ಬೆಂಗಳೂರು : ಈಗ ವಿಶ್ವದಾದ್ಯಂತ ಕೊರೊನಾ ಸೋಂಕಿನದ್ದೇ ಸದ್ದು. ಎಲ್ಲೆಲ್ಲೂ ಕೊರೊನಾ ಬಗ್ಗೆಯೇ ಚರ್ಚೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ಕೆಲ ಸುದ್ದಿಗಳು ಹರಿದಾಡುತ್ತಿವೆ. ಅವುಗಳಲ್ಲಿ “ಐಸ್ ಕ್ರೀಂ ತಿಂದ್ರೆ ಕೊರೊನಾ ಬರುತ್ತೆ” ಎಂಬ ಸುದ್ದಿ ಭಾರಿ ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.
ಹಾಗಾದ್ರೆ ಐಸ್ ಕ್ರೀಂ ತಿಂದ್ರೆ ನಿಜವಾಗ್ಲೂ ಕೊರೊನಾ ಬರುತ್ತಾ..? ಐಸ್ ಕ್ರೀಂನಿಂದ ದೂರ ಉಳಿದ್ರೆ ಕೊರೊನಾ ಬರಲ್ವಾ..? ಈ ಪ್ರಶ್ನೆಗಳಿಗೆ ಉತ್ತರ ನಾವು ಹೇಳ್ತೇವೆ ನೋಡಿ…
ಅಂದ್ಹಾಗೆ ಈ ತಿಂಗಳ ಮೊದಲ ವಾರದಲ್ಲಿ ಮೇಲಷ್ಯಾದಲ್ಲಿ ವಾಟ್ಸಪ್ ಮೂಲಕ ಹರಿದಾಡುತ್ತಿದ್ದ ಐಸ್ ಕ್ರೀಂ ಸಂದೇಶ ಬೆಂಗಳೂರಿಗೆ ಬಂದು ತಲುಪಿತ್ತು. ಐಸ್ ಕ್ರೀಂ ಪ್ರಿಯರ ಆತಂಕಕ್ಕೆ ಇದು ಕಾರಣವಾಗಿತ್ತು. ಪಿಐಬಿ ಕೊರೊನಾ ಹರಡದಂತೆ ತಡೆಯಲು ಐಸ್ ಕ್ರೀಂನಿಂದ ದೂರವಿರಿ ಎಂಬ ಸಂದೇಶ ಸುಳ್ಳು ಎಂದು ಹೇಳಿತ್ತು. ಈಗ ಯೂನಿಸೆಫ್ ಸಹ ಈ ಕುರಿತು ಸ್ಪಷ್ಟನೆಯನ್ನು ನೀಡಿದೆ. ಭಾರತದಲ್ಲಿನ ಐಸ್ ಕ್ರೀಂ ತಯಾರಕರ ಸಂಘ ತನ್ನ ವೆಬ್ ಸೈಟ್‌ನಲ್ಲಿ ಯೂನಿಸೆಫ್ ಹೇಳಿಕೆಯನ್ನು ಅಪ್ ಲೋಡ್ ಮಾಡಿದ್ದು, ಇದೀಗ ವೈರಲ್ ಆಗುತ್ತಿರುವ ಸಂದೇಶ ಸುಳ್ಳು ಎಂದು ಹೇಳಿದೆ. ಅಲ್ಲದೆ ಐಸ್ ಕ್ರೀಂ ತಿಂದರೆ ಕೊರೊನಾ ಹರಡುತ್ತದೆ ಎಂದು ಹರಿದಾಡುತ್ತಿದ್ದ ಸಂದೇಶವನ್ನು ವೈದ್ಯರು ತಳ್ಳಿ ಹಾಕಿದ್ದಾರೆ. ಸದ್ಯ ಯೂನಿಸೆಫ್ ಹೇಳಿಕೆಯಿಂದ ಬೇಸಿಗೆಯ ಬಿಸಿಯಲ್ಲಿ ಐಸ್ ಕ್ರೀಂ ತಿನ್ನುವವರು, ವ್ಯಾಪಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟಾರೆ ಸಾಮಾಜಿಕ ಜಾಲತಾಣಗಳ ಮೂಲಕ ಬಂದ ಸಂದೇಶವನ್ನು ಇತರರಿಗೆ ಕಳಿಸುವ ಮುನ್ನ ಅವುಗಳ ಸತ್ಯಾಸತ್ಯತೆ ಬಗ್ಗೆ ಒಮ್ಮೆ ಪರಿಶೀಲಿಸಿಕೊಳ್ಳಿ.
ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಮಾಹಿತಿ ಓದಿ
ಭಾರತೀಯರ ಪಾಲಿಗೆ ಚಿನ್ನ ಕೇವಲ ಆಭರಣವಲ್ಲ, ಅದೊಂದು ಭಾವನೆ, ಪರಂಪರೆ ಮತ್ತು ಆಪತ್ಕಾಲದಲ್ಲಿ ಕೈಹಿಡಿಯುವ ಅತಿ ದೊಡ್ಡ ಆಸ್ತಿ. ಮನೆಯಲ್ಲಿ ಒಂದು ಶುಭ ಕಾರ್ಯ ನಡೆಯಲಿ ಅಥವಾ...








