’ಭಾರತದ ಜೊತೆಗೆ ಮಾತುಕತೆಗೆ ಸಿದ್ಧ ಆದ್ರೆ… ಕಂಡೀಷನ್ ಅಪ್ಲೈ’ – ಇಮ್ರಾನ್ ಖಾನ್
ಪಾಕಿಸ್ತಾನ : ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಅದ್ಯಾಕೋ ಏನೋ ಭಾರತದ ಕಾಶ್ಮೀರದ ಬಗ್ಗೆ ಮಾತನಾಡಿ ಭಾರತವನ್ನ ಕೆಣಕದೇ ಇದ್ರೆ ನೆಮ್ಮದಿಯ ನಿದ್ರೆ ಬರಲ್ಲ ಅನ್ಸುತ್ತೆ. ಸುಖಾ ಸುಮ್ಮನೇ ಕಾಶ್ಮೀರದ ಹಿಂದಿನ ಸ್ಥಿತಿ ಬಗ್ಗೆ ಮಾತನಾಡುತ್ತಾ ಪದೇ ಪದೇ ಮುಖಭಂಗ ಅನುಭವಿಸುತ್ತಲೇ ಇದ್ರು ಬುದ್ದಿ ಮಾತ್ರ ಬಂದಿಲ್ಲ.. ಆರ್ಟಿಕಲ್ 370 ಮರಳಿಸ್ಥಾಪಿಸಿ ಅಂತ ಬಾಯಿ ಬಡೆದುಕೊಂಡೇ ಬರುತ್ತಿದ್ದಾರೆ.. ಆದ್ರೆ ಭಾರತ ಮಾತ್ರ ಇದ್ಯಾವುದಕ್ಕೂ ಕ್ಯಾರೇ ಅನ್ನುತ್ತಿಲ್ಲ. ಇಷ್ಟಾದ್ರೂ ಇಮ್ರಾನ್ ಖಾನ್ ಗೆ ಆಯಸ ಆಗಿಲ್ಲ. ಪದೇ ಪದೇ ಹೇಳಿದ್ದೇ ಹೇಳ್ತಾ ಮರ್ಯಾದೆ ಕಡಿಮೆ ಮಾಡಿಕೊಂಡೇ ಬಂದಿದ್ದಾರೆ.. ಇದೀಗ ಮತ್ತದೇ ಹಳೇ ಮಾತನ್ನ ಹೇಳಿದ್ದಾರೆ.. ಮಾತುಕತೆ ಪುನರಾರಂಭಿಸಲು ನಾವು ಸಿದ್ಧವಾಗಿದ್ದೇವೆ ಆದ್ರೆ ಕಾಶ್ಮೀರಕ್ಕಿದ್ದ ವಿಸೇಷ ಸ್ಥಾನಮಾನ ಮರುಸ್ಥಾಪಿಸಬೇಕು ಅಂತಲೇ ಹೇಳಿದ್ದಾರೆ. ಕಾಶ್ಮೀರದ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸುವ ಕ್ರಮವಾಗಿ ಭಾರತ ಸರ್ಕಾರವು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ತೆಗೆದು ಹಾಕಿದೆ. ಭಾರತದ ಈ ನಡೆಯನ್ನ ಪಾಕಿಸ್ತಾನ ಖಂಡಿಸಿತ್ತು. ಹೀಗಾಗಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಹದಗೆಟ್ಟಿವೆ. ನಾವು ಈ ಹಿಂದಿನ ಪರಿಸ್ಥಿತಿಗೆ ಮರಳಬೇಕಿದ್ದರೆ, ಭಾರತವು ಕಾಶ್ಮೀರದ ವಿಚಾರದಲ್ಲಿ ತಾನು ತೆಗೆದುಕೊಂಡಿರುವ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಪಾಕಿಸ್ತಾನ ಈ ಹಿಂದೆ ಹೇಳಿತ್ತು. ‘ಭಾರತ ಕೈಗೊಂಡ ಕ್ರಮ ಕಾನೂನುಬಾಹಿರವಾಗಿದೆ, ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿರ್ಣಯಗಳಿಗೆ ವಿರುದ್ಧವಾಗಿದೆ. ಭಾರತ ಹಿಂದೆ ಸರಿದಿದರೆ ಮಾತುಕತೆಗೆ ನಾವೂ ಸಿದ್ಧರಿದ್ದೇವೆ ಎಂದಿದ್ದಾರೆ ಪಾಕಿಸ್ತಾನದ ಮಾನ್ಯ ಪ್ರಧಾನ ಮಂತ್ರಿಗಳು.
ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ‘ದೀದಿ’ ಫೋಟೋ : ಸಿಡಿದೆದ್ದ ಬಿಜೆಪಿ








