ಭಾರತಕ್ಕೆ ಆದ್ಯತೆ… ಅಮೆರಿಕಾ ವಿರುದ್ಧ ‘ಚೀನಾ ಗುಲಾಮ’ ಪಾಕಿಸ್ತಾನ ಅಸಮಾಧಾನ..!
ಚೀನಾದ ಗುಲಾಮ… ಉಗ್ರರ ಲಾಲನೆ ಪೋಷಣೆ ಮಾಡುತ್ತಿರುವ ಟೆರರಿಸ್ಟ್ ದೇಶ ಪಾಕಿಸ್ತಾನಕ್ಕೆ ಭಾರತದ ಏಳಿಗೆಯನ್ನ ಸಹಿಸುವ ಶಕ್ತಿ ಇಲ್ಲ ಅನ್ನೋದು ಎಲ್ರಿಗೂ ಗೊತ್ತಿರುವ ವಿಚಾರವೇ.. ಆದ್ರೆ ಉಗ್ರ ದೇಶ ಪಾಕಿಸ್ತಾನಕ್ಕಿಂದ ಭಾರತಕ್ಕೆ ಅಮೆರಿಕಾ ಆದ್ಯತೆ ನೀಡುತ್ತಿರೋದನ್ನ ಪಾಕಿಸ್ತಾನ ಮಾನ್ಯ ಪ್ರಧಾನಿಗಳಾದ ಇಮ್ರಾನ್ ಖಾನ್ ಅವರ ಕೈಲಿ ಸಹಿಸಿಕೊಳ್ಳೋದಕ್ಕೆ ಆಗ್ತಿಲ್ಲ..
ಹೌದು.. ಅಫ್ಗಾನಿಸ್ತಾನದಲ್ಲಿರುವ ಅವ್ಯವಸ್ಥೆಯನ್ನು ತೆರವುಗೊಳಿಸುವುದಕ್ಕೆ ಮಾತ್ರ ಪಾಕಿಸ್ತಾನವನ್ನು ಉಪಯುಕ್ತವಾಗಿ ಪರಿಗಣಿಸಿದೆ. ಆದರೆ ವ್ಯೂಹಾತ್ಮಕ ಸಹಭಾಗಿತ್ವದ ವಿಚಾರದಲ್ಲಿ ಭಾರತಕ್ಕೆ ಆದ್ಯತೆ ಕೊಡುತ್ತಿದೆ ಎಂದು ಅಮೆರಿಕ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಸಮಾಧಾನ ಹೊರ ಹಾಕಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಂಚಿತರಾದವರಿಗೂ ‘ಅಲ್ಟ್ರಾಜ್’ ಕಾರು ಗಿಫ್ಟ್ ಆಗಿ ಕೊಟ್ಟ ಟಾಟಾ..!
ವಿದೇಶಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರೋ ಇಮ್ರಾನ್ ಕಳೆದ 20 ವರ್ಷಗಳಲ್ಲಿ ಅಫ್ಗಾನಿಸ್ತಾನದಲ್ಲಿರುವ ಅವ್ಯವಸ್ಥೆಯನ್ನು ಹೋಗಲಾಡಿಸಲು ಪಾಕಿಸ್ತಾನವನ್ನು ಅಮೆರಿಕಾ ಉಪಯುಕ್ತವಾಗಿ ಪರಿಗಣಿಸಿದೆ. ಆದ್ರೆ ಅಮೆರಿಕವು ಭಾರತದೊಂದಿಗೆ ವ್ಯೂಹಾತ್ಮಕ ಸಹಭಾಗಿತ್ವದ ನಿರ್ಣಯದ ಬಳಿಕ ಪಾಕಿಸ್ತಾನವನ್ನು ವಿಭಿನ್ನವಾಗಿ ಪರಿಗಣಿಸುತ್ತಿದೆ ಎಂದು ಹೇಳಿಕೊಂಡಿರೋದಾಗಿ ವರದಿಯಾಗಿದೆ. ಅಷ್ಟೇ ಅಲ್ಲ ಅಮೆರಿಕದ ನೂತನ ಅಧ್ಯಕ್ಷರಾಗಿ ಜನವರಿಯಲ್ಲಿ ಪದಗ್ರಹಣ ಮಾಡಿರುವ ಜೋ ಬೈಡನ್ ಇದುವರೆಗೆ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿಲ್ಲ. ಇದು ಕೂಡ ಇಮ್ರಾನ್ ಖಾನ್ ಕಣ್ಣು ಕೆಂಪಾಗುವುದಕ್ಕೆ ಕಾರಣವಾಗಿದೆ.
ಇದಕ್ಕೆ ಹೇಳೋದು… ಮನುಷ್ಯರಿಗಿಂತ ವಿಷಪೂರಿತ ಪ್ರಾಣಿ ಮತ್ತೊಂದಿಲ್ಲ..! ಹಾವು ಕಚ್ಚಿದ ಸಿಟ್ಟಲ್ಲಿ …ಅದೇ ಹಾವಿಗೆ ಕಚ್ಚಿ ಕೊಂದ ಭೂಪ..!
ಆಗಸ್ಟ್ 31ರೊಳಗೆ ಅಫ್ಗಾನಿಸ್ತಾನದಿಂದ ನ್ಯಾಟೋ ಪಡೆಗಳನ್ನು ಹಿಂಪಡೆಯುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ ಬೆನ್ನಲ್ಲೇ ಅಲ್ಲಿ ತಾಲಿಬಾನ್ ಹಿಂಸಾಚಾರ ಹೆಚ್ಚಿದೆ. ಈ ವರೆಗೂ ಎಷ್ಟೋ ಜನರ ಬಲಿ ಪಡೆದಿರುವ ತಾಲಿಬಾನಿ ಉಗ್ರರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮುಂತಾದ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಅಕ್ಷರಸಹ ಅಫ್ಗಾನ್ ನರಕವಾಗಿ ಮಾರ್ಪಾಡಾಗಿದೆ.. ಈ ತಾಲೀಬಾನಿಗಳಿಗೆ ಚೀನಾ ಹಾಗೂ ಪಾಕಿಸ್ತಾನದ ಸಪೋರ್ಟ್ ಕೂಡ ಇದೆ.. ಶೇ 75 ರಷ್ಟು ಅಫ್ಗಾನ್ ತಾಲೀಬಾನಿಗಳ ವಶದಲ್ಲಿದ್ದು, ಇದೀಗ ಅಫ್ಗಾನಿಸ್ತಾನ ಸರ್ಕಾರ ತಾಲೀಬಾನಿಗಳ ಜೊತೆಗೆ ಅಧಿಕಾರ ಹಂಚಿಕೆಗೆ ಮುಂದಾಗಿದೆ..








