ಮಂಗಳೂರು : ದೇಶದ ಹಣಕಾಸು ಸಚಿವರು ಆರ್ಥಿಕ ಪರಿಸ್ಥಿತಿ ಸುಧಾರಿಸಲು ವಿಫಲರಾಗಿದ್ದಾರೆ. ದೇಶ ಸರಿಯಾಗಬೇಕಾದರೆ ಮೊದಲು ಹಣಕಾಸು ಸಚಿವರನ್ನು ಬದಲಾಯಿಸಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯು.ಟಿ.ಖಾದರ್, ವಿತ್ತ ಸಿಚಿವರು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ವಿಫಲರಾಗಿದ್ದಾರೆ. ಅವರು ಹಣಕಾಸು ಸಚಿವರಾಗಿ ಒಂದೇ ಒಂದು ಒಳ್ಳೆಯ ಕೆಲಸ ಮಾಡಿಲ್ಲ. ತಮಿಳುನಾಡಿನ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ, ಅವರು ಹಣಕಾಸು ಸಚಿವರಾಗಿ ಕರ್ನಾಟಕಕ್ಕೆ ಅವಮಾನವಾಗುವ ಪರಿಸ್ಥಿತಿ ಬಂದಿದೆ ಎಂದು ಗರಂ ಆದರು.
ಇದೇ ವೇಳೆ ಜಿಎಸ್ ಟಿ ವಿಚಾರವಾಗಿ ಮಾತನಾಡಿದ ಖಾದರ್, ಕಾನೂನು ಬದ್ಧವಾಗಿ ಕರ್ನಾಟಕ ರಾಜ್ಯಕ್ಕೆ ಜಿಎಸ್ಟಿ ಹಕ್ಕು ಸಿಗಬೇಕು. ಅದನ್ನು ನೀಡದೆ ಸಾಲ ತೆಗೆದುಕೊಳ್ಳಲು ಸೂಚಿಸಿರುವುದು ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವ ನಡೆಯಾಗಿದೆ. ಇಂತಹ ಹೇಳಿಕೆ ನೀಡಲು ಕೇಂದ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು. ಮುಖ್ಯಮಂತ್ರಿಗಳು ಸಾಲ ತೆಗೆಯುವುದನ್ನು ನಿರಾಕರಿಸಬೇಕು. ರಾಜ್ಯದಿಂದ ಆಯ್ಕೆಯಾದ 28 ಸಂಸದರು ಈ ಕುರಿತು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.









