ಆಪರೇಷನ್ ನಂತರ ಇಮ್ರಾನ್ ಆರೋಗ್ಯ ಸ್ಥಿರ – ಕಾಲಿನ ಮೂಳೆ ಕಟ್
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ. ಅವರ ಆಪರೇಷನ್ ಒಂದುವರೆ ಗಂಟೆಗಳ ಕಾಲ ಜರುಜಗಿದೆ. ಕಾಲಿಗೆ ಬುಲೆಟ್‌ನ ಕೆಲವು ತುಣುಕುಗಳು ಸಿಕ್ಕಿಕೊಂಡಿದ್ದು, ಅವುಗಳನ್ನು ತೆಗೆದುಹಾಕಲಾಗಿದೆ. ಗುಂಡು ಬಿದ್ದ ವೇಗಕ್ಕೆ ಕಾಲಿನ ಮೂಳೆ ಕಟ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮತ್ತೊಂದೆಡೆ ಗುಂಡಿನ ದಾಳಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಗುರುವಾರ ತಡರಾತ್ರಿ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಪ್ರತಿಭಟನಾ ಕಾರರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹಲವೆಡೆ ಬೆಂಕಿ ಹಚ್ಚಿ ಘೋಷಣೆ ಕೂಗಲಾಗುತ್ತಿದ್ದು, ಪಾಕಿಸ್ತಾನ ಬಂದ್ ಗೆ ಕರೆ ಕೊಡಲಾಗಿದೆ.
ಗುರುವಾರ ಗುಜ್ರಾನ್‌ವಾಲಾದಲ್ಲಿ ನಡೆದ ಸಮಾವೇಶದಲ್ಲಿ ನಡೆದ ದಾಳಿಯಲ್ಲಿ ಇಮ್ರಾನ್ ಖಾನ್ ಮತ್ತು ಅವರ ಸಂಸದ ಫೈಸಲ್ ಜಾವೇದ್ ಸೇರಿದಂತೆ ಒಟ್ಟು 13 ಜನರು ಗಾಯಗೊಂಡಿದ್ದಾರೆ. ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.
ದಾಳಿಯ ನಂತರ, ಇಮ್ರಾನ್, ಅಲ್ಲಾ ತನಗೆ ಹೊಸ ಜೀವನವನ್ನು ನೀಡಿದ್ದಾನೆ ಎಂದು ಹೇಳಿದ್ದಾನೆ. ಇನ್ಶಾ ಅಲ್ಲಾಹ್ ನಾವು ಮತ್ತೆ ಬರುತ್ತೇವೆ ಮತ್ತು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ.
Imran Khan: Imran health stable after surgery – leg bone cut
ಹೆಚ್ಚಿನ ಮಾಹಿತಿಗಾಗಿ – https://saakshatv.com/twins-and-mother…ಕ್ಕಳು-ಮತ್ತು-ತಾಯಿ/








