ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ 462 ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಅಹ್ವಾನ…
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI) ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಮತ್ತು ಅದರ ಸಂಸ್ಥೆಗಳ ಪರವಾಗಿ 462 ಸಹಾಯಕರ(Assistant) ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸುತ್ತಿದೆ.
ಆನ್ಲೈನ್ ಅರ್ಜಿಯ ಸಲ್ಲಿಕೆಯು ಮೇ 7 ರಂದು ಪ್ರಾರಂಭವಾಗುತ್ತದೆ ಮತ್ತು ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ ಜೂನ್ 1, 2022 ಆಗಿದೆ.
ICAR-IARI ಸಹಾಯಕ ನೇಮಕಾತಿ 2022 ಖಾಲಿ ಹುದ್ದೆಗಳು
ICAR ಪ್ರಧಾನ ಕಛೇರಿ- 71 ಹುದ್ದೆಗಳು
ICAR ಅಂಗ ಸಂಸ್ಥೆಗಳು – 391 ಹುದ್ದೆಗಳು
ಖಾಲಿ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಹೆಚ್ಚಾಗುವ ಅಥವಾ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಅರ್ಹತೆಯ ಮಾನದಂಡ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ
ಸಂಬಳ:
ಸಹಾಯಕ Assistant (ICAR ಪ್ರಧಾನ ಕಛೇರಿ) ರೂ 44900 (ಹಂತ 7)
ಸಹಾಯಕ Assistant (ICAR ಅಂಗ ಸಂಸ್ಥೆಗಳು) ರೂ 35400 (ಹಂತ 6)
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-05-2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-06-2022
ವಯಸ್ಸಿನ ಮಿತಿ: (ಜೂನ್ 1, 2022 ರಂತೆ)
ಕನಿಷ್ಠ: 20 ವರ್ಷಗಳು
ಗರಿಷ್ಠ: 30 ವರ್ಷಗಳು
ನಿಯಮಾನುಸಾರ ಕಾಯ್ದಿರಿಸಿದ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಅರ್ಜಿ ನಮೂನೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ನವೀಕರಣಗಳು ಸೇರಿದಂತೆ ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿ ನೇಮಕಾತಿ ಸೆಲ್ ಟ್ಯಾಬ್ಗೆ ಭೇಟಿ ನೀಡಬಹುದು: www.iari.res.in. ಗೆ ಬೇಟಿ ನೀಡಿ..