ಚೀನಾ ಏನನ್ನಾದರೂ ಆಕ್ರಮಿಸಿಕೊಂಡಿದ್ದರೆ ಅದು ತಾಯಿ-ಮಗನ ಹೃದಯ ಹಾಗೂ ಮನಸ್ಸನ್ನು ಮಾತ್ರ : ಸಂಬೀತ್ ಪಾತ್ರ
ಹೊಸದಿಲ್ಲಿ, ಜೂನ್ 24: ಸೇನೆಯ ಬಗ್ಗೆ ಸುಳ್ಳು ಹೇಳುವುದು ಕಾಂಗ್ರೆಸ್ ನೀತಿಯಾಗಿದೆ ಎಂದು ಆರೋಪಿಸಿ ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಮಂಗಳವಾರ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಟೀಕಿಸಿದರು. ಕಾಂಗ್ರೆಸ್ ಮುಖ್ಯಸ್ಥರು ಲಡಾಖ್‌ನಲ್ಲಿ ನೆಲದ ವಾಸ್ತವತೆಯ ಬಗ್ಗೆ ಸುಳ್ಳು ಹೇಳಿದ್ದಾರೆ ಮತ್ತು ನಿರ್ಣಾಯಕ ಸಮಯದಲ್ಲಿ ಭಾರತೀಯ ಸೇನೆಯನ್ನು ಕೆಳಗಿಳಿಸುವ ಹೇಳಿಕೆ ನೀಡಿದ್ದಾರೆ ಎಂದು ಪತ್ರಾ ಆರೋಪಿಸಿದರು.
ಸಿಡಬ್ಲ್ಯುಸಿ ಸಭೆಯ ನಂತರ ಸೋನಿಯಾ ಗಾಂಧಿ ಹೇಳಿಕೆ ನೀಡಿದ್ದು, ಇದು ನಾಚಿಕೆಗೇಡಿನ ಸಂಗತಿ. ಸೈನ್ಯದ ಬಗ್ಗೆ ಸುಳ್ಳು ಹೇಳುವುದು ಕಾಂಗ್ರೆಸ್ಸಿನ ನೀತಿಯಾಗಿದೆ. ಸೈನ್ಯವು ತನ್ನನ್ನು ತಾನು ಬಲಪಡಿಸಿಕೊಳ್ಳುತ್ತಿರುವ ಸಮಯದಲ್ಲಿ ಸಿಡಬ್ಲ್ಯುಸಿಯನ್ನು ಏಕೆ ಕರೆಯಬೇಕು ಎಂದು ನಾನು ಸೋನಿಯಾ ಅವರನ್ನು ಕೇಳಲು ಬಯಸುತ್ತೇನೆ.
ಲೇಹ್‌ನಲ್ಲಿ ನಾವು ನಮ್ಮ ಭೂಮಿಯನ್ನು ಚೀನಾಕ್ಕೆ ಒಪ್ಪಿಸಿದ್ದೇವೆ ಎಂದು ನೀವು ಹೇಳುತ್ತೀರಿ. ನೀವು ಸೈನ್ಯದೊಂದಿಗೆ ಕುಸ್ತಿಯಾಡಲು ಬಯಸುತ್ತೀರಾ? ನೀವು ಯಾವ ರೀತಿಯ ಮಾತುಕತೆ ನಡೆಸುತ್ತಿದ್ದೀರಿ? ಚೀನಿಯರು ಇಂಚು ಭೂಮಿಯನ್ನು ಆಕ್ರಮಿಸಿಕೊಂಡಿಲ್ಲ, ಚೀನಾ ಏನನ್ನಾದರೂ ಆಕ್ರಮಿಸಿಕೊಂಡಿದ್ದರೆ, ಎಂಒಯುಗೆ ಸಹಿ ಹಾಕಿದ ಬಳಿಕ ತಾಯಿ ಹಾಗೂ ಮಗನ ಹೃದಯ ಮತ್ತು ಮನಸ್ಸನ್ನು ಮಾತ್ರ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮೇಲೆ ಸುದ್ದಿಗೋಷ್ಠಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.
ಸೋನಿಯಾಜಿ, ಭಾರತ ಒಂದು ಇಂಚಿನ ಭೂಮಿಯನ್ನು ಕೂಡ ಚೀನಾಕ್ಕೆ ಬಿಟ್ಟುಕೊಟ್ಟಿಲ್ಲ. ದೇಶದ ಭದ್ರತೆಯ ವಿಷಯದಲ್ಲಿ ನಾವು ಯಾವುದೇ ಕಾರಣಗಳಿಗೂ ರಾಜಿಯಾಗುವುದಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ನಾವೆಲ್ಲರೂ ಒಟ್ಟಾಗಿ ನಮ್ಮ ಸೇನೆಯ ಬದ್ಧತೆ ಮತ್ತು ಸದೃಢತೆಯೊಂದಿಗೆ ನಿಲ್ಲಬೇಕು ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಮರ್ಯಾದೆಯನ್ನು ಬಿಟ್ಟಿರುವುದು ಬೇಸರದ ಸಂಗತಿ ಎಂದು ಹೇಳಿದರು.