ಪುರುಷರೇನೂ ರೋಬೋಟ್ ಗಳಲ್ಲ – ಮಹಿಳೆಯರು ಕಡಿಮೆ ಬಟ್ಟೆ ಧರಿಸುವುದೇ ಅತ್ಯಾಚಾರಕ್ಕೆ ಕಾರಣ – ಪಾಕ್ ಪ್ರಧಾನಿ ಇಮ್ರಾನ್
ಪಾಕಿಸ್ತಾನ : ಪಾಕಿಸ್ತಾನ ಪ್ರದಾನಿಗಳಾದ ಇಮ್ರಾನ್ ಖಾನ್ ಅವರ ವಿಚಾರಧಾರೆ ಮಹಿಳೆಯರ ವಿಚಾರದಲ್ಲಿ ಯಾವ ರೀತಿ ಇದೆ ಅನ್ನೋದು ಅವರ ಮಾತುಗಳಿಂದಲೇ ಗೊತ್ತಾಗುತ್ತೆ.. ಅತ್ಯಾಚಾರ ಪ್ರಕರಣಗಳ ಬಗ್ಗೆ ಅವರು ಇತ್ತೀಚಿನ ದಿನಗಳಲ್ಲಿ ನೀಡುತ್ತಿರುವ ಹೇಳಿಕೆಗಳು ಮಹಿಳೆಯರು , ಮಹಿಳಾ ಹೋರಾಟಗಾರ್ತಿಯರ ಆಕ್ರೋಶಕ್ಕೂ ಕಾರಣವಾಗಿದೆ.. ಜೊತೆಗೆ ತಮ್ಮ ಮಾತಿನಿಂದ ಇಡೀ ವಿಶ್ವದ ಮುಂದೇ ಮತ್ತಷ್ಟು ಮುಜುಗರಕ್ಕೆ ಪಾಕ್ ಪ್ರಧಾನಿ ಒಳಗಾಗ್ತಿದ್ದಾರೆ..
ಹೌದು.. ಮಹಿಳೆಯರು ಕಡಿಮೆ ಬಟ್ಟೆ ಧರಿಸುವುದರಿಂದ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತದೆ ಎಂಬ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಮಹಿಳಾ ಪರ ನಾಯಕಿಯರ ಕೆಂಗಣ್ಣಿಗೆ ಗುರಿಯಾಗಿದೆ. ಪುರುಷರೇನು ರೋಬೋಟ್ ಗಳಲ್ಲ, ಪಾಕಿಸ್ತಾನದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಲು ಮಹಿಳೆಯರು ತೊಡುವ ಉಡುಗೆಗಳೇ ಕಾರಣ ಎಂದು ಇಮ್ರಾನ್ ಖಾನ್ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸಂದರ್ಶನವೊಂದರಲ್ಲಿ ಪಾಕಿಸ್ತಾನದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ ಕಡಿಮೆ ಮಾಡಲು ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಮಹಿಳೆಯರು ಮೈಮೇಲೆ ಕಡಿಮೆ ಬಟ್ಟೆ ಧರಿಸಿದರೆ ಅದು ಪುರುಷನ ಮೇಲೆ ಪ್ರಭಾವ ಬೀರುತ್ತದೆ.
ಪುರುಷರೇನೂ ರೋಬೋಟ್ ಗಳಲ್ಲ. ಮಹಿಳೆಯರು ತುಂಡು ಬಟ್ಟೆ ತೊಟ್ಟರೆ ಪುರುಷರಿಗೆ ಸಹಜವಾಗಿಯೇ ಪ್ರಚೋದನೆ ಆಗುತ್ತದೆ. ಇದು ಕಾಮನ್ ಸೆನ್ಸ್. ಪ್ರಚೋದನೆಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದವರು ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಸುತ್ತಾರೆ ಎಂದಿದ್ದಾರೆ.
ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಇಮ್ರಾನ್ ಖಾನ್ ಹೇಳಿಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಸಲಾಗ್ತಿದೆ. ಅಂತರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗದ ದಕ್ಷಿಣ ಏಷ್ಯಾದ ಕಾನೂನು ಸಲಹೆಗಾರ್ತಿ ರೀಮಾ ಓಮರ್ ಟ್ವೀಟ್ ಮಾಡಿ ಇಮ್ರಾನ್ ಖಾನ್‍ಗೆ ಅನಾರೋಗ್ಯವಿದೆ ಎಂದು ಹೇಳಿ ಆಕ್ರೋಶ ಹೊರಹಾಕಿದ್ದಾರೆ.
‘ಕಿಮ್ ಸಮ್ರಾಜ್ಯ’ದಲ್ಲಿ ಆಹಾರ ಸಮಸ್ಯೆ : ಬಾಳೆಹಣ್ಣಿಗೆ 3,336 ರೂ., ಬ್ಲಾಕ್ ಟೀ ಬೆಲೆ 5,167 ರೂ.
ಲಸಿಕೆ ಪಡೆಯುವ ಮೊದಲು/ನಂತರ ಗಮನದಲ್ಲಿರಿಸಿಕೊಳ್ಳಬೇಕಾದ ವಿಷಯಗಳು
ಡಿಆರ್‌ಡಿಒ – ಜೂನಿಯರ್ ರಿಸರ್ಚ್ ಫೆಲೋಸ್ ಮತ್ತು ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ