ಝಿಕಾ ವೈರಸ್ ನ ಬಗ್ಗೆ ತಿಳಿದಿರಬೇಕಾದ ಪ್ರಮುಖ ಮಾಹಿತಿಗಳು
ಕೋವಿಡ್ ಸೋಂಕಿನ ನಂತರ, ಝಿಕಾ ವೈರಸ್ ವೇಗವಾಗಿ ಹರಡುತ್ತಿದೆ. ಕೇರಳದಲ್ಲಿ 60 ಕ್ಕೂ ಹೆಚ್ಚು ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಶನಿವಾರ ಮಹಾರಾಷ್ಟ್ರದ ಪುಣೆಯಲ್ಲಿ ಮೊದಲ ಪ್ರಕರಣ ವರದಿಯಾಗಿದೆ. ಇಲ್ಲಿ 50 ವರ್ಷದ ಮಹಿಳೆಗೆ ಝಿಕಾ ವೈರಸ್ ತಗುಲಿರುವುದು ವರದಿಯಲ್ಲಿ ಧೃಡಪಟ್ಟಿದೆ. ಜುಲೈ 8 ರಂದು ಕೇರಳದಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ವರದಿಯಾಗಿದೆ. ಪ್ರಸ್ತುತ, ಇಲ್ಲಿ 63 ಸಕ್ರಿಯ ಪ್ರಕರಣಗಳಿವೆ. ಆದರೆ ಅಧಿಕಾರಿಗಳು ಯಾರೂ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಆತಂಕಿತರಾಗುವ ಅವಶ್ಯಕತೆ ಇಲ್ಲ ಎಂದು ಜನರಿಗೆ ಮನವಿ ಮಾಡಲಾಗಿದೆ. ಝಿಕಾ ವೈರಸ್ ಪತ್ತೆಯಾದ ಮಹಿಳೆ ಚಿಕಿತ್ಸೆ ಪಡೆದ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಡಬ್ಲ್ಯುಎಚ್‌ಒ ಪ್ರಕಾರ, ಝಿಕಾ ವೈರಸ್ ಡೆಂಗ್ಯೂ ಜ್ವರ, ಹಳದಿ ಜ್ವರ ಮತ್ತು ವೆಸ್ಟ್ ನೈಲ್ ವೈರಸ್ ಅನ್ನು ಹೋಲುತ್ತದೆ ಮತ್ತು ಹೆಚ್ಚಾಗಿ ಈಡಿಸ್ ಜಾತಿಯ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಇದು ಮುಂಜಾನೆ ಮತ್ತು ಮಧ್ಯಾಹ್ನ ಅಥವಾ ಸಂಜೆ ಕೂಡ ಕಚ್ಚುತ್ತದೆ.
ಝಿಕಾ ವೈರಸ್ ರೋಗಲಕ್ಷಣಗಳು
– ಜ್ವರ
– ದೇಹದಲ್ಲಿ ನೋವು
– ದದ್ದು
– ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು
– ಅಸ್ವಸ್ಥತೆ ಅಥವಾ ತಲೆನೋವು.
ಸಾಮಾನ್ಯವಾಗಿ ಈ ರೋಗಲಕ್ಷಣಗಳು 2 ರಿಂದ 7 ದಿನಗಳವರೆಗೆ ಇರುತ್ತದೆ. ಹೆಚ್ಚಿನ ಸೋಂಕಿತ ಜನರಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಸಂಭವ ಕಡಿಮೆ.
ಝಿಕಾ ವೈರಸ್ ಸೊಳ್ಳೆ ಕಡಿತದಿಂದ ಹರಡುತ್ತದೆ. ಗರ್ಭಿಣಿ ಮಹಿಳೆಯಿಂದ ಭ್ರೂಣಕ್ಕೆ ಹರಡುತ್ತದೆ. ಲೈಂಗಿಕ ಸಂಪರ್ಕ ಮತ್ತು ರಕ್ತ ವರ್ಗಾವಣೆಯ ಮೂಲಕ ಸಹ ಹರಡುತ್ತದೆ.
ಡಬ್ಲ್ಯುಎಚ್‌ಒ ಪ್ರಕಾರ, ರಕ್ತ ಅಥವಾ ಮೂತ್ರ ಅಥವಾ ವೀರ್ಯದಂತಹ ಇತರ ದೇಹದ ದ್ರವಗಳನ್ನು ಪ್ರಯೋಗಾಲಯದಲ್ಲಿ ಝಿಕಾ ವೈರಸ್ ಪತ್ತೆ ಹಚ್ಚಲು ಪರೀಕ್ಷಿಸಲಾಗುತ್ತದೆ.
ಇಲ್ಲಿಯವರೆಗೆ, ಝಿಕಾ ವೈರಸ್‌ಗೆ ಲಸಿಕೆ ಅಥವಾ ಔಷಧವನ್ನು ಕಂಡುಹಿಡಿದಿಲ್ಲ. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದು ಮಾತ್ರ ಇದಕ್ಕಿರುವ ಉತ್ತಮ ಮಾರ್ಗವಾಗಿದೆ.
ಝಿಕಾ ವೈರಸ್ ಕಾಣಿಸಿಕೊಂಡಾಗ
ಉತ್ತಮ ವಿಶ್ರಾಂತಿ ತೆಗೆದುಕೊಳ್ಳಬೇಕು
ಜ್ವರ ಮತ್ತು ನೋವಿಗೆ ವೈದ್ಯರ ಸಲಹೆಯಂತೆ ಔಷಧಿ ತೆಗೆದುಕೊಳ್ಳಬೇಕು
ದ್ರವ ಪಾನೀಯಗಳನ್ನು ಹೆಚ್ಚಾಗಿ ಕುಡಿಯಬೇಕು
ಯಾವುದೇ ಔಷಧಿ ತೆಗೆದುಕೊಳ್ಳುವ ಮೊದಲು, ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಹೆಸರು ಹಿಟ್ಟಿನ ಲಾಡು#Saakshatv #cookingrecipe https://t.co/m8zrY89gyn
— Saaksha TV (@SaakshaTv) August 1, 2021
ಅರಿಶಿನ ಎಣ್ಣೆಯಿಂದ ದೇಹಕ್ಕೆ ಸಿಗುವ ಪ್ರಯೋಜನಗಳು#Saakshatv #healthtips #turmeric #oil https://t.co/SjewS9wI9u
— Saaksha TV (@SaakshaTv) August 1, 2021
ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಸುಲಭ ವಿಧಾನ#Saakshatvhealth #thyroidproblem https://t.co/6SmYRUSeqt
— Saaksha TV (@SaakshaTv) July 31, 2021
ಮನೆಯಲ್ಲೇ ಕೊರೋನಾ ಸೋಂಕಿನ ತಪಾಸಣೆಗಾಗಿ ಹೋಮ್ ಟೆಸ್ಟ್ ಕಿಟ್#homekits https://t.co/TiAKhu3KCy
— Saaksha TV (@SaakshaTv) July 31, 2021
#Importantinformation #zikavirus