ಕೋವಿಡ್-19 ಲಸಿಕೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿಗಳು
ಹೊಸದಿಲ್ಲಿ, ಜನವರಿ15: ನಾಳೆಯಿಂದ ಕೊರೋನಾ ಲಸಿಕೆ ಅಭಿಯಾನವು ದೇಶದಾದ್ಯಂತ ಪ್ರಾರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 16 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತದಲ್ಲಿ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗಿದೆ ಎಂದು ಸರ್ಕಾರ ಗುರುವಾರ ತಿಳಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈಗಾಗಲೇ ಲಸಿಕೆಗಳ ಪಟ್ಟಿ, ದೈಹಿಕ ನಿರ್ದಿಷ್ಟತೆ, ಡೋಸೇಜ್, ಕೋಲ್ಡ್ ಚೈನ್ ಸ್ಟೋರೇಜ್ ಅವಶ್ಯಕತೆಗಳು, ನಿರ್ಬಂಧಗಳು ಮತ್ತು ಸಣ್ಣ ಎಇಎಫ್ ಐಗಳು ಕುರಿತು ಮಾಹಿತಿ ಹೊಂದಿರುವ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳ ಸಮಗ್ರ ಫ್ಯಾಕ್ಟ್ ಶೀಟ್ ಅನ್ನು ರಾಜ್ಯಗಳಿಗೆ ಕಳುಹಿಸಿದೆ.
ಕೊರೋನವೈರಸ್ ಲಸಿಕೆ ಬೇಕು ಅಥವಾ ಬೇಡಗಳನ್ನು ಒಳಗೊಂಡ ಕೈಪಿಡಿಯ ಮಾಹಿತಿಯನ್ನು ಎಲ್ಲಾ ಪ್ರೋಗ್ರಾಂ ಮ್ಯಾನೇಜರ್ ಗಳು, ಕೋಲ್ಡ್ ಚೈನ್ ಹ್ಯಾಂಡ್ಲರ್ ಗಳು ಮತ್ತು ಲಸಿಕೆಗಾರರಿಗೂ ಹಂಚಲಾಗಿದೆ.
ಕೈಪಿಡಿಯಲ್ಲಿ ತಿಳಿಸಿರುವಂತೆ , 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.
ಗರ್ಭಿಣಿ ಮಹಿಳೆಯರು/ ತಮ್ಮ ಗರ್ಭಾವಸ್ಥೆಯ ಬಗ್ಗೆ ಖಚಿತತೆ ಇಲ್ಲದ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರು ಈ ಲಸಿಕೆಯನ್ನು ಪಡೆಯಬಾರದು ಎಂದು ಕೈಪಿಡಿಯಲ್ಲಿ ತಿಳಿಸಲಾಗಿದೆ.
ಕೋವಿಡ್-19 ಲಸಿಕೆಯ ಬಗ್ಗೆ ಕೈಪಿಡಿ ಏನು ಹೇಳುತ್ತದೆ ?
1. ಕೋವಿಡ್-19 ಲಸಿಕೆಯನ್ನು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾತ್ರ ನೀಡಲಾಗುತ್ತದೆ
2. ಲಸಿಕೆಯ ನಿರ್ವಹಣೆಯನ್ನು 14 ದಿನಗಳ ಅಂತರದಲ್ಲಿ ಪ್ರತ್ಯೇಕಿಸಬೇಕು
3. ಎರಡನೇ ಡೋಸ್ ಮೊದಲ ಡೋಸ್ ಒಂದೇ ಲಸಿಕೆಯಾಗಿರಬೇಕು ಮತ್ತು ಪರಸ್ಪರ ಚುಚ್ಚುಮದ್ದು, ಬದಲಾಯಿಸಲು ಅನುಮತಿ ಇಲ್ಲ
ಕೋವಿಡ್-19 ಮೂಲ ಪತ್ತೆ ಹಚ್ಚಲು ಚೀನಾದ ವುಹಾನ್ ಗೆ ಆಗಮಿಸಿದ ವಿಶ್ವ ಆರೋಗ್ಯ ಸಂಸ್ಥೆ (WHO) ತಂಡ
ನಿರ್ಬಂಧನೆಗಳು
1. ಕೊವಿಡ್-19 ಸೋಂಕಿನ ಇತಿಹಾಸ ಹೊಂದಿರುವ ವ್ಯಕ್ತಿಗಳು:
-ಕೊವಿಡ್-19 ಲಸಿಕೆಯ ಮೊದಲ ಡೋಸ್ ಗೆ ಅಲರ್ಜಿ ಪ್ರತಿಕ್ರಿಯೆ ತೋರಿಸಿದವರು
-ಲಸಿಕೆ/ ಚುಚ್ಚುಮದ್ದಿನ ಚಿಕಿತ್ಸೆಗಳು, ಔಷಧ ಉತ್ಪನ್ನಗಳು, ಆಹಾರ-ಪದಾರ್ಥಗಳು ಇತ್ಯಾದಿಗಳಿಗೆ ತಕ್ಷಣದ ಅಥವಾ ವಿಳಂಬಿತ ಅನಾಫಿಲಾಕ್ಸಿಸ್ ಅಥವಾ ಅಲರ್ಜಿ ಪ್ರತಿಕ್ರಿಯೆ.
2. ಗರ್ಭಧಾರಣೆ ಮತ್ತು ಹಾಲುಣಿಸುವಿಕೆ:
-ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ಮಹಿಳೆಯರು ಯಾವುದೇ ಕೋವಿಡ್-19 ಲಸಿಕೆಯ ವೈದ್ಯಕೀಯ ಪ್ರಯೋಗದ ಭಾಗವಾಗಿಲ್ಲ. ಆದ್ದರಿಂದ, ಗರ್ಭಿಣಿ ಮಹಿಳೆಯರು/ ತಮ್ಮ ಗರ್ಭಧಾರಣೆಯ ಬಗ್ಗೆ ಖಚಿತತೆ ಇಲ್ಲದ ಮಹಿಳೆಯರು ಮತ್ತು ಹಾಲುಣಿಸುವ ಮಹಿಳೆಯರು ಕೋವಿಡ್-19 ಲಸಿಕೆಯನ್ನು ಪಡೆಯುವಂತಿಲ್ಲ.
ತಾತ್ಕಾಲಿಕ ನಿರ್ಬಂಧಗಳು:
ಕೋವಿಡ್-19 ಸೋಂಕಿನಿಂದ ಚೇತರಿಕೆ ಕಂಡ 4-8 ವಾರಗಳ ಕಾಲ ಲಸಿಕೆಯನ್ನು ಮುಂದೂಡಬೇಕಾಗುತ್ತದೆ
1. ಸಾರ್ಸ್-ಕೋವ್-2 ಸೋಂಕಿನ ಸಕ್ರಿಯ ಲಕ್ಷಣಗಳು ಕಾಣಿಸಿಕೊಂಡಿರುವ ವ್ಯಕ್ತಿಗಳು,
2. ಸಾರ್ಸ್-ಕೊವಿ-2 ರೋಗಿಗಳಿಗೆ ಸಾರ್ಸ್-ಕೊವಿ-2 ಮೊನೊಕ್ಲೋನಲ್ ಪ್ರತಿಕಾಯಗಳು ಅಥವಾ ಕೋವಲೆಸೆಂಟ್ ಪ್ಲಾಸ್ಮಾವನ್ನು ಪಡೆದವರು,
3. ತೀವ್ರ ಅಸ್ವಸ್ಥ ಮತ್ತು ಯಾವುದೇ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದವರು ಲಸಿಕೆಯನ್ನು ತಾತ್ಕಾಲಿಕವಾಗಿ ಮುಂದೂಡಬೇಕಾಗುತ್ತದೆ.
ವಿಶೇಷ ಮುನ್ನೆಚ್ಚರಿಕೆಗಳು:
ರಕ್ತಸ್ರಾವ ಅಥವಾ ಹೆಪ್ಪುಗಟ್ಟುವ ಅಂಶದ ಕೊರತೆ, ಅಥವಾ ಪ್ಲೇಟ್ಲೆಟ್ ಅಸ್ವಸ್ಥತೆ ಅಥವಾ ಕೊಗ್ಯುಲೇಶನ್ ಅಸ್ವಸ್ಥತೆಯ ಇತಿಹಾಸವಿರುವ ವ್ಯಕ್ತಿಗಳಿಗೆ ಲಸಿಕೆಯನ್ನು ನೀಡುವಾಗ ಎಚ್ಚರಿಕೆ ವಹಿಸಬೇಕು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಮೊಟ್ಟೆಗಳ ಸೇವನೆಯಿಂದ ಮೂತ್ರಪಿಂಡ (ಕಿಡ್ನಿ) ತೊಂದರೆhttps://t.co/f1WeQRvdL9
— Saaksha TV (@SaakshaTv) January 12, 2021
ಎಷ್ಟು ಮೊತ್ತಕ್ಕಿಂತ ಹೆಚ್ಚಿನ ಆಭರಣ ಖರೀದಿಗೆ ಪ್ಯಾನ್ / ಆಧಾರ್ ದಾಖಲೆ ಕಡ್ಡಾಯ ? – ಇಲ್ಲಿದೆ ಮಾಹಿತಿhttps://t.co/CrjHYzvDzK
— Saaksha TV (@SaakshaTv) January 12, 2021