ಬಾಲಿವುಡ್ ಸಿನಿಮಾಗಳ ಕಾಪಿ ಮಾಡೋದನ್ನ ನಿಲ್ಲಿಸಿ – ಪಾಕ್ ಸಿನಿಮಾ ನಿರ್ಮಾಪಕರಿಗೆ ಒತ್ತಾಯಿಸಿದ ಇಮ್ರಾನ್
ಪಾಕಿಸ್ಥಾನ : ದೊಡ್ಡ ದೊಡ್ಡ ಸಿನಿಮಾರಂಗಳು ಅಂತ ತೆಗೆದುಕೊಂಡಾಗ ಆ ಲಿಸ್ಟ್ ನಲ್ಲಿ ಬಾಲಿವುಡ್ ಸಿನಿಮಾರಂಗ ಕೂಡ ಸೇರಿಕೊಳ್ಳುತ್ತದೆ.. ಬಾಲಿವುಡ್ ಸಿನಿಮಾಗಳು ಬಹುತೇಕ ಇಂಡೋನೇಷ್ಯಾ , ಪಾಕಿಸ್ತಾನದಲ್ಲಿ ಸಿಕ್ಕಾಪಟ್ಟೆ ಫೇಮಸ್ ಕೂಡ.. ಅದ್ರಲ್ಲೂ ಪಾಕ್ ನಲ್ಲಿ ಬಹುತೇಕ ಜನರು ಬಾಲಿವುಡ್ ಸಿನಿಮಾಗಳ ಅಭಿಮಾನಿಗಳೇ.. ಇನ್ನೂ ಅಲ್ಲಿನ ಅನೇಕ ಸಿನಿಮಾಗಳು ಬಾಲಿವುಡ್ ಸಿನಿಮಾದ ರೀಮೇಕ್ ಗಳು.. ಆದ್ರೆ ಪಾಕಿಸ್ತಾನದ ಸಿನಿಮಾ ನಿರ್ಮಾಪಕರು ಮೂಲ ವಿಷಗಳನ್ನಿಟ್ಟು ಚಿತ್ರ ನಿರ್ಮಿಸಬೇಕು.. ಬಾಲಿವುಡ್ ಅನ್ನು ಕಾಪಿ ಮಾಡೋದನ್ನ ಬಿಡಬೇಕೆಮದು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರು ಒತ್ತಾಯಿಸಿದ್ದಾರೆ.
ಇಸ್ಲಾಮಾಬಾದ್ ನಲ್ಲಿ ನಡೆದ ಕಿರುಚಿತ್ರೋತ್ಸವ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ , ಪಾಕಿಸ್ತಾನದ ಚಲನಚಿತ್ರೋದ್ಯಮವು ಬಾಲಿವುಡ್ ನಿಂದ ಪ್ರಭಾವಿತವಾದ ಕಾರಣ ಪ್ರಾರಂಬದಲ್ಲಿ ತಪ್ಪುಗಳು ಆಗಿದೆ. ಅಲ್ಲದೆ ಇದರ ಪರಿಣಾಮವಾಗಿ ಮತ್ತೊಂದು ಸಂಸ್ಕೃತಿಯನ್ನು ಕಾಪಿ ಮಾಡಿ ಅದನ್ನೇ ಅಳವಡಿಸಿಕೊಳ್ಳಲು ಕಾರಣವಾಗಿದೆ. ಯುವ ಚಲನಚಿತ್ರ ನಿರ್ಮಾಪಕರಿಗೆ ಹೇಳುವುದೇನೆಂದರೆ ನನ್ನ ಪ್ರಾಪಂಚಿಕ ಅನುಭವದ ಪ್ರಕಾರ, ಸ್ವಂತಿಕೆಯು ಮಾತ್ರ ಉತ್ತಮವಾಗಿರುತ್ತದೆ. ನಕಲಿ ವಿಷಯಗಳಿಗೆ ಯಾವುದೇ ಮೌಲ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮನ್ ಕೀ ಬಾತ್ : ಹಿಂಜರಿಕೆ ಬೇಡ, ಎಲ್ಲರೂ ಲಸಿಕೆ ಪಡೆಯಿರಿ – ಮೋದಿ
“ಪುರುಷರು 10 ಮದುವೆಯಾಗಬಹುದು, ಮಹಿಳೆಯರು 2ನೇ ಮದುವೆಯಾದ್ರೆ ತಪ್ಪಾ..?”








