ಲಕ್ನೋ: ಯುವತಿಯೊಬ್ಬಳು ತನ್ನ ಚಿಕ್ಕಪ್ಪನೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಈಗ ಕೊಲೆಯಾಗಿರುವ ಘಟನೆ ನಡೆದಿದೆ.
22 ವರ್ಷ ವಯಸ್ಸಿನ ಮಗಳನ್ನೇ (Young woman) ಕೊಲೆ ಮಾಡಿ ಕಟ್ಟಡದ ಕೆಳಗೆ ಹೂತುಹಾಕಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ಮಣಿಕಾಂತ್ ದ್ವಿವೇದಿ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ್ದಲ್ಲದೇ, ಯುವತಿಯ ಮೊಬೈಲ್ ನ್ನು ಬಸ್ ವೊಂದರಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಯುವತಿ ಮಾನ್ಸಿ ಪಾಂಡೆ, ರಕ್ಷಾಬಂಧನದ ದಿನ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದಳು. ಅಲ್ಲಿಂದ ಅವಳು ಮನೆಗೆ ಮರಳಿ ಬಂದಿರಲಿಲ್ಲ. ಅನುಮಾನಗೊಂಡ ತಂದೆ ರಾಮಸಾಗರ್ ಪಾಂಡೆ, ಚಿಕ್ಕಪ್ಪ ಮಣಿಕಾಂತ್ ಮಗಳನ್ನು ಕರೆದುಕೊಂಡು ಹೋಗಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದರು. ನಂತರ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಯು ಮಾನಸಿಯೊಂದಿಗೆ 2 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿರುವುದು ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ನೀರಜ್ ಕುಮಾರ್ ಜಾದೌನ್ ಹೇಳಿದ್ದಾರೆ.
ಆದರೆ, ಮಾನಸಿ ಬೇರೊಬ್ಬರನ್ನ ಮದುವೆಯಾಗಲು ಬಯಸುವುದಾಗಿ ಹೇಳಿದ್ದಳು. ಇದರಿಂದ ಕೋಪಗೊಂಡ ಮಣಿಕಾಂತ್ ಅವಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಫೋನ್ ನ್ನು ಬಸ್ಸಿನಲ್ಲಿ ಎಸೆದಿದ್ದಾನೆ. ಸದ್ಯ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನವೆಂಬರ್ 27ಕ್ಕೆ ಮಾನ್ಸಿ ಮದುವೆ ನಿಶ್ಚಯವಾಗಿತ್ತು. ಆದರೆ ಮಣಿಕಾಂತ್ ಮದುವೆಯಾಗಬೇಡ ಪದೇ ಪದೇ ಪೀಡಿಸುತ್ತಿದ್ದ ಎಂದು ಮಾನ್ಸಿ ತಂದೆ ಆರೋಪಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.