ಮಸಾಜ್ ಸೆಂಟರ್ ಕರ್ಮಕಾಂಡ : ಸ್ಪಾ ಹೆಸರಲ್ಲಿ ಅಕ್ರಮಚಟುವಟಿಕೆ..! 3 ಯುವತಿಯರ ರಕ್ಷಣೆ..!
ಬೆಳಗಾವಿ : ಮಸಾಜ್ ಸೆಂಟರ್ ಸಲೋನ್ ಗಳಲ್ಲಿ ಅಕ್ರಮ ದಂಧೆಯ ಹಲವಾರು ಪ್ರಕರಣಗಳು ಈಗಾಗಲೇ ಬಯಲಾಗಿದೆ. ಇದೀಗ ಮಲೇಷ್ಯಾದ ತರಹವೇ ಮಸಾಜ್ ಸೆಂಟರ್ ಗಳಲ್ಲಿನ ಕರ್ಮಕಾಂವೊಂದು ಬೆಳಗಾವಿಯಲ್ಲಿ ಬಟಾಬಯಲಾಗಿದೆ.
ಮಸಾಜ್ ಮತ್ತು ಸ್ಪಾ ಸೆಂಟರ್ ಹೆಸರಿನಲ್ಲಿ ಮಾಂಸ ದಂಧೆ ನಡೆಸುತ್ತಿದ್ದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಸಿಇಎನ್ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮೂವರು ಯುವತಿಯರ ರಕ್ಷಣೆ ಮಾಡಲಾಗಿದೆ. ಇದೇ ವೇಳೆ ಇಬ್ಬರನ್ನ ಬಂಧಿಸಲಾಗಿದೆ. ರಕ್ಷಣೆ ಮಾಡಿದ ಯುವತಿಯರನ್ನ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.
ಬ್ರಿಟನ್ ನಲ್ಲಿ ಮತ್ತೆ ಓಪನ್ ಆಗಲಿದೆ ಪಬ್ , ಆದರೂ ಅಲ್ಲೇ ಸಿಗೋದಿಲ್ಲ ಆಲ್ಕೋಹಾಲ್..!
ಈ ಖತರ್ನಾಕ್ ಗ್ಯಾಂಗ್ ಹೆಚ್ಚಾಗಿ ಶ್ರೀಮಂತರ ಮನೆಯ ಯುವಕರನ್ನೇ ಟಾರ್ಗೆಟ್ ಮಾಡುತ್ತಿತ್ತು. ಬಳಿಕ ಅವರಿಗೆ ಯುವತಿಯರ ಫೋಟೋಗಳನ್ನ ತೋರಿಸಿ ಆಮಿಷವೊಡ್ಡುತಿದ್ದರು ಎನ್ನಲಾಗಿದೆ. ಈ ಗ್ಯಾಂಗ್ ಸ್ಪಾ ಎಂದು ಅನುಮತಿ ಪಡೆದು ಮಸಾಜ್ ಸೆಂಟರ್ ನ ಒಳಗೆ ಮಾಂಸ ದಂಧೆ ನಡೆಸುತ್ತಿತ್ತು ಎನ್ನಲಾಗಿದೆ. ಈ ದುಷ್ಟರು ಹೆಣ್ಣು ಮಕ್ಕಳನ್ನ ಅನೈತಿಕ ಚಟುವಟಿಕೆಗೆ ಬಳಸುತ್ತಿದ್ದರು. ಪ್ರಕರಣ ಸಂಬಂಧ ಬೆಳಗಾವಿ ಮೂಲದ ಕೇದಾರಿ ಶಿಂಧೆ, ಪ್ರಕಾಶ್ ಯಳ್ಳೂರ್ಕರ್ ನನ್ನ ಅರೆಸ್ಟ್ ಮಾಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿದ್ದ ನ್ಯೂ ಗೆಟ್ ವೆ ಯುನಿಸೆಕ್ಸ್ ಸ್ಪಾ ಹೆಸರಿನ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದಾಗ ಈ ವಿಚಾರ ಬಹಿರಂಗವಾಗಿದೆ.
ಇನ್ನೂ ಈ ಗ್ಯಾಂಗ್ ಶ್ರೀಮಂತ ಯುವಕರಿಗೆ ಗಾಳ ಹಾಕಿ , ಹನಿಟ್ರ್ಯಾಪ್ ಮಾಡುತ್ತಿದ್ದ ಬಗ್ಗೆಯೂ ಶಂಕೆ ವ್ಯಕ್ತವಾಗುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel