ಮತ್ತೆ ಭಾರತವನ್ನ ಕೆಣಕಿದ ಪಾಕ್ – ‘ಕಾಶ್ಮೀರದ ಕುರಿತ ನಿರ್ಧಾರ ಬದಲಾಯಿಸುವವರೆಗೂ ಮಾತುಕತೆ ಸಾಧ್ಯವಿಲ್ಲ’..!
ಪಾಕಿಸ್ತಾನ : ಭಾರತವನ್ನ ಪದೇ ಪದೇ ಕೆಣಕದೇ ಇದ್ರೆ ಪಾಕಿಸ್ತಾನ ಹಾಗೂ ಅಲ್ಲಿನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರಿಗೆ ಸಮಾಧಾನ ಆಗಲ್ಲ ಅಂತ ಕಾಣತ್ತೆ.. ಹೀಗಾಗಿಯೇ ಪದೇ ಪದೇ ನಮ್ಮ ಕಾಶ್ಮೀರದ ವಿಚಾರದ ಬಗ್ಗೆ ಮಾತನಾಡುತ್ತಾ ಜನಗತ್ತಿನ ಮುಂದೆ ಕೀಳಾಗುತ್ತಲೇ ಇದೆ.. ಇತ್ತೀಚೆಗೆ ಮತ್ತಿಮ್ಮೆ ಕಾಶ್ಮೀರದ ವಿಚಾರ ಎತ್ತಿರುವ ಇಮ್ರಾನ್ ಕಾಶ್ಮೀರದ ಕುರಿತಾದ ನಿರ್ಧಾರವನ್ನು ಬದಲಾಯಿಸುವವರೆಗೂ , ಭಾರತದ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಮರುಸ್ಥಾಪನೆ ಮಾಡಬೇಕು, ರದ್ದುಗೊಳಿಸಿರುವ ನಿರ್ಧಾರವನ್ನು ಬದಲಾಯಿಸಬೇಕು ಆಗ ಮಾತ್ರವೇ ಮಾತುಕತೆ ಸಾಧ್ಯ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಭಾರತ 2019 ರ ಆಗಸ್ಟ್ 5 ರಂದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು.
ಈ ಆದೇಶವನ್ನು ಭಾರತ ಹಿಂಪಡೆಯುವವರೆಗೂ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಸಾಧ್ಯವೇ ಇಲ್ಲ ಎಂದು ಸಾರ್ವಜನಿಕರ ಪ್ರಶ್ನೆಗಳಿಗೆ ನೇರ ಪ್ರಸಾರ ಕಾರ್ಯಕ್ರಮವೊಂದರಲ್ಲಿ ಇಮ್ರಾನ್ ಖಾನ್ ಉತ್ತರಿಸಿದ್ದಾರೆ.








