ಕೇಂದ್ರ ವಿಫಲವಾದ್ರೆ ದೆಹಲಿ ಜನತೆಗೆ ರಾಜ್ಯ ಸರ್ಕಾರದಿಂದ ಉಚಿತ ಲಸಿಕೆ : ಕೇಜ್ರಿವಾಲ್
ಜೀವ ಉಳಿಸುವ ಲಸಿಕೆ ಪಡೆಯಲು ಸಾಧ್ಯವಾಗದ ಅನೇಕ ಜನರಿದ್ದಾರೆ, ಹೀಗಾಗಿ ದೇಶದಲ್ಲಿ ಉಚಿತ ವ್ಯಾಕ್ಸಿನೇಷನ್ ಮಾಡಬೇಕೆಂದು ಈಗಾಗಲೇ ದೆಹಲಿ ಸಿಎಂ ಕೇಂದ್ರಕ್ಕೆ ಅರವಿಂದ್ ಕೇಜ್ರಿವಾಲ್ ಅವರು ಮನವಿ ಮಾಡಿದ್ದಾರೆ. ಇದೀಗ ಇದೇ ವಿಚಾರವಾಗಿ ಮಾತನಾಡಿರುವ ಕೇಜ್ರಿವಾಲ್ ಅವರು ಕೇಂದ್ರವು ಏನು ಮಾಡುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಒಂದು ವೇಳೆ ಕೇಂದ್ರವು ಲಸಿಕೆಯನ್ನು ಉಚಿತವಾಗಿ ನೀಡದಿದ್ದರೆ, ನಾವು ಲಸಿಕೆಯನ್ನು ದೆಹಲಿ ಜನರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.
BSP ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ್ರೆ ಎಲ್ರಿಗೂ ಉಚಿತ ಕೊರೊನಾ ಲಸಿಕೆ : ಮಾಯಾವತಿ..!
ಹೌದು ಕೇಂದ್ರ ಮತ್ತು ನಮ್ಮ ವಿಜ್ಞಾನಿಗಳು ಎಲ್ಲಾ ಮಾರ್ಗಸೂಚಿ ಮತ್ತು ಸುರಕ್ಷತೆಗಳನ್ನು ಅನುಸರಿಸಿ ಲಸಿಕೆ ತಂದಿದ್ದಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದ್ದರಿಂದ ಯಾವುದೇ ಅನುಮಾನ ಇರಬಾರದು. ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಲು ಜನರು ಮುಂದೆ ಬರಬೇಕು. ಲಸಿಕೆ ಬಗ್ಗೆ ವದಂತಿಗಳನ್ನು ಹರಡಬಾರದು. ಲಸಿಕೆಯನ್ನು ಮೊದಲು ಆರೋಗ್ಯ ಮತ್ತು ಮುಂಚೂಣಿ ಕಾರ್ಮಿಕರಿಗೆ ನೀಡಲಾಗುವುದು. ಅಲ್ಲದೇ ಈ ಲಸಿಕೆ ಕಳೆದ ಒಂದು ವರ್ಷದಿಂದ ಜನರು ಅನುಭವಿಸಿದ ಕಷ್ಟಗಳಿಗೆ ಪರಿಹಾರ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಲಸಿಕೆಯನ್ನ ಕೇಂದ್ರ ಉಚಿತವಾಗಿ ನೀಡಬೇಕೆಂದು ಕೇಂದ್ರಕ್ಕೆ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








