IBPS 2022 – IBPS ನಿಂದ 8081 RRB ಹುದ್ದೆಗಳಿಗೆ ನೇಮಕಾತಿ ಅಹ್ವಾನ…..
ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನಿಂದ ಸ್ಕೇಲ್-I, II ಮತ್ತು III ಅಧಿಕಾರಿಗಳು ಮತ್ತು ಕಚೇರಿ ಸಹಾಯಕರ ನೇಮಕಾತಿಗಾಗಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (RRB) ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ.
ಅಧಿಕೃತ ವೆಬ್‌ಸೈಟ್-www.ibps.in ಮೂಲಕ ಇಂದು (ಜೂನ್ 7) 8081 ಪೋಸ್ಟ್‌ಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
IBPS RRB ನೇಮಕಾತಿ 2022 ಹುದ್ದೆಯ ವಿವರಗಳು
IBPS RRB ಕಚೇರಿ ಸಹಾಯಕ- 4483 ಹುದ್ದೆಗಳು
IBPS RRB ಆಫೀಸರ್ ಸ್ಕೇಲ್ I- 2676 ಹುದ್ದೆಗಳು
IBPS RRB ಆಫೀಸರ್ ಸ್ಕೇಲ್ II- 842 ಹುದ್ದೆಗಳು
IBPS RRB ಆಫೀಸರ್ ಸ್ಕೇಲ್ III- 80 ಹುದ್ದೆಗಳು
ಶೈಕ್ಷಣಿಕ ಅರ್ಹತೆ – ಆನ್‌ಲೈನ್ ನೋಂದಣಿಯ ಕೊನೆಯ ದಿನಾಂಕದಂದು ಅಂದರೆ 27.06.2022 ದಿನಾಂಕದ ಪ್ರಕಾರ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಂಬಂಧಿತ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಅಗತ್ಯವಾದ ಅನುಭವವನ್ನ ಪಡೆದಿರಬೇಕು.
ವಯೋಮಾನ್ಯತೆ (01.06.2022 ರಂತೆ)
ಆಫೀಸರ್ ಸ್ಕೇಲ್- III (ಸೀನಿಯರ್ ಮ್ಯಾನೇಜರ್)- 21-40 ವರ್ಷಗಳು
ಆಫೀಸರ್ ಸ್ಕೇಲ್- II (ಮ್ಯಾನೇಜರ್)- 21-32 ವರ್ಷಗಳು
ಆಫೀಸರ್ ಸ್ಕೇಲ್- I (ಅಸಿಸ್ಟೆಂಟ್ ಮ್ಯಾನೇಜರ್)- 18-30 ವರ್ಷಗಳು
ಕಚೇರಿ ಸಹಾಯಕ (ವಿವಿಧೋದ್ದೇಶ)- 18-28 ವರ್ಷಗಳು
ಅರ್ಜಿ ಶುಲ್ಕ/ಇಟಿಮೇಷನ್ ಶುಲ್ಕಗಳು:
SC/ST/PWBD ಅಭ್ಯರ್ಥಿಗಳಿಗೆ ರೂ 175 ಮತ್ತು ಇತರ ಎಲ್ಲಾ ಅಭ್ಯರ್ಥಿಗಳಿಗೆ ರೂ 850








