ದಪ್ಪನೆಯ ಹುಬ್ಬು ನೋಡಲು ಸುಂದರವಾಗಿ ಕಾಣುತ್ತದೆ ಜೊತೆಗೆ ಆಕರ್ಷಕವಾಗಿಯೂ ಇರುತ್ತದೆ. ದಪ್ಪನೆಯ ಹುಬ್ಬನ್ನು ಪಡೆಯಬೇಕಾದರೆ ಈ ಕೆಲವು ಸಿಂಪಲ್ ಮನೆಮದ್ದನ್ನು ಬಳಸಿ ನಿಮ್ಮ ಅಭಿಲಾಷೆಯನ್ನು ಈಡೇರಿಸಿಕೊಳ್ಳಬಹುದು ನೋಡಿ..
ಅಲೋವೆರಾ ಜೆಲ್: ವಾರದಲ್ಲಿ 2 ದಿನ ಅಲೋವೆರಾ ಜೆಲ್ ಅನ್ನು ಹುಬ್ಬಿಗೆ ಹಚ್ಚಿ. ಇದು ಹುಬ್ಬನ್ನು ಕಪ್ಪಗೆ ಮತ್ತು ದಟ್ಟಗೆ ಮಾಡುತ್ತದೆ.
ತೆಂಗಿನೆಣ್ಣೆ: ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆಯನ್ನು ಹುಬ್ಬಿಗೆ ಹಚ್ಚಿ. ಇದು ಹುಬ್ಬಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಈರುಳ್ಳಿ ರಸ: ಈರುಳ್ಳಿ ರಸವನ್ನು ಹುಬ್ಬಿಗೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟು, ರೋಸ್ ವಾಟರ್ ಬಳಸಿ ತೊಳೆಯಿರಿ. ಇದು ಸುಂದರ ಮತ್ತು ದಟ್ಟ ಹುಬ್ಬುಗಳನ್ನು ನೀಡುತ್ತದೆ.
ಹಾಲು: ತೆಳ್ಳಗಿನ ಹುಬ್ಬುಗಳಿದ್ದರೆ, ಹಾಲನ್ನು ಬಿಸಿ ಮಾಡಿ, ತಣ್ಣಗಾಗಿಸಿ, ಬಳಿಕ ಹುಬ್ಬಿಗೆ ಹಚ್ಚಿ.
ಹುಬ್ಬುಗಳನ್ನು ದಟ್ಟಗೊಳಿಸಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ.
ಸೂಚನೆ:ಇತರೆ ಸಮಸ್ಯೆಯಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.