ADVERTISEMENT
Wednesday, November 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಅವನ ಇಲಾಖೆಯಲ್ಲಿ ಏನು ಸಾಧನೆ ಮಾಡಿದ್ದಾನೆ ಹೇಳಲಿ- ನಾನು ಬಾಯಿ ಬಿಟ್ಟರೆ ಬಹಳಷ್ಟು ವಿಚಾರಗಳು ಆಚೆ ಬರುತ್ತವೆ ಹುಷಾರ್: ಸಚಿವ ಎಚ್.ಸಿ. ಬಾಲಕೃಷ್ಣಗೆ ಕೆ.ಎನ್. ರಾಜಣ್ಣ ಖಡಕ್ ತಿರುಗೇಟು!

Shwetha by Shwetha
November 25, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಸಚಿವ ಎಚ್.ಸಿ. ಬಾಲಕೃಷ್ಣ ಅವರ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರಿದೆ. ಮನೆದೇವರ ಮುಂದೆ ಬಂದು ಆಣೆ-ಪ್ರಮಾಣ ಮಾಡಲಿ ಎಂದು ಸಚಿವ ಬಾಲಕೃಷ್ಣ ಹಾಕಿದ್ದ ಸವಾಲಿಗೆ ಇಂದು ಬೆಂಗಳೂರಿನಲ್ಲಿ ಕೆ.ಎನ್. ರಾಜಣ್ಣ ಅವರು ಅತ್ಯಂತ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ನಾನು ಈ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ, ಒಂದು ವೇಳೆ ನಾನು ಬಾಯಿ ಬಿಟ್ಟರೆ ಬಹಳಷ್ಟು ವಿಚಾರಗಳು ಆಚೆ ಬರುತ್ತವೆ ಎಂದು ನೇರ ಎಚ್ಚರಿಕೆ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

ನನ್ನ ಇಲಾಖೆಯೋ, ಅವನ ಇಲಾಖೆಯೋ? ಬಾಲಕೃಷ್ಣ ಸಾಧನೆ ಏನು ಹೇಳಲಿ ಎಂದು ಏಕವಚನದಲ್ಲೇ ವಾಗ್ದಾಳಿ

Related posts

ಅಕ್ಷರ ದಾಸೋಹದವರು 4 ಸಾವಿರಕ್ಕೆ, ಶಿಕ್ಷಕರು 12 ಸಾವಿರಕ್ಕೆ ದುಡಿಯುತ್ತಿಲ್ಲವೇ?: ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಸಚಿವ ಯು.ಟಿ. ಖಾದರ್ ಖಾರದ ಪ್ರಶ್ನೆ, ಕೇಂದ್ರದತ್ತ ಬೊಟ್ಟು!

ಅಕ್ಷರ ದಾಸೋಹದವರು 4 ಸಾವಿರಕ್ಕೆ, ಶಿಕ್ಷಕರು 12 ಸಾವಿರಕ್ಕೆ ದುಡಿಯುತ್ತಿಲ್ಲವೇ?: ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಸಚಿವ ಯು.ಟಿ. ಖಾದರ್ ಖಾರದ ಪ್ರಶ್ನೆ, ಕೇಂದ್ರದತ್ತ ಬೊಟ್ಟು!

November 25, 2026
ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ಮಹಿಳೆಯರಿಗೆ ತಲಾ ₹20,000 ನೀಡಲು ಬಿಜೆಪಿ ಯೋಜನೆ?

ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ಮಹಿಳೆಯರಿಗೆ ತಲಾ ₹20,000 ನೀಡಲು ಬಿಜೆಪಿ ಯೋಜನೆ?

November 25, 2026

ಸಚಿವ ಬಾಲಕೃಷ್ಣ ಅವರ ಆಣೆ-ಪ್ರಮಾಣದ ಸವಾಲಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎನ್. ರಾಜಣ್ಣ, ನೀವು ಸಚಿವರಾಗಿದ್ದ ಅವಧಿಯಲ್ಲಿ ಚೆನ್ನಾಗಿ ಮಾಡಿಕೊಂಡಿದ್ದೀರಿ ಎಂಬ ಬಾಲಕೃಷ್ಣ ಅವರ ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಾನು ಮಾಡಿಕೊಂಡಿದ್ದೇನೋ ಅಥವಾ ಅವನು ಮಾಡಿಕೊಂಡಿದ್ದಾನೋ? ಆಯ್ತಪ್ಪಾ, ಅವನು ತನ್ನ ಇಲಾಖೆಯಲ್ಲಿ ಏನು ಸಾಧನೆ ಮಾಡಿದ್ದಾನೆ ಎಂಬುದನ್ನು ಮೊದಲು ಹೇಳಲಿ ಎಂದು ಏಕವಚನದಲ್ಲೇ ಸವಾಲು ಹಾಕಿದರು.

ಬಾಲಕೃಷ್ಣ ವಿರುದ್ಧ ಏಕವಚನದಲ್ಲೇ ಗುಡುಗಿದ್ದ ರಾಜಣ್ಣ, ಅವನು ತಮಗೆ ಉತ್ತರ ಕೊಡಲು ಯೋಗ್ಯನಲ್ಲ ಎಂದು ಜರಿದಿದ್ದರು. ಇದೇ ವೇಳೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯಿಸಿದ ಅವರು, ತಾವು ಈ ವಿಷಯವನ್ನು ಈ ಹಿಂದೆಯೇ ವಿಧಾನಸಭೆಯ ಸದನದಲ್ಲಿ ಪ್ರಸ್ತಾಪಿಸಿದ್ದಾಗಿ ನೆನಪಿಸಿದರು. ಅಲ್ಲದೆ, ಇನ್ನೂ ಸುಮಾರು 25ರಿಂದ 30 ಸ್ಟಿಂಗ್ ವಿಡಿಯೋಗಳು ಇರಬೇಕಿದ್ದು, ಅವು ಸಂದರ್ಭಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ಹೊರಬರಲಿವೆ ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದರು.

ಬಿ.ಕೆ. ಹರಿಪ್ರಸಾದ್ ನೇಮಕದಿಂದ ಅಹಿಂದಕ್ಕೆ ಆನೆಬಲ

ಮುಂದಿನ ದಿನಗಳಲ್ಲಿ ಅಹಿಂದ ಸಮಾವೇಶ ನಡೆಸುವ ಕುರಿತು ಮಾತನಾಡಿದ ರಾಜಣ್ಣ, ಖಂಡಿತವಾಗಿಯೂ ಸಮಾವೇಶ ಮಾಡೋಣ. ಕಾಂಗ್ರೆಸ್ ಪಕ್ಷಕ್ಕೆ ನಿಜವಾದ ಶಕ್ತಿ ಇರುವುದೇ ಅಹಿಂದ ವರ್ಗದಿಂದ ಮತ್ತು ಆ ಸಮಾವೇಶದಿಂದಲೇ ಪಕ್ಷಕ್ಕೆ ಶಕ್ತಿ ಬರುವುದು. ಹೀಗಾಗಿ ಮುಂದಿನ ದಿನಗಳಲ್ಲಿ ಸಮಾವೇಶ ಸಂಘಟಿಸೋಣ ಎಂದರು. ಇನ್ನು ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿರುವುದು ಅಹಿಂದ ವರ್ಗಕ್ಕೆ ಸಿಕ್ಕ ಬಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ಹರಿಪ್ರಸಾದ್ ಅವರು ಅಹಿಂದ ಕೋಟಾದಿಂದಲೇ ಆ ಹುದ್ದೆಗೆ ಬಂದಿರುವುದು. ಅವರು ಕೆಪಿಸಿಸಿ ಸಾರಥಿಯಾಗಿರುವುದರಿಂದ ಅಹಿಂದ ವರ್ಗಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಈ ಹಿಂದೆ ಅವರು ಕೂಡ ಅಹಿಂದ ವಿಚಾರವಾಗಿ ಹಲವು ಸಮಾವೇಶಗಳನ್ನು ನಡೆಸಿದ್ದರು ಎಂದು ಸ್ಮರಿಸಿದರು.

ಬಿ.ಕೆ. ಹರಿಪ್ರಸಾದ್ ಅವರು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿ, ರಾಷ್ಟ್ರ ಮಟ್ಟದಲ್ಲೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ದೇಶದ ಬಹಳಷ್ಟು ರಾಜ್ಯಗಳ ಉಸ್ತುವಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅಪಾರ ಅನುಭವ ಅವರಿಗಿದ್ದು, ಅವರೊಬ್ಬ ಅತ್ಯುತ್ತಮ ಸಂಘಟನಾಕಾರರೂ ಹೌದು ಎಂದು ರಾಜಣ್ಣ ಮುಕ್ತಕಂಠದಿಂದ ಶ್ಲಾಘಿಸಿದರು.

ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ನಡುವೆ ಭಿನ್ನಾಭಿಪ್ರಾಯವಿಲ್ಲ

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಅಹಿಂದ ನಾಯಕರು ಭೇಟಿಯಾಗಿ ಚರ್ಚಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಆ ಭೇಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದರು. ಈಗ ನಾನು ನಿಮ್ಮನ್ನೆಲ್ಲ ಭೇಟಿ ಮಾಡುತ್ತೇನೆ, ಇದರಲ್ಲಿ ಏನು ವಿಶೇಷತೆ ಇರುತ್ತದೆ? ಸತೀಶ್ ಜಾರಕಿಹೊಳಿ ಅವರಾಗಲಿ ಅಥವಾ ಸಿದ್ದರಾಮಯ್ಯನವರಾಗಲಿ, ಅವರ ನಡುವೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅವರವರ ಉದ್ದೇಶಗಳು ಒಂದೇ ಆಗಿರುತ್ತವೆ. ಕೆಲವೊಮ್ಮೆ ಸಂವಹನದ ಕೊರತೆಯಿಂದಾಗಿ ಭೇಟಿ ಮಾಡಲು ಸಾಧ್ಯವಾಗಿರುವುದಿಲ್ಲ. ಅಷ್ಟಕ್ಕೇ ಮಾಧ್ಯಮದವರಾದ ನೀವು ಕ್ಷಣಮಾತ್ರದಲ್ಲಿ ಹತ್ತಾರು ಕಥೆಗಳನ್ನು ಕಟ್ಟಿಬಿಡುತ್ತೀರಿ. ರಾಜಕೀಯದಲ್ಲಿ ಎಲ್ಲವೂ ಸುಳ್ಳಾಗುವುದಿಲ್ಲ, ಹಾಗೆಯೇ ಎಲ್ಲವೂ ಸತ್ಯವೂ ಆಗುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ShareTweetSendShare
Join us on:

Related Posts

ಅಕ್ಷರ ದಾಸೋಹದವರು 4 ಸಾವಿರಕ್ಕೆ, ಶಿಕ್ಷಕರು 12 ಸಾವಿರಕ್ಕೆ ದುಡಿಯುತ್ತಿಲ್ಲವೇ?: ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಸಚಿವ ಯು.ಟಿ. ಖಾದರ್ ಖಾರದ ಪ್ರಶ್ನೆ, ಕೇಂದ್ರದತ್ತ ಬೊಟ್ಟು!

ಅಕ್ಷರ ದಾಸೋಹದವರು 4 ಸಾವಿರಕ್ಕೆ, ಶಿಕ್ಷಕರು 12 ಸಾವಿರಕ್ಕೆ ದುಡಿಯುತ್ತಿಲ್ಲವೇ?: ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಸಚಿವ ಯು.ಟಿ. ಖಾದರ್ ಖಾರದ ಪ್ರಶ್ನೆ, ಕೇಂದ್ರದತ್ತ ಬೊಟ್ಟು!

by Shwetha
November 25, 2026
0

ಮಂಗಳೂರು: ಗೌರವಧನ ಹೆಚ್ಚಳಕ್ಕಾಗಿ ಪಟ್ಟು ಹಿಡಿದು ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟದ ವಿರುದ್ಧ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಯು.ಟಿ. ಖಾದರ್...

ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ಮಹಿಳೆಯರಿಗೆ ತಲಾ ₹20,000 ನೀಡಲು ಬಿಜೆಪಿ ಯೋಜನೆ?

ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ಮಹಿಳೆಯರಿಗೆ ತಲಾ ₹20,000 ನೀಡಲು ಬಿಜೆಪಿ ಯೋಜನೆ?

by Shwetha
November 25, 2026
0

ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ, ಮಹಿಳಾ ಮತದಾರರನ್ನು ಸೆಳೆಯಲು ಹೊಸ ಆರ್ಥಿಕ ನೆರವು ಯೋಜನೆ ರೂಪಿಸುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ. ರಾಜ್ಯದ...

ದಾಳಿಗಳು ಕೇವಲ ಪ್ರಚಾರಕ್ಕಷ್ಟೇ,ಲೋಕಾಯುಕ್ತ ಸಂಸ್ಥೆಯನ್ನೇ ಅನುಪಯುಕ್ತ ಎಂದು ಟೀಕಿಸಿದ ಪ್ರಕರಣ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ನೋಟಿಸ್ ಜಾರಿ!

ದಾಳಿಗಳು ಕೇವಲ ಪ್ರಚಾರಕ್ಕಷ್ಟೇ,ಲೋಕಾಯುಕ್ತ ಸಂಸ್ಥೆಯನ್ನೇ ಅನುಪಯುಕ್ತ ಎಂದು ಟೀಕಿಸಿದ ಪ್ರಕರಣ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ನೋಟಿಸ್ ಜಾರಿ!

by Shwetha
November 25, 2026
0

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಕರ್ನಾಟಕ ಲೋಕಾಯುಕ್ತವು ಅನುಪಯುಕ್ತವಾಗಿದ್ದು, ಭ್ರಷ್ಟರ ಮೇಲಿನ ದಾಳಿಗಳ ಮೂಲಕ ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲಾಗುತ್ತಿದೆ ಎಂಬರ್ಥದ ಹೇಳಿಕೆಗಳನ್ನು ಪ್ರಸಾರ ಮಾಡಿದ ಆರೋಪದ...

ಬೆಂಗಳೂರಿನಲ್ಲೂ ‘ಸ್ಮೋಕಿಂಗ್ ಫ್ರೀ ಝೋನ್’ ಜಾರಿಗೆ ಚಿಂತನೆ; ಹೋಟೆಲ್, ಪಬ್, ಬಾರ್‌ಗಳಲ್ಲಿ ಧೂಮಪಾನ ನಿಷೇಧ ಪ್ರಸ್ತಾವನೆ

ಬೆಂಗಳೂರಿನಲ್ಲೂ ‘ಸ್ಮೋಕಿಂಗ್ ಫ್ರೀ ಝೋನ್’ ಜಾರಿಗೆ ಚಿಂತನೆ; ಹೋಟೆಲ್, ಪಬ್, ಬಾರ್‌ಗಳಲ್ಲಿ ಧೂಮಪಾನ ನಿಷೇಧ ಪ್ರಸ್ತಾವನೆ

by Shwetha
November 25, 2026
0

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಕಡಿವಾಣ ಹಾಕಿ, ಧೂಮಪಾನ ಮಾಡದವರನ್ನು ಪರೋಕ್ಷ ಧೂಮಪಾನದ ಅಪಾಯದಿಂದ ರಕ್ಷಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ 'ಸ್ಮೋಕಿಂಗ್ ಫ್ರೀ ಝೋನ್' (Smoking-Free Zone) ಜಾರಿಗೆ ತರಲು...

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (25-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 25, 2026
0

ದಿನ ಭವಿಷ್ಯ: 25-11-2026 1. ಮೇಷ ರಾಶಿ (ಅಶ್ವಿನಿ, ಭರಣಿ, ಕೃತ್ತಿಕಾ 1ನೇ ಪಾದ) ಗ್ರಹಗತಿ: ನಿಮ್ಮ ರಾಶಿಯಿಂದ ಎರಡನೇ ಮನೆಯಾದ ಧನ ಸ್ಥಾನದಲ್ಲಿ ಉಚ್ಚ ಚಂದ್ರನ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram