ಬಾದಾಮಿ ಬನಶಂಕರಿ ದೇವಿ:-
ಭಾರತದ ಜಾಗೃತ ಶಕ್ತಿಪೀಠಗಳಲ್ಲಿ ಬಾದಾಮಿ ಬನಶಂಕರಿ ಶಕ್ತಿ ಪೀಠವು ಒಂದಾಗಿದೆ. ಇಲ್ಲಿನ ಬನಶಂಕರಿ ನವದುರ್ಗೆಯ 6ನೇ ಅವತಾರ ಆಗಿದ್ದಾಳೆ.
ಈ ದೇವಾಲಯ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ “ಚೋಳಚ” ಗುಡ್ಡದಲ್ಲಿದೆ. ಪಾರ್ವತಿ ರೂಪವಾಗಿರುವ ಬನಶಂಕರಿ ದೇವಾಲಯವು ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಉತ್ತರ ಕರ್ನಾಟಕ ಮಾತ್ರ ಅಲ್ಲದೆ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಕೋಟ್ಯಾಂತರ ಭಕ್ತರು ನಡೆದುಕೊಳ್ಳುತ್ತಾರೆ. ಅನೇಕ ಕುಟುಂಬಗಳ ಮನೆದೇವಿ ಯಾಗಿದ್ದಾಳೆ. ಪೂರ್ವದಿಂದಲೂ ರಾಜ ಮಹಾರಾಜರುಗಳಿಂದ ಆರಾಧಿಸಲ್ಪಡುವ ಶಕ್ತಿ ದೇವಿಯಾಗಿದ್ದಾಳೆ. ಇಲ್ಲಿ ದೇವಿಯನ್ನು “ತ್ರಿನೇತ್ರೆ” ಎಂದು ಕರೆಯುತ್ತಾರೆ. ಇನ್ನೊಂದು ವಿಶೇಷ ಎಂದರೆ ಭಕ್ತರು ತಮ್ಮ ಬದುಕಿನಲ್ಲಿ ಬರುವ ಕಷ್ಟಕಾರ್ಪಣ್ಯ ಗಳು ಬರದಿರಲಿ, ಬಂದಿರುವುದು ಪರಿಹಾರವಾಗಲಿ ಎಂಬ ಉದ್ದೇಶದಿಂದ ಬನಶಂಕರಿ ದೇವಿಗೆ ರಾಹು ಕಾಲದಲ್ಲಿ ಪೂಜೆ ಸಲ್ಲಿಸುತ್ತಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಬನದ ಸಿರಿ ಬನ ಶಂಕರಿ
ಸ್ಕಂದ ಪುರಾಣದಂತೆ ಬಹಳ ಹಿಂದೆ ಬಾದಾಮಿಯ ಸುತ್ತಮುತ್ತ “ತಿಲಕಾರಣ್ಯ” ಎಂಬ ದಟ್ಟಾರಣ್ಯದಿಂದ ಕೂಡಿದ ಪ್ರದೇಶವಾಗಿತ್ತು. ಇಲ್ಲಿ “ದುರ್ಗಮಾಸುರ” ಎಂಬ ಅಸುರನಿದ್ದು ಈತ ಸ್ಥಳೀಯ ಜನಗಳಿಗೆ, ಋಷಿಮುನಿಗಳಿಗೆ ಉಪಟಳ ಕೊಡುತ್ತಿದ್ದ ನು.ಇವನ ಕಿರುಕುಳ ತಾಳಲಾರದೆ ದೇವತೆಗಳ ದೇವಿಗೆ ಮೊರೆಹೋಗಲು ಯಜ್ಞ ಮಾಡುತ್ತಾರೆ. ಆಗ ಆದಿಶಕ್ತಿ ಪಾರ್ವತಿದೇವಿ, ಲಕ್ಷ್ಮಿ ಹಾಗೂ ಸರಸ್ವತಿ ರೂಪವನ್ನು
ಏಕೀಕರಿಸಿಕೊಂಡು ಯಜ್ಞ ಕುಂಡದಿಂದ ಎದ್ದು ಬರುತ್ತಾಳೆ. ಆದ್ದರಿಂದ ಇವಳನ್ನು ತ್ರಿನೇತ್ರ ಎಂದು ಕರೆಯುತ್ತಾರೆ. ಯಜ್ಞ ಕುಂಡದಿಂದ ಭಯಂಕರ ರೂಪದಲ್ಲಿ ಎದ್ದು ಬಂದ ಪಾರ್ವತಿ ದೇವಿ ದುರ್ಗಮಾಸುರ ಹಾಗೂ ಅನೇಕ ರಾಕ್ಷಸರನ್ನು ಸಂಹಾರ ಮಾಡುತ್ತಾಳೆ ನಂತರ ಅದೇ ರೂಪದಲ್ಲಿ ನೆಲೆಸಿದಳು. ಅವಳ ರೂಪ ಭಯಂಕರ ವಾಗಿದ್ದು ರಾಕ್ಷಸರೇ ನೋಡಲು ಹೆದರುತ್ತಿದ್ದರು. ಚಿಂತಿಸಿದ ದೇವತೆಗಳು ದೇವಿಗೆ ಶಾಂತ ರೂಪ ಧರಿಸುವಂತೆ ಪ್ರಾರ್ಥಿಸಲು ಆದಿಶಕ್ತಿಯ ಆರಾಧಕರಾದ “ತ್ರಿದಂಡ” ಮಹರ್ಷಿಗಳ ಮೂಲಕ ದೇವಿಯನ್ನು ಶಾಂತಗೊಳಿಸಲು ಪ್ರಾರ್ಥಿಸಿದರು. ತ್ರಿದಂಡಿ
ಮಹರ್ಷಿಗಳು ತಪಸ್ಸು ಮಾಡಿ ದೇವಿಯನ್ನು ಒಲಿಸಿಕೊಂಡಾಗ ದೇವಿ ಶಾಂತ ರೂಪದ “ಬನಶಂಕರಿ” ಆದಳು. ನಂತರ ಮಹರ್ಷಿಗಳು ಹಾಗೂ ದೇವತೆಗಳು ಯಜ್ಞ ಕುಂಡ ದಿಂದ ಎದ್ದು ಬಂದ ಸ್ಥಳದಲ್ಲಿಯೇ ದೇವಿಯನ್ನು ಪ್ರತಿಷ್ಠಾಪಿಸಿದರು. ದೇವಿಯು ಜನರ ರಕ್ಷಾ ಕವಚವಾಗಿ ಬನಶಂಕರಿ ರೂಪವನ್ನು ಧರಿಸಿ ನೆಲೆಸಿದ ದೇವಾಲಯವು ಕರ್ನಾಟಕದ ಪ್ರಸಿದ್ಧ ದೇವಾಲಯಗಳ ಸಾಲಿನಲ್ಲಿ ಬನಶಂಕರಿ ದೇವಾಲಯ ಪ್ರಸಿದ್ಧಿಯಾಗಿದೆ. ಇಂದಿಗೂ ರಾಜ್ಯವನ್ನು- ಜನರನ್ನು ರಕ್ಷಣೆ ದೇವಿ ರಕ್ಷಣೆ ಮಾಡುತ್ತಿದ್ದಾಳೆ ಎಂಬ ನಂಬಿಕೆ ಭಕ್ತ ಜನ ಮನದಲ್ಲಿ ಬೇರೂರಿದೆ
ಇಲ್ಲಿನ ದೇವಿಯನ್ನು “ಶಾಕಾಂಬರಿ” ಎಂದು ಕರೆಯುತ್ತಾರೆ. ಕಾರಣ ಪೂರ್ವದಲ್ಲಿ ನೂರು ವರ್ಷಗಳು ಅತಿವೃಷ್ಟಿ ಆಗಿ ಕಷ್ಟವಾಯಿತು. ದೇವತೆಗಳು “ತಿಲಕಾರಣ್ಯ” ದಲ್ಲಿ ನೆಲೆಸಿದ್ದ ದೇವಿ ಬನಶಂಕರಿಯನ್ನು ಪ್ರಾರ್ಥಿಸಿದರು. ತಾಯಿ ದೇವತೆಗಳ ಪ್ರಾರ್ಥನೆಗೆ ಕೃಪೆ ತೋರಿ ಭೂಮಿಯ ನೀರಿನ ದಾಹ ತಣಿಸಿ ಎಲ್ಲರನ್ನೂ ಕಾಪಾಡಿದಳು. ಹಾಗೆ ತನ್ನ ಶರೀರದ ಶಾಖದಿಂದಲೇ ತರಕಾರಿಯನ್ನು ಉತ್ಪತ್ತಿ ಮಾಡಿ ಜನರ ಹಸಿವನ್ನು ನೀಗಿಸುತ್ತಾ ಬಂದಳು. ಅಂದಿನಿಂದ “ಶಾಕಾಂಬರಿ” ಯಾದಳು.
ಬನಶಂಕರಿ ದೇವಿ ಕಪ್ಪು ಶಿಲೆಯಲ್ಲಿ ಸಿಂಹ ವಾಹಿನಿಯಾಗಿ ಕುಳಿತ ಪಾದದ ಕೆಳಗೆ ರಾಕ್ಷಸನನ್ನು ಮೆಟ್ಟಿ ಕುಳಿತಿದ್ದಾಳೆ. ದೇವಿಗೆ ಅಷ್ಟ ಭುಜಗಳಿದ್ದು, ಕೈಗಳಲ್ಲಿ ಗಂಟೆ- ತ್ರಿಶೂಲ- ಖಡ್ಗ,- ಶಂಖ- ಚಕ್ರ- ಡಮರುಗ – ಅಮೃತ ಕಲಶ- ಡಾಲು- ಅಭಯ ಮುದ್ರೆ- ವರಮುದ್ರೆ ಹಿಡಿದಿದ್ದಾಳೆ. ತಿಲಕಾರಣ್ಯದಲ್ಲಿ ನೆಲೆಸಿದ ದೇವಿಗೆ ಬನ ಮತ್ತು ಶಂಕರಿ ಪದದಿಂದ “ಬನಶಂಕರಿ” ಎಂಬ ಹೆಸರು ಬಂದಿದೆ. ಬನ ಅಂದರೆ ಕಾಡು, ಶಂಕರಿ ಅಂದರೆ ಶಿವನ ಪ್ರಿಯೆ ಎಂದಾಗುತ್ತದೆ. ಶಾಕಾಂಬರಿ, ವನದೇವಿ, ಚೌಡಮ್ಮ, ಬನದೇವಿ, ವನದುರ್ಗೆ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಏಳನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ರಾಜ “ಜಗದೇಕ ಮಲ್ಲ” ಈ ದೇವಾಲಯ ವನ್ನು ಮೊದಲು ನಿರ್ಮಿಸಿ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ದೇವಿಯನ್ನು ಶಕ್ತಿ ರೂಪಿಣಿಯಾಗಿ ಆರಾಧಿಸುತ್ತಿದ್ದನು. ಈ ದೇವಿ ಚಾಲುಕ್ಯರ ಮನೆ ಮನದ ಆರಾಧ್ಯ ದೇವಿಯಾಗಿದ್ದಾಳೆ. “ರಾಹು ದೋಷ” ನಿವಾರಣೆಗಾಗಿ ರಾಹುಕಾಲದಲ್ಲಿ ದೇವರಿಗೆ ನಿಂಬೆಹಣ್ಣಿನ ದೀಪಗಳನ್ನು ಹಚ್ಚುತ್ತಾರೆ. ಮುಂದೆ ಮಹಾರಾಷ್ಟ್ರದ ರಾಜರುಗಳು ದೇವಾಲಯವನ್ನು ನವೀಕರಿಸುತ್ತಾ ಬಂದರು. ದೇವಾಲಯ ದ್ರಾವಿಡ ವಾಸ್ತು ಶಿಲ್ಪ ಮಾದರಿಯಲ್ಲಿದೆ. ಪುಷ್ಯ ಮಾಸದ ಅಂದರೆ ಜನವರಿ- ಫೆಬ್ರವರಿ ತಿಂಗಳಲ್ಲಿ ರಥೋತ್ಸವ -ಜಾತ್ರೆ ನಡೆಯುತ್ತದೆ.
ದೇವಾಲಯದ ಎದುರಿಗೆ “ಹರಿದ್ರಾ” ತೀರ್ಥ ಎಂಬ ವಿಶಾಲವಾದ ಪುಷ್ಕರಣಿ ಇದ್ದು, ನೋಡುಗರಿಗೆ ಆಕರ್ಷಕ ಬಿಂದುವಾಗಿದೆ. ಇಲ್ಲಿ ಸ್ನಾನ ಮಾಡಿದರೆ ಕಾಶಿ ಗಂಗಾ ಸ್ನಾನದ ಪವಿತ್ರಕ್ಕೆ ಸಮನಾಗಿದೆ. ಮತ್ತೊಂದು ಆಕರ್ಷಣೆ ಎಂದರೆ ಇಲ್ಲಿನ ರೈತಾಪಿ ಹೆಣ್ಣು ಮಕ್ಕಳು ಬುಟ್ಟಿಯಲ್ಲಿ ಜೋಳದ ರೊಟ್ಟಿ, ಶೇಂಗಾ ಚಟ್ನಿ ಪುಡಿ- ಎಣ್ಣೆಗಾಯಿ ಪಲ್ಯ,ಮಣ್ಣಿನ ಕುಡಿಕೆಗಳಲ್ಲಿ ತಣ್ಣನೆ ಮೊಸರು ತಂದು ಮಾರುತ್ತಾರೆ. ಬನಶಂಕರಿ
ಕ್ಷೇತ್ರಕ್ಕೆ ಬಂದವರು, ಜೋಳದ ರೊಟ್ಟಿ- ಪಲ್ಯ -ಚಟ್ನಿ ಪುಡಿ ಸವಿಯುತ್ತಾರೆ. ಹಾಗೆ ಬನಶಂಕರಿ ದೇವಿ ಜಾತ್ರೆ ಪುಷ್ಯ ಮಾಸದ ಅಷ್ಟಮಿ ದಿನ ಆರಂಭವಾಗಿ ಜಾತ್ರೆ ಸುಮಾರು ಒಂದು ತಿಂಗಳು ನಡೆದು ಬನದ ಹುಣ್ಣಿಮೆಯಂದು ಸಂಪನ್ನವಾಗುತ್ತದೆ. ಈ ಜಾತ್ರೆಯನ್ನು ಪುರಾಣ ಕಾಲದಿಂದಲೂ ನಡೆಸುತ್ತಾ ಬಂದಿದ್ದಾರೆ. ದೊಡ್ಡ ಜಾತ್ರೆ ಮಾಡುತ್ತಾರೆ ಇದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿದ್ದು ವೈಭವ ದಿಂದ ಜರುಗುತ್ತದೆ. ಬನಶಂಕರಿ ದೇವಿಗೆ ಶಾಂತ ರೂಪ ತಾಳುವಂತೆ ಪ್ರಾರ್ಥಿಸಿದ “ತ್ರಿದಂಡ” ಮುನಿಗಳ ಕಾಲದಿಂದಲೂ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಯನ್ನು ನೋಡಲು ಇಂದ್ರಾದಿ ದೇವತೆಗಳು ಸಹ ಬರುತ್ತಾರೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಜಾತ್ರೆ ಸಮಯದಲ್ಲಿ ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಜಾತ್ರೆ ಸಮಯದಲ್ಲಿ ನಗರವು ತಳಿರು ತೋರಣಗಳಿಂದ ಸಿಂಗಾರ ಗೊಂಡಿರುತ್ತದೆ. ಈ ಸಮಯದಲ್ಲಿ ಇಲ್ಲಿ ಸಿಗದೇ ಇರುವ ವಸ್ತುಗಳೇ ಇಲ್ಲ ಅಡುಗೆ ಸಾಮಾಗ್ರಿಗಳಿಂದ ಹಿಡಿದು ಮಕ್ಕಳ ಆಟಿಕೆಗಳು, ಊಟ ತಿಂಡಿ ದೊಡ್ಡವರಿಗೆ ಬೇಕಾದ ಪಾತ್ರೆಗಳಿಂದ ಹಿಡಿದು ಎಲ್ಲೆಲ್ಲಿಯೂ ಸಿಗದ ಅಪರೂಪದ ವಸ್ತುಗಳೆಲ್ಲ ಸಿಗುತ್ತದೆ. ಉತ್ತರ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಜಾತ್ರೆ ಎಂದರೆ ಬಾದಾಮಿ ಬನಶಂಕರಿ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬನದ ಹುಣ್ಣಿಮೆಯಂದು ವಿಜೃಂಭಣೆಯಿಂದ ದೇವಿಯ ರಥೋತ್ಸವ ನಡೆಸುತ್ತಾರೆ.
ಅಂದು “ಪಲ್ಯದ” ಹಬ್ಬ ಎಂದು ಸಂಭ್ರಮದ ಆಚರಣೆ ಮಾಡುತ್ತಾರೆ. 108 ಬಗೆಯ ತರಕಾರಿಗಳಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ದೇವಿಗೆ ನೈವೇದ್ಯ ಮಾಡುತ್ತಾ ರೆ. ತರಕಾರಿ ಹಾಗೂ ಹಣ್ಣುಗಳ ಹಾರಗಳನ್ನು ಹಾಕಲಾಗುತ್ತದೆ. ಸಂಜೆ “ಹರಿದ್ರಾ”
ಪುಷ್ಕರಣಿಯಲ್ಲಿ ದೇವಿಗೆ ತೆಪ್ಪೋತ್ಸವ ಮಾಡುತ್ತಾರೆ. ಈ ಸಮಯದಲ್ಲಿ ದೇವಿಯ ಆಶೀರ್ವಾದ ಪಡೆಯಲು, ಮಕ್ಕಳಿಗಾಗಿ ಹರಕೆ ಮಾಡಿಕೊಂಡವರು ಬಾಳೆ ದಿಂಡಿನ ಲ್ಲಿ ತಯಾರಿಸಿದ ತೆಪ್ಪದಲ್ಲಿ ನವಜಾತ ಶಿಶುಗಳನ್ನು ಮಲಗಿಸಿ ಕಲ್ಯಾಣಿ ಸುತ್ತ 3 ಪ್ರದಕ್ಷಣೆ ಮಾಡಿಸುತ್ತಾರೆ. ಬನಶಂಕರಿ ದೇವಿಗೆ ಬೇಡಿಕೊಂಡರೆ ತಮ್ಮೆಲ್ಲ ಅಪೇಕ್ಷೆಗ ಳು ನೆರವೇರುತ್ತದೆ ಎಂದು ಭಕ್ತರು ನಂಬಿದ್ದಾರೆ. ನವರಾತ್ರಿಯ 9 ದಿನಗಳು ದೇವಿಗೆ ವಿಶೇಷ ಅಲಂಕಾರ ಮತ್ತು ಪೂಜೆ, ಹಾಗೂ ಉತ್ಸವ ನಡೆಸುತ್ತಾರೆ .ಶುಕ್ರವಾರ – ಮಂಗಳವಾರ ಹುಣ್ಣಿಮೆ ಹಾಗೂ ತದಿಗೆ- ಅಷ್ಟಮಿ- ನವಮಿ, ದಿನಗಳಲ್ಲಿ ವಿಶೇಷ ಅಲಂಕಾರ ಪೂಜೆಗಳು ಇರುತ್ತದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಕಗ್ಗಾಡಿನ ಅರಣ್ಯದಲ್ಲೂ, ಕತ್ತಲೆಯ ಮಧ್ಯೆಯೂ, ದೇವಿಯ ಶಕ್ತಿ ಸದಾ ಕಾಪಾಡುತ್ತದೆ. ದುರ್ಗಮಾಸುರನ ಸಂಹಾರದಿಂದ, ಜನರ ರಕ್ಷಣೆಗೂ, ಶಾಕಾಂಬರಿಯಾಗಿ ಜನರ ಹಸಿವು ನೀಗಿಸುವ ತನಕ, ತಾಯಿ ಯಾವ ರೂಪದಲ್ಲಾದರೂ ತನ್ನ ಮಕ್ಕಳನ್ನು ಕೈಬಿಡದೆ ಕಾಪಾಡುತ್ತಾಳೆ. ಮನುಷ್ಯನ ಜೀವನದಲ್ಲಿ ಸಂಕಷ್ಟ–ಕ್ಲೇಶಗಳು ಬಂದರೂ ಭಯಪಡಬಾರದು. ಸತ್ಯ–ಧರ್ಮ –ನಂಬಿಕೆಗಳೊಂದಿಗೆ ನಡೆದು, ದೇವಿಯ ಆಶ್ರಯವನ್ನು ಬೇಡಿದವರು ತಪ್ಪದೇ ರಕ್ಷಣೆ ಪಡೆಯುತ್ತಾರೆ. ಬನಶಂಕರಿಯ ಕರೆ ಒಂದೇ— ಅದು
“ಭಕ್ತರ ಹೃದಯದಲ್ಲಿ ನಂಬಿಕೆ ಇದ್ದರೆ, ಅವರ ಜೊತೆಯಲ್ಲಿ ದೇವಿ ಇರುತ್ತಾಳೆ.”
ಶ್ರೀ ಶ್ರೀ ವಲ್ಲಭಸೋದರೀ ಶ್ರಿತಜನಸಿದ್ಧಾಯಿನೀ
ಶ್ರೀಮತೀ ಶ್ರೀಕಂಠಾರ್ಧಶರೀರಗಾ
ಶೃತಿಲಸನ್ಮಾಣಿಕ್ಯ ತಾಟಕಂಕಾ!
ಶ್ರೀ ಚಕ್ರಾಂತರವಾಸಿನೀ ಶೃತಿಶಿರ:
ಸಿದ್ದಾಂತಮಾರ್ಗಪ್ರಿಯಾ
ಶ್ರೀವಾಣೀ ಗಿರಿಜಾತ್ಮಿಕಾ ಭಗವತೀ
ಶಾಕಂಭರೀ ಪಾತು ಮಾಂ !!








