ಟಿ20 ವಿಶ್ವಕಪ್ನಲ್ಲಿ ದುಡ್ಡಿನ ಮಾತು, ಚಾಂಪಿಯನ್ ಆದವರಿಗೆ ಸಿಗುವ ಹಣವೆಷ್ಟು ಗೊತ್ತಾ..?
ಕ್ರಿಕೆಟ್ ಅಂದರೆ ದುಡ್ಡು… ಕ್ರಿಕೆಟಿಗರು ಅಂದರೆ ಕೋಟ್ಯಾಧಿಪತಿಗಳು. ಗೆದ್ದರೂ ದುಡ್ಡು, ಸೋತರೂ ದುಡ್ಡು… ಅಟ್ ಲೀಸ್ಟ್ ತಂಡದಲ್ಲಿ ಸ್ಥಾನಗಳಿಸಿದರೂ ದುಡ್ಡು ಅನ್ನುವ ಮಾತಿದೆ. ಐಪಿಎಲ್ ನಂತ ಟೂರ್ನಿಗಳಲ್ಲಿ ಚಾಂಪಿಯನ್ ಆದ ತಂಡ 20 ಕೋಟಿ ರೂಪಾಯಿ ಬಹುಮಾನ ಗಳಿಸಿತ್ತು. ರನ್ನರ್ ಅಪ್ ತಂಡ 12 ಕೋಟಿ ಜೇಬಿಗಿಳಿಸಿಕೊಂಡಿತ್ತು. ಈಗ ಟಿ20 ವಿಶ್ವಕಪ್ ಮಾತು. ಚುಟುಕು ಕ್ರಿಕೆಟ್ ನ ಮಹಾಸಮರ ಗೆದ್ದವರು ಎಷ್ಟು ದುಡ್ಡು ಜೇಬಿಗಿಳಿಸಿಕೊಳ್ಳುತ್ತಾರೆ ಅನ್ನುವ ಕುತೂಹಲವಿದೆ. ನೆನಪಿಡಿ ಟಿ20 ವಿಶ್ವಕಪ್ ನಲ್ಲಿ ಗೆದ್ದ ಹಣಕ್ಕಿಂತ ಚಾಂಪಿಯನ್ ಅನ್ನುವ ಪಟ್ಟವೇ ದೊಡ್ಡದು.
7ನೇ ಆವೃತ್ತಿಯ ಟಿ20 ವಿಶ್ವಕಪ್ ಶುರುವಾಗಿದೆ. ಓಮಾನ್ನಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿದ್ದು, ಅಕ್ಟೋಬರ್ 23 ರಿಂದ ಸೂಪರ್ 12 ಹಂತದ ಪಂದ್ಯಗಳು ಶುರುವಾಗಿವೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಿಗಾಗಿ ಐಸಿಸಿ ಸುಮಾರು 42 ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ 42 ಕೋಟಿ ರೂಪಾಯಿ ಟೂರ್ನಿಯಲ್ಲಿ ಪಾಲ್ಗೊಳ್ಳುವ 16 ತಂಡಗಳಿಗೆ ವಿವಿಧ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗುತ್ತದೆ. ಅರ್ಹತಾ ಸುತ್ತಿನಿಂದ ಫೈನಲ್ ಪಂದ್ಯವಾಡಿದ ತಂಡಗಳಿಗೆ ಇಂತಿಷ್ಟು ಮೊತ್ತ ಸಿಗಲಿದೆ.
ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡಕ್ಕೆ ಸುಮಾರು 12 ಕೋಟಿ ರೂಪಾಯಿ ಈ ಮೊತ್ತ ಐಪಿಎಲ್ ರನ್ನರ್ ಅಪ್ ತಂಡ ಪಡೆದ ಮೊತ್ತಕ್ಕೆ ಸಮವಾಗಿದೆ. ಫೈನಲ್ನಲ್ಲಿ ಸೋತ ತಂಡ ಸುಮಾರು 6 ಕೋಟಿ ರೂಪಾಯಿ ಪಡೆಯಲಿದೆ.
ಸೆಮಿಫೈನಲ್ ಪ್ರವೇಶಿಸಿ ಸೋತ ಎರಡು ತಂಡಗಳಿಗೆ ತಲಾ 3 ಕೋಟಿ ರೂಪಾಯಿ ಸಿಗಲಿದೆ. ಸೂಪರ್-12 ಹಂತದಲ್ಲಿ ಆಡಿ ಹೊರಬೀಳುವ 8 ತಂಡಗಳಿಗೆ ತಲಾ 53 ಲಕ್ಷ ರೂ. ಸಿಗಲಿದೆ. ಅರ್ಹತಾ ಸುತ್ತಿನಲ್ಲೇ ಹೊರಬೀಳುವ 4 ತಂಡಗಳಿಗೆ ತಲಾ 30 ಲಕ್ಷ ರೂ. ನೀಡಲಾಗುತ್ತದೆ.
ಟೀಂ ಇಂಡಿಯಾದ ಮುಂದಿನ ಏಕದಿನ ಸರಣಿಗಳು – 2027ರ ವಿಶ್ವಕಪ್ಗೂ ಮುನ್ನ 9 ಸರಣಿಗಳು!
2027ರ ಏಕದಿನ ವಿಶ್ವಕಪ್ ಆರಂಭವಾಗುವ ಮೊದಲು, ಟೀಂ ಇಂಡಿಯಾ ಒಟ್ಟು 9 ಏಕದಿನ ಕ್ರಿಕೆಟ್ ಸರಣಿಗಳನ್ನು ಆಡಲಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಭಾರತವು 2025 ಮತ್ತು 2026ರಲ್ಲಿ...