ಮಂಗಳೂರು ಏರ್ಪೋರ್ಟ್ ಗೆ ಕೋಟಿ-ಚೆನ್ನಯರ ಹೆಸರಿಡುವಂತೆ ಮಿಥುನ್ ರೈ ಆಗ್ರಹ Mangalore Adani Airport
ಮಂಗಳೂರು, ನವೆಂಬರ್18: ಮಂಗಳೂರು ಅದಾನಿ ಏರ್ಪೋರ್ಟ್ ನಲ್ಲಿ ತುಳುನಾಡಿನ ಪಿಲಿನಲಿಕೆಯ ಆಕೃತಿಯನ್ನು ತೆಗೆದು ಅದಾನಿಯವರ ಲಾಂಭನ ಇಟ್ಟಿರುವುದನ್ನು ದ.ಕ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಖಂಡಿಸಿದ್ದಾರೆ. Mangalore Adani Airport

24 ಗಂಟೆಯ ಒಳಗಾಗಿ ಪಿಲಿನಲಿಕೆಯ ಆಕೃತಿಯನ್ನು ಮರು ಪ್ರತಿಷ್ಠಾಪನೆ ಮಾಡಬೇಕು ಮತ್ತು ವಿಮಾನ ನಿಲ್ದಾಣಕ್ಕೆ ಕೋಟಿ -ಚೆನ್ನಯರ ಹೆಸರನ್ನು ಇಡಬೇಕು ಎಂದು ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುಳುನಾಡಿನ ಸಂಸ್ಕೃತಿಯ ಪ್ರತಿಬಿಂಬ ಪಿಲಿನಲಿಕೆಯ ಆಕೃತಿಯನ್ನು ತೆಗೆಯಲಾಗಿದೆ. ಅದರ ಬದಲು ಅದಾನಿಯವರ ಲಾಂಭನ ಆನೆಯ ಆಕೃತಿಯನ್ನು ಇಡಲಾಗಿದೆ. ಈ ಮೂಲಕ ತುಳುನಾಡಿನ ಸಂಸ್ಕೃತಿಯನ್ನು ವಿಮಾನ ನಿಲ್ದಾಣದ ಒಳಗಡೆ ಕೂಡಾ ನಶಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದುದರಿಂದ ವಿಮಾನ ನಿಲ್ದಾಣದ ಸಿಇಒಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ. 24 ಗಂಟೆಯ ಒಳಗೆ ಪಿಲಿನಲಿಕೆಯ ಆಕೃತಿಯನ್ನು ಮರು ಪ್ರತಿಷ್ಠಾಪನೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಅದಾನಿಯವರ ಲಾಂಭನವನ್ನು ಬೇಕಾದಲ್ಲಿ ಬೇರೆ ಕಡೆ ಪ್ರತಿಷ್ಠಾಪಿಸಿ ಆದರೆ ತುಳುನಾಡಿನ ಸಂಸ್ಕೃತಿಗೆ ಧಕ್ಕೆ ಮಾಡುವ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಮಿಥುನ್ ರೈ ಎಚ್ಚರಿಕೆ ನೀಡಿದರು.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸರ್ಕಾರ ಅದಾನಿ ಸಮೂಹಕ್ಕೆ ಹಸ್ತಾಂತರಿಸಿರುವುದರಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಿರುವುದನ್ನು ನಾವು ಖಂಡಿಸುತ್ತೇವೆ ಮತ್ತು ಈಗಾಗಲೇ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸಿದ್ದೇವೆ ಎಂದು ಅವರು ಹೇಳಿದರು.

ವಿಮಾನ ನಿಲ್ದಾಣದ ಹೆಸರು ಬದಲಾಯಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ಅವಮಾನ ಮಾಡಲಾಗಿದೆ.ಆದುದರಿಂದ ಈ ಹಿಂದೆ ಪ್ರಸ್ತಾಪಿಸಿದಂತೆ, ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕು. ಇದಕ್ಕೆ ಸಂಬಂಧಿಸಿದಂತೆ ನವೆಂಬರ್18ರಂದು ಸಂಜೆ ನಗರದ ಸರ್ಕ್ಯೂಟ್ ಹೌಸ್ ನಿಂದ ವಿಮಾನ ನಿಲ್ದಾಣದವರೆಗೆ ಪಂಜಿನ ಮೆರವಣಿಗೆ ನಡೆಸಲಾಗುವುದು ಎಂದು ಮಿಥುನ್ ರೈ ತಿಳಿಸಿದ್ದಾರೆ.
Mr @gautam_adani , since you are the decision making authority now for the Mangaluru International Airport, instead of changing to Adani Airports, we the citizens of Mangaluru humbly request you to change it to KOTI CHENNAYA International Airport.#AdaniTakesOverMangaluruAirport pic.twitter.com/y0v4FMBACf
— Mithun Rai (@TheMithunRai) October 31, 2020
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಕಂಪೆನಿಗೆ ಗುತ್ತಿಗೆಗೆ ನೀಡಿದ್ದರೂ ಕೂಡಾ ವಿಮಾನ ನಿಲ್ದಾಣದ ಹೆಸರು ಬದಲಾವಣೆ ಮಾಡಿಲ್ಲ. ಇನ್ನು ಗುಜರಾತ್ ಮುಂಬೈ ವಿಮಾನ ನಿಲ್ದಾಣಗಳ ಹೆಸರನ್ನು ಬದಲಾವಣೆ ಬದಲಾಯಿಸಿ ಗುತ್ತಿಗೆ ಕಂಪನಿಯ ಹೆಸರನ್ನು ಸೂಚಿಸಿಲ್ಲ. ಇಲ್ಲಿನ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಈ ಬಗ್ಗೆ ತಮ್ಮ ಇಚ್ಛಾ ಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ ಎಂದು ಅವರು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶುಂಠಿಯ ಅಸಂಖ್ಯಾತ ಆರೋಗ್ಯ ಪ್ರಯೋಜನಗಳು#health#healthtips#healthcare#GINGERhttps://t.co/80SBmAXYZS
— Saaksha TV (@SaakshaTv) October 25, 2020
ಪ್ರಧಾನಿ ಮೋದಿಯವರು ಮಿಲಿಟರಿ ಸಮವಸ್ತ್ರ ಧರಿಸಿರುವುದನ್ನು ಪ್ರಶ್ನಿಸಿದ ಯೂತ್ ಕಾಂಗ್ರೆಸ್https://t.co/HCkz0WsXWC
— Saaksha TV (@SaakshaTv) November 17, 2020








