ವಿಮೆನ್ಸ್ ICC ODI Ranking ಪಟ್ಟಿ ಪ್ರಕಟ
ಐಸಿಸಿ ಮಹಿಳಾ ಏಕದಿನ ಬ್ಯಾಟರ್ ಗಳ ರ್ಯಾಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತದ ನಾಯಕ ಮಿಥಾಲಿ ರಾಜ್ ಎರಡನೇ ಸ್ಥಾನದಲ್ಲಿದ್ದಾರೆ. ಸ್ಮೃತಿ ಮಂಧಾನ ಎಂಟನೇ ಸ್ಥಾನದಲ್ಲಿದ್ದಾರೆ. ಅಲ್ಲದೇ ಭಾರತದ ಸ್ಟಾರ್ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ 20ನೇ ಸ್ಥಾನದಲ್ಲಿದ್ದಾರೆ.
ಹರ್ಮನ್ಪ್ರೀತ್ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ 66 ಎಸೆತಗಳಲ್ಲಿ 63 ರನ್ ಗಳಿಸಿ ಫಾರ್ಮ್ಗೆ ಮರಳಿದರು. ಈ ಇನ್ನಿಂಗ್ಸ್ನೊಂದಿಗೆ ಭಾರತಕ್ಕೆ ಗೆಲುವು ತಂದುಕೊಡುವ ಮೂಲಕ ಕ್ಲೀನ್ ಸ್ವೀಪ್ ಸಾಧನೆಯಿಂದ ಬಚಾವು ಮಾಡಿದರು. ಹೀಗಾಗಿ ಅವರು ಟಾಪ್ 20 ರಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಆಲ್ರೌಂಡರ್ ದೀಪ್ತಿ ಶರ್ಮಾ ಬೌಲರ್ಗಳ ರ್ಯಾಂಕಿಂಗ್ನಲ್ಲಿ 12ನೇ ಸ್ಥಾನಕ್ಕೇರಿದ್ದಾರೆ. ಆಲ್ ರೌಂಡರ್ ಗಳ ಶ್ರೇಯಾಂಕದಲ್ಲಿ ಅವರು ಒಂದು ಸ್ಥಾನ ಕುಸಿದು ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಬೌಲರ್ಗಳ ಶ್ರೇಯಾಂಕದಲ್ಲಿ ಜೂಲನ್ ಗೋಸ್ವಾಮಿ ನಾಲ್ಕನೇ ಸ್ಥಾನದ್ದಾರೆ.
ಒಟ್ಟಾರೆ ಬ್ಯಾಟಿಂಗ್ನಲ್ಲಿ ಅಲಿಸ್ಸಾ ಹೀಲಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಜೆಸ್ ಜೊನಾಸೆನ್ ಬೌಲರ್ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮತ್ತು ಆಲ್ ರೌಂಡರ್ಗಳಲ್ಲಿ ಎಲಿಸ್ ಪೆರ್ರಿ ಅಗ್ರಸ್ಥಾನದಲ್ಲಿದ್ದಾರೆ. ICC ODI Women’s Ranking list









