ಅನೈತಿಕ ಸಂಬಂಧ : ಗಂಡನಿಗೆ ಸವಾಲೆಸೆದು ತವರು ಸೇರಿದ್ದಳು – ಎಡ್ ಹ್ಯಾಂಡ್ ಆಗಿ ಇನಿಯನ ಜೊತೆ ತಗಲಾಕಿಕೊಂಡಳು..!
ಗುಜರಾತ್ : ಅನೈತಿಕ ಸಂಬಂಧ ಹೊಂದಿದ್ದ ಪತ್ನಿ ನಡತೆ ಬಗ್ಗೆ ಪತಿ ಅನುಮಾನ ವ್ಯಕ್ತಪಡಿಸಿದ್ದಾನೆ.. ಇಷ್ಟಕ್ಕೆ ಸಿಟ್ಟಿಗೆದ್ದ ಪತ್ನಿ ನನ್ನನ್ನ ಸಾಧ್ಯವಾದ್ರೆ ರೆಡ್ ಹ್ಯಾಂಡ್ ಆಗಿ ಹಿಡಿ ಅಂತ ಗಂಡನಿಗೆ ಚಾಲೆಂಜ್ ಮಾಡಿ ಬಳಿಕ ತವರು ಸೇರಿದ್ದಳು.. ಆಕೆಯ ಸವಾಲ್ ಸ್ವೀಕರಿಸಿರುವ ಪತಿ ಕಡೆಗೂ ಪತ್ನಿ ಹಾಗೂ ಆಕೆಯ ಪ್ರಿಯತಮನನ್ನ ರೆಡ್ ಹ್ಯಾಂಡ್ ಆಗಿ ಹಿಡಿದು ಇಬ್ಬರನ್ನೂ ಮನಸೋ ಇಚ್ಚೆ ಥಳಿಸಿದ್ದಾನೆ. ಈ ಘಟನೆ ಗುಜರಾತ್ನ ಸೂರತ್ ವಲ್ಸಡ್ ಎಂಬ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಪತ್ನಿ ದೂರವಾದ ನಂತರ ಆಕೆಯ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಪತಿ ಕೈಗೆ ಅವರಿಬ್ಬರೂ ತಗಲಾಕಿಕೊಂಡಿದ್ದಾರೆ. ಆಕೆ ತನ್ನ ಪ್ರೇಮಿಯನ್ನು ಮೆನೆಯೊಂದಕ್ಕೆ ಕರೆಸಿಕೊಂಡಿದ್ದಳು. ಇದರ ಸುಳಿವು ಸಿಕ್ಕಿ ಅಲ್ಲಿಗೆ ಹೋದ ಪತಿ, ಇಬ್ಬರನ್ನೂ ಕೋಣೆಯಿಂದ ಹೊರಕ್ಕೆ ಎಳೆದು ಥಳಿಸಿದ್ದಾನೆ. ನಂತರ ಪೊಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅಲ್ಲದೇ ಪೊಲೀಸರು ಪತಿಯನ್ನ ಬಂಧಿಸಿದ್ದರು. ಇದೀಗ ಆತ ಜಾಮೀನಿನ ಮೇಲೆ ಹೊರಬಂದಿದ್ದಾನೆ.








