ICC Ranking : ಪಾಕ್ ಆಟಗಾರರ ಹವಾ..!
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ಬಿಡುಗಡೆ ಮಾಡಿದ ಏಕದಿನ ರ್ಯಾಂಕಿಂಗ್ನಲ್ಲಿ ಪಾಕಿಸ್ತಾನಿ ಆಟಗಾರರ ಹವಾ ಮುಂದುವರೆದಿದೆ. ಆಸೀಸ್ ವಿರುದ್ಧ ಅಬ್ಬರಿಸಿದ ಬಾಬರ್ ಅಜಮ್, ಇಮಾಮ್-ಉಲ್-ಹಕ್ ಮತ್ತು ಶಾಹೀನ್ ಅಫ್ರಿದಿ ಏಕದಿನ ರ್ಯಾಕಿಂಗ್ ನಲ್ಲಿ ಸ್ಥಾನ ಪಡೆದಿದ್ದಾರೆ.
ಆಸೀಸ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ 298 ರನ್ ಗಳಿಸಿದ ಇಮಾಮ್-ಉಲ್-ಹಕ್ (103, 106, 89 ನಾಟೌಟ್) ಏಳು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ (795 ರೇಟಿಂಗ್ ಪಾಯಿಂಟ್) ಬಂದಿದ್ದಾರೆ. ಅದೇ ಸೀರಿಸ್ ನಲ್ಲಿ 3 ಇನ್ನಿಂಗ್ಸ್ಗಳಲ್ಲಿ 276 ರನ್ ಗಳಿಸಿದ ಬಾಬರ್ ಅಜಮ್ 891 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ 2 ಪಂದ್ಯಗಳಲ್ಲಿ 6 ವಿಕೆಟ್ ಕಬಳಿಸಿರುವ ಶಾಹಿನ್ ಅಫ್ರಿದಿ ಬೌಲಿಂಗ್ ವಿಭಾಗದಲ್ಲಿ ಏಳನೇ ಸ್ಥಾನಕ್ಕೆ (671 ಅಂಕ) ಬಂದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್ ಮನ್ ಗಳಾದ ವಿರಾಟ್ ಕೊಹ್ಲಿ (811) ಮತ್ತು ರೋಹಿತ್ ಶರ್ಮಾ (791) ಕ್ರಮವಾಗಿ 2 ಮತ್ತು 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇಂಗ್ಲೆಂಡ್ ಬೌಲರ್ ಕ್ರಿಸ್ ವೋಕ್ಸ್, ಆಸೀಸ್ ವೇಗಿ ಜೋಶ್ ಹ್ಯಾಜಲ್ವುಡ್, ನ್ಯೂಜಿಲೆಂಡ್ನ ಮ್ಯಾಟ್ ಹೆನ್ರಿ ಮತ್ತು ಬಾಂಗ್ಲಾ ಸ್ಪಿನ್ನರ್ ಮುಜಿಬ್ ಉರ್ ರೆಹಮಾನ್ ಕ್ರಮವಾಗಿ 2 ಮತ್ತು 5 ನೇ ಸ್ಥಾನದಲ್ಲಿದ್ದಾರೆ. ಬೂಮ್ರಾ ಆರನೇ ಸ್ಥಾನದಲ್ಲಿದ್ದಾರೆ.
ಮತ್ತೊಂದೆಡೆ, ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಯಾವುದೇ ಮಹತ್ವದ ಬದಲಾವಣೆಯಿಲ್ಲದಿದ್ದರೂ, ಟೀಂ ಇಂಡಿಯಾ ವೇಗಿ ಬುಮ್ರಾ 830 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಪಾಕಿಸ್ತಾನದ ಸ್ಪೀಡ್ ಗನ್ ಶಾಹೀನ್ ಅಫ್ರಿದಿ (827) ನಾಲ್ಕನೇ ಸ್ಥಾನದ್ದಲಿದ್ದಾರೆ. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ 901 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ICC Rankings shaheen-afridi-big-gains








