತೇನೆ, ಯಾರಿಗೆ ತಾಕತ್ತಿದೆ ಅವರು ಬಂದು ತಡೆಯಲಿ ಎಂದು ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಹೇಳಿದ್ದಾರೆ.
ಹಿಜಾಬ್ ಬೆಂಬಲಿಸಿ ನಗರದಲ್ಲಿಂದು ಶಾಸಕಿ ಖನೀಜ್ ಫಾತೀಮಾ ಅವರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಹಿಜಾಬ್ ನಮ್ಮ ಹಕ್ಕು, ಗುಂಡಾಗಿರಿ ನಡೆಯೋದಿಲ್ಲ, ನ್ಯಾಯ ಬೇಕು’ ಅಂತಾ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಸಹ ಪಾಲ್ಗೊಂಡಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಖನೀಜ್ ಫಾತೀಮಾ, ಹಿಜಾಬ್ ನಮ್ಮ ಹಕ್ಕು, ಯಾವುದೇ ಕಾರಣಕ್ಕೂ ನಾವು ಬುರ್ಖಾ ಹಾಕಿಕೊಳ್ಳುವುದನ್ನು ಬಿಡುವುದಿಲ್ಲ. ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ನಾನು ಸಹ ಅಸೆಂಬ್ಲಿಯಲ್ಲಿ ಹಿಜಾಬ್ ಧರಿಸಿಯೇ ಕುಳಿತುಕೊಳ್ಳುತ್ತೇನೆ. ಧೈರ್ಯ ಇದ್ದವರು ನನ್ನ ತಡೆಯಲಿ ಎಂದು ಆಕ್ರೋಶ ಹೊರಹಾಕಿದರು.
ಹಿಜಾಬ್ ಧರಿಸುವುದು ಮುಸ್ಲಿಂ ಸಮುದಾಯದವರಿಗೆ ಸಂವಿಧಾನ ನೀಡಿದ ಹಕ್ಕಾಗಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹೊಸ ಕಾನೂನುಗಳ ಜಾರಿ ತರಲು ಹೊರಟಿದೆ. ಇದನ್ನು ಯಾವುದೇ ಕಾರಣಕ್ಕೂ ನಾವು ಒಪ್ಪೋದಿಲ್ಲ ಎಂದು ಕಾಂಗ್ರೆಸ್ ಶಾಸಕಿ ಕಿಡಿಕಾರಿದ್ದಾರೆ.









