Umran-Malik | ಮಲ್ಲಿಕ್ ನನ್ನ ದಾಖಲೆ ಮುರಿದರೇ ಸಂತೋಷ
ಸನ್‌ರೈಸರ್ಸ್ ಹೈದರಾಬಾದ್ ಯುವ ವೇಗಿ ಉಮ್ರಾನ್ ಮಲಿಕ್ ಐಪಿಎಲ್-2022ರಲ್ಲಿ ತಮ್ಮ ವೇಗದ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್ ಗಳನ್ನು ಎದುರಿಸುತ್ತಿದ್ದಾರೆ.
ಈ ಋತುವಿನ ಪ್ರತಿ ಪಂದ್ಯದಲ್ಲೂ ಮಲಿಕ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಮಲಿಕ್ ಈ ಋತುವಿನಲ್ಲಿ ಅತಿ ವೇಗದ ಎಸೆತ (157 ಕಿಮೀ) ಎಂಬ ದಾಖಲೆಯನ್ನೂ ಹೊಂದಿದ್ದಾರೆ.
ಈ ನಡುವೆ ಉಮ್ರಾನ್ ಮಲಿಕ್ ಬಗ್ಗೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಇತ್ತೀಚೆಗೆ ಕ್ರೀಡಾ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಲಿಕ್ ತನ್ನ ವೇಗದ ಎಸೆತದ ದಾಖಲೆಯನ್ನು ಮುರಿಯಬೇಕೆಂದು ಅಖ್ತರ್ ಬಯಸುತ್ತಿದ್ದಾರಂತೆ.
ಅಖ್ತರ್ ವಿಶ್ವ ಕ್ರಿಕೆಟ್‌ನಲ್ಲಿ ಅತಿ ವೇಗದ ಎಸೆತದ ದಾಖಲೆ ಹೊಂದಿದ್ದಾರೆ. 2003 ರ ವಿಶ್ವಕಪ್‌ನಲ್ಲಿ, ಅಖ್ತರ್ ಗಂಟೆಗೆ 161.3 ಕಿಮೀ ವೇಗದಲ್ಲಿ ಚೆಂಡನ್ನು ಎಸೆದಿದ್ದರು.
ಮಲಿಕ್ ತುಂಬಾ ವರ್ಷಗಳು ಕ್ರಿಕೆಟ್ ಆಡಬೇಕು ಎಂದು ನಾನು ಭಾವಿಸುತ್ತೇನೆ. ನಾನು ಅಂತರಾಷ್ಟ್ರೀಯಕ ಕ್ರಿಕೆಟ್ ನಲ್ಲಿ ವೇಗದ ಎಸೆತವನ್ನು ಹಾಕಿ 20 ವರ್ಷಗಳ ಕಳೆದಿವೆ.
ಅದನ್ನ ಯಾರೂ ಮುರಿಯಲು ಸಾಧ್ಯವಾಗಲಿಲ್ಲ. ಆದ್ರೆ ಉಮ್ರಾನ್ ನನ್ನ ದಾಖಲೆಯನ್ನು ಮುರಿಯಬೇಕೆಂದು ನಾನು ಬಯಸುತ್ತೇನೆ. ಅವರು ನನ್ನ ದಾಖಲೆಯನ್ನು ಮುರಿದರೇ ಸಂತೋಷವಾಗುತ್ತದೆ ಎಂದಿದ್ದಾರೆ.