ಟೆಸ್ಟ್ ರ್ಯಾಂಕಿಂಗ್ : ಗಬ್ಬಾದಲ್ಲಿ ಘರ್ಜಿಸಿದ ಟೀಂ ಇಂಡಿಯಾಗೆ 2ನೇ ಸ್ಥಾನ
ಬ್ರಿಸ್ಬೇನ್ : ಗಬ್ಬಾ ಅಂಗಳದಲ್ಲಿ ಆಸೀಸ್ ವಿರುದ್ಧ ಟೀ ಇಂಡಿಯಾ ಐತಿಹಾಸಿಕ ಜಯ ಸಾಧಿಸಿದೆ.
31 ವರ್ಷಗಳಲ್ಲಿ ಬ್ರಿಸ್ಬೇನ್ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿರುವುದು ಇದೇ ಮೊದಲು.
ಯಂಗ್ ಇಂಡಿಯಾ ಸಾಧನೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಮಧ್ಯೆ ಐಸಿಸಿ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಭಾರತ 2ನೇ ಸ್ಥಾನಕ್ಕೇರಿದೆ.

ನೂತನ ಟೆಸ್ಟ್ ರ್ಯಾಂಕಿಂಗ್ ನಲ್ಲಿ 118. 44 ಅಂಕಗಳೊಂದಿಗೆ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದೆ.
ಭಾರತ ತಂಡ 117.65 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ತಂಡ 113 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದೆ.
ಇನ್ನು 106 ಅಂಕಗಳೊಂದಿಗೆ ಇಂಗ್ಲೆಂಡ್ ತಂಡ 4ನೇ ಸ್ಥಾನದಲ್ಲಿದ್ದರೇ 5ನೇ ಸ್ಥಾನದಲ್ಲಿ 96 ಅಂಕ ಪಡೆದು ದಕ್ಷಿಣ ಆಫ್ರಿಕಾ,
6 ಸ್ಥಾನದಲ್ಲಿ ಶ್ರೀಲಂಕಾ (86), 7ರಲ್ಲಿ ಪಾಕಿಸ್ತಾನ(82), 8ರಲ್ಲಿ ವೆಸ್ಟ್ ಇಂಡೀಸ್ (77) ಹಾಗೂ 9ರಲ್ಲಿ ಬಾಂಗ್ಲಾದೇಶ(55) ಇದೆ.
ಇನ್ನ ಬಾರ್ಡರ್ – ಗವಾಸ್ಕರ್ ಟ್ರೋಪಿಯ ನಿರ್ಣಾಯ ಅಂತಿಮ ಪಂದ್ಯದಲ್ಲಿ ಆಸೀಸ್ ನೀಡಿದ 328 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ ತಂಡ ರಿಷಭ್ ಪಂತ್, ಪೂಜಾರ ಮತ್ತು ಶುಭಮನ್ ಗಿಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮೂರು ವಿಕೆಟ್ ಗಳ ಜಯ ಸಾಧಿಸಿತು. ರಿಷಬ್ ಪಂತ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.








