icc-womens-world-cup | ಭಾರತ ಮಹಿಳಾ ತಂಡಕ್ಕೆ 261 ಟಾರ್ಗೆಟ್
ನ್ಯೂಜಿಲೆಂಡ್ ಮಹಿಳಾ ತಂಡ 9ಕ್ಕೆ 260 ರನ್
ಭಾರತದ ಪರ ಪೂಜಾ ವಸ್ತ್ರಕರ್ ಗೆ 4 ವಿಕೆಟ್
ಅಮೆಲಿಯಾ ಕೆರ್ 50 ರನ್, ಸ್ಯಾಟರ್ಥ್‌ವೈಟ್ 75 ರನ್
2022ರ ಮಹಿಳಾ ಏಕದಿನ ವಿಶ್ವಕಪ್ ಭಾಗವಾಗಿ ಹ್ಯಾಮಿಲ್ಟನ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ಮಹಿಳಾ ತಂಡ, ಭಾರತಕ್ಕೆ 261 ರನ್ ಗಳ ಗುರಿಯನ್ನ ನೀಡಿದೆ. ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತ್ತು.
ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮಹಿಳಾ ತಂಡ ನಿಗದಿತ 50ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 260 ರನ್ ಗಳಿಸಿದೆ. ನ್ಯೂಜಿಲೆಂಡ್ ಪರ ಅಮೆಲಿಯಾ ಕೆರ್ 50 ರನ್, ಸ್ಯಾಟರ್ಥ್‌ವೈಟ್ 75 ರನ್, ಕೇಟಿ ಮಾರ್ಟಿನ್ 41 ರನ್ ಗಳಿಸಿದ್ದಾರೆ.
ಭಾರತ ಮಹಿಳಾ ತಂಡದ ಪರ ಪೂಜಾ ವಸ್ತ್ರಕರ್ 34 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದ್ದಾರೆ. ಗಾಯಕ್ವಾಡ್ 46 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ. ಗೋಸ್ವಾಮಿ, ದೀಪ್ತಿ ಶರ್ಮಾ ತಲಾ 1 ವಿಕೆಟ್ ಪಡೆದಿದ್ದಾರೆ.
ಸದ್ಯ 261 ರನ್ ಗುರಿಯನ್ನ ಬೆನ್ನಟ್ಟಿರುವ ಭಾರತ ಮಹಿಳಾ ತಂಡ 2 ವಿಕೆಟ್ ಕಳೆದುಕೊಂಡು 40 ರ ಗಡಿಯಲ್ಲಿದೆ.
icc-womens-world-cup- India Women need 218 runs









