ಐಸಿಸಿ ದಶಕದ ಏಕದಿನ -ಟಿ-20 ತಂಡಗಳಿಗೆ ಧೋನಿಯೇ ಸಾರಥಿ.. ಟೆಸ್ಟ್ ಕ್ರಿಕೆಟ್ ಗೆ ಕೊಹ್ಲಿ ಕ್ಯಾಪ್ಟನ್..!
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಕಿರೀಟಕ್ಕೆ ಮತ್ತೆರಡು ಗರಿಗಳು ಸೇರಿಕೊಂಡಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ದಶಕದ ಟೆಸ್ಟ್, ಏಕದಿನ ಮತ್ತು ಟಿ-ಟ್ವೆಂಟಿ ತಂಡಗಳನ್ನು ಆಯ್ಕೆ ಮಾಡಿದೆ.
ಏಕದಿನ ಮತ್ತು ಟಿ-ಟ್ವೆಂಟಿ ತಂಡಗಳಿಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೊನಿಯವರು ನಾಯಕನಾಗಿದ್ದಾರೆ. ಅದೇ ರೀತಿ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿಯವರನ್ನು ನಾಯಕನಾಗಿ ಆಯ್ಕೆ ಮಾಡಿದೆ.
ಏಕದಿನ ಮತ್ತು ಟಿ-ಟ್ವೆಂಟಿ ತಂಡಗಳಲ್ಲಿ ಭಾರತೀಯ ಆಟಗಾರರು ಪಾರುಪತ್ಯ ಸ್ಥಾಪಿಸಿದ್ದಾರೆ. ಈ ತಂಡಗಳಲ್ಲಿ ಭಾರತದ ನಾಲ್ವರು ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇನ್ನು ಟೆಸ್ಟ್ ತಂಡದಲ್ಲಿ ಇಂಗ್ಲೆಂಡ್ ತಂಡದ ನಾಲ್ವರು ಆಟಗಾರರಿದ್ದಾರೆ. ಅಚ್ಚರಿ ಅಂದ್ರೆ ಮೂರು ಮಾದರಿಯ ದಶಕಗಳ ತಂಡದಲ್ಲಿ ಪಾಕಿಸ್ತಾನದ ಆಟಗಾರರಿಗೆ ಅವಕಾಶವೇ ಇಲ್ಲ.
ಐಸಿಸಿಯ ಈ ಪ್ರತಿಷ್ಠಿತ ಪ್ರಶಸ್ತಿ ವಿತರಣೆಯ ಸಮಯದಲ್ಲಿ ಈ ತಂಡಗಳನ್ನು ಆಯ್ಕೆ ಮಾಡಲಾಗಿದೆ.
ಇನ್ನು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಐಸಿಸಿ ದಶಕದ ಕ್ರಿಕೆಟಿಗ, ಐಸಿಸಿ ಟೆಸ್ಟ್ ಕ್ರಿಕೆಟಿಗ, ಐಸಿಸಿ ಏಕದಿನ ಕ್ರಿಕೆಟಿಗ ಹಾಗೂ ಐಸಿಸಿ ಟಿ-ಟ್ವೆಂಟಿ ಕ್ರಿಕೆಟಿಗ ಪ್ರಶಸ್ತಿಗಳನ್ನು ವಿರಾಟ್ ಕೊಹ್ಲಿ ಬಾಚಿಕೊಂಡಿದ್ದಾರೆ.
ಐಸಿಸಿ ದಶಕದ ಟೆಸ್ಟ್ ತಂಡ
ವಿರಾಟ್ ಕೊಹ್ಲಿ (ನಾಯಕ), ಆಲಿಸ್ಟರ್ ಕುಕ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಕುಮಾರ ಸಂಗಕ್ಕರ, ಬೆನ್ ಸ್ಟ್ರೋಕ್ಸ್, ಆರ್. ಅಶ್ವಿನ್, ಡೇಲ್ ಸ್ಟೈನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.
ಐಸಿಸಿ ದಶಕದ ಏಕದಿನ ತಂಡ
ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್. ಶಕೀಬ್ ಉಲ್ ಹಸನ್, ಬೆನ್ ಸ್ಟ್ರೋಕ್ಸ್, ಮಿಟ್ಚೆಲ್ ಸ್ಟಾರ್ಕ್, ಟ್ರೆಂಟ್ ಬೋಲ್ಟ್, ಇಮ್ರಾನ್ ತಾಹೀರ್, ಲಸಿತ್ ಮಾಲಿಂಗಾ.
ಐಸಿಸಿ ದಶಕದ ಟಿ-ಟ್ವೆಂಟಿ ತಂಡ
ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ಕ್ರಿಸ್ ಗೇಲ್, ಆರೋನ್ ಫಿಂಚ್, ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಗ್ಲೇನ್ ಮ್ಯಾಕ್ಸ್ ವೆಲ್, ಕಿರಾನ್ ಪೊಲಾರ್ಡ್, ರಶೀದ್ ಖಾನ್, ಜಸ್ಪ್ರಿತ್ ಬೂಮ್ರಾ, ಲಸಿತ್ ಮಾಲಿಂಗಾ.