01. ಕೊರೋನಾ ಸಾಂಕ್ರಾಮಿಕದಿಂದ ಉಂಟಾಗುವ ಆರ್ಥಿಕ ಕುಸಿತದಿಂದಾಗಿ ಏಪ್ರಿಲ್‌ನಲ್ಲಿ ಸ್ಥಗಿತಗೊಂಡಿದ್ದ ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನು ಹೆಚ್ಚಳವನ್ನು ಕೇಂದ್ರವು ಪುನಃಸ್ಥಾಪಿಸುವ ನಿರೀಕ್ಷೆಯಿರುವುದರಿಂದ ಮುಂದಿನ ವರ್ಷ ಕೇಂದ್ರ ಸರ್ಕಾರಿ ನೌಕರರು ಹೆಚ್ಚಿನ ವೇತನ ಪಡೆಯುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ – 2021ರಲ್ಲಿ ಹೆಚ್ಚಾಗಲಿದೆಯಂತೆ ಕೇಂದ್ರ ಸರ್ಕಾರಿ ನೌಕರರ ವೇತನ
02. ಪಡಿತರ ಚೀಟಿಗಳನ್ನು ಆಹಾರ ಧಾನ್ಯಗಳು ಮತ್ತು ಇತರ ವಸ್ತುಗಳನ್ನು ಪಡೆಯಲು ಬಳಸದಿದ್ದರೆ ಅದನ್ನು 3 ತಿಂಗಳಲ್ಲಿ ರದ್ದುಗೊಳಿಸಲಾಗುವುದು ಎಂದು ವರದಿಯಾದ ನಂತರ, ಕೇಂದ್ರ ಸರ್ಕಾರ ಈ ವರದಿಯನ್ನು ನಕಲಿ ಎಂದು ಸ್ಪಷ್ಟೀಕರಣವನ್ನು ನೀಡಿದೆ. ಸ್ಪಷ್ಟೀಕರಣದಲ್ಲಿ, ಸರ್ಕಾರವು ಅಂತಹ ಯಾವುದೇ ಮಾರ್ಗಸೂಚಿಗಳನ್ನು ನೀಡಿಲ್ಲ ಎಂದು ಹೇಳಿದೆ.
ಪಡಿತರ ಚೀಟಿಗಳನ್ನು 3 ತಿಂಗಳಲ್ಲಿ ಬಳಸದಿದ್ದರೆ ರದ್ದುಗೊಳಿಸಲಾಗುವುದಿಲ್ಲ – ಕೇಂದ್ರದ ಸ್ಪಷ್ಟೀಕರಣ
03.
ಕೋವಿಡ್-19 ಸಾಂಕ್ರಾಮಿಕವು ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಕೋವಿಡ್-19 ವಿರುದ್ಧದ ವಿಶ್ವ ಸಮರ ಎಂದು ಹೇಳಿದ ಸುಪ್ರೀಂ ಕೋರ್ಟ್, ಸಾಂಕ್ರಾಮಿಕದಿಂದಾಗಿ ವಿಶ್ವದ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಬಳಲುತ್ತಿದ್ದಾರೆ ಎಂದು ಹೇಳಿದೆ.
ಕೋವಿಡ್-19 ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ – ಸುಪ್ರೀಂ ಕೋರ್ಟ್
04 . ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 25,153 ಸೋಂಕಿತರು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1 ಕೋಟಿಯ ಗಡಿ ದಾಟಿದೆ.
ದೇಶದಲ್ಲಿ 1 ಕೋಟಿ ಗಡಿದಾಟಿದ ಕೊರೊನಾ ಸೋಂಕಿತರ ಸಂಖ್ಯೆ
05. ಅಮರಾವತಿ : ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಬೊಂಡಪಲ್ಲಿ ಪ್ರದೇಶದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು…









