T-20 | ಕ್ರಿಕೆಟ್ ನ ಕಿಂಗ್ ಆಗುವತ್ತ ರಾಹುಲ್..!
ಟೀಂ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನದತ್ತ ಮುನ್ನುಗ್ಗುತ್ತಿದ್ದಾರೆ. ICC t-20 Ranking K L rahul saaksha tv
ಇತ್ತೀಚಿನ ಬಿಡುಗಡೆಯಾದ ಶ್ರೇಯಾಂಕದಲ್ಲಿ ರಾಹುಲ್ ಒಂದು ಸ್ಥಾನ ಜಿಗಿದು, ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ.
ಸದ್ಯ ರಾಹುಲ್ ಖಾತೆಯಲ್ಲಿ 729 ರೇಟಿಂಗ್ ಅಂಕಗಳಿವೆ. ವಿಂಡೀಸ್ ವಿರುದ್ಧ ಮುಂಬರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಮಿಂಚಿದ್ರೆ ಕೆಎಲ್ ರಾಹುಲ್ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರುವುದು ಖಚಿತವಾಗಿದೆ.
ಏತನ್ಮಧ್ಯೆ, ಟೀಂ ಇಂಡಿಯಾದ ಹಾಲಿ ಮತ್ತು ಮಾಜಿ ನಾಯಕರಾದ ರೋಹಿತ್ ಶರ್ಮಾ (11) ಮತ್ತು ವಿರಾಟ್ ಕೊಹ್ಲಿ (10) ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಟೀಂ ಇಂಡಿಯಾ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ 20ನೇ ಸ್ಥಾನದಲ್ಲಿದ್ದರೆ, ಬೌಲರ್ ಗಳ ಪಟ್ಟಿಯಲ್ಲಿ ಜಸ್ ಪ್ರೀತ್ ಬುಮ್ರಾ 26ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಶ್ರೀಲಂಕಾದ ಸ್ಪಿನ್ನರ್ ಹಸರಂಗ, ದಕ್ಷಿಣ ಆಫ್ರಿಕಾದ ಬೌಲರ್ ಶಾನ್ಸಿ ಮತ್ತು ಇಂಗ್ಲೆಂಡ್ ಬೌಲರ್ ಆದಿಲ್ ರಶೀದ್ ಕ್ರಮವಾಗಿ ಒಂದರಿಂದ ಮೂರರಲ್ಲಿ ಮುಂದುವರಿದಿದ್ದಾರೆ.
ಆಲ್‌ರೌಂಡರ್‌ಗಳ ಶ್ರೇಯಾಂಕಕ್ಕೆ ಸಂಬಂಧಿಸಿದಂತೆ, ಅಫ್ಘಾನ್ ಮೊಹಮ್ಮದ್ ನಬಿ ಮತ್ತು ಬಾಂಗ್ಲಾ ಆಲ್‌ರೌಂಡರ್ ಶಕೀಬ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.
ಟಾಪ್ 10 ಆಲ್ ರೌಂಡರ್ ಗಳಲ್ಲಿ ಟೀಂ ಇಂಡಿಯಾ ಆಟಗಾರರು ಯಾರೂ ಇಲ್ಲ.








