ಯಾರೂ ಬೇಡ ಎಂದು ಎಲ್ಲರನ್ನೂ ಹೊರಗೆ ಅಟ್ಟಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ !
ಇಸ್ಲಾಮಾಬಾದ್, ಡಿಸೆಂಬರ್10: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಮೊದಲ ಪತ್ನಿ ಜೆಮಿಮಾ ಗೋಲ್ಡ್ಸ್ಮಿತ್ ಸೇರಿದಂತೆ ಎಲ್ಲರನ್ನೂ ತಮ್ಮ ಟ್ವಿಟ್ಟರ್ ಖಾತೆಯಿಂದ ಅನ್ಫಾಲೋ ಮಾಡಿಬಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರಧಾನಿ ಯಾರನ್ನೂ ಅನುಸರಿಸುತ್ತಿಲ್ಲ ಎಂದು ಪಾಕಿಸ್ತಾನದ ಟ್ವಿಟರ್ ಬಳಕೆದಾರರು ಸೋಮವಾರ ಗಮನಿಸಿದ್ದಾರೆ. ಪ್ರಸ್ತುತ, ಖಾನ್ ಟ್ವಿಟ್ಟರ್ ನಲ್ಲಿ ಸುಮಾರು 12.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆದರೆ ಅವರು ಅನುಸರಿಸುವ ಜನರ ಸಂಖ್ಯೆ ಈಗ ಶೂನ್ಯವನ್ನು ತೋರಿಸುತ್ತಿದೆ.
Prime Minister Imran Khan unfollows everyone on twitter
no one anymore pic.twitter.com/fOqwbv6DoQ— Haseeb Khan (@Haseeb_khan663) December 8, 2020
ಇದರರ್ಥ ಅವರು ತಮ್ಮ ಮೊದಲ ಪತ್ನಿ ಮತ್ತು ಚಲನಚಿತ್ರ ನಿರ್ಮಾಪಕಿ ಜೆಮಿಮಾ ಗೋಲ್ಡ್ಸ್‌ಮಿತ್‌ನನ್ನು ಅನ್ಫಾಲೋ ಮಾಡಿದ್ದಾರೆ . ವರದಿಯ ಪ್ರಕಾರ, ಖಾನ್ ಅವರು 2010 ರಲ್ಲಿ ತಮ್ಮ ಟ್ವಿಟ್ಟರ್ ಪ್ರೊಫೈಲ್ ಅನ್ನು ರಚಿಸಿದಾಗಿನಿಂದ ಗೋಲ್ಡ್ಸ್‌ಮಿತ್‌ನನ್ನು ಅನುಸರಿಸುತ್ತಿದ್ದರು. ಇಬ್ಬರೂ ಬೇರ್ಪಟ್ಟಿದ್ದರೂ ಇಮ್ರಾನ್ ಖಾನ್ ಟ್ವಿಟರ್ನಲ್ಲಿ ತಮ್ಮ ಮೊದಲ ಪತ್ನಿಯನ್ನು ಫಾಲೋ ಮಾಡುತ್ತಿದ್ದರು.
ಹಿಂದಿನ ಪ್ರಧಾನಿ ನವಾಜ್ ಷರೀಫ್ ಕೂಡ ಇದೇ ರೀತಿ ಎಲ್ಲರನ್ನೂ ಅನ್ಫಾಲೋ ಮಾಡಿದ್ದು, ಇದೀಗ ಇಮ್ರಾನ್ ಖಾನ್ ಕೂಡ ಅವರ ಹಾದಿ ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಇಮ್ರಾನ್ ಖಾನ್ ಅವರನ್ನು ಪತ್ರಕರ್ತ ಹಮೀದ್ ಮಿರ್ ಟೀಕಿಸಿದ್ದು, ಆ ಕೂಡಲೇ ಅವರನ್ನು ಇಮ್ರಾನ್ ಅನ್ಫಾಲೋ ಮಾಡಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಳಿಗಾಲದಲ್ಲಿ ಅಗತ್ಯವಾಗಿ ಸೇವಿಸಬೇಕಾದ ಸೂಪರ್ಫುಡ್ಗಳುhttps://t.co/0cgV3uCy8H
— Saaksha TV (@SaakshaTv) December 9, 2020
ಚೀನಾದಿಂದ ಡಿಜಿಟಲ್ ಸ್ಟ್ರೈಕ್ ; ಪ್ರಮುಖ ದೇಶಗಳ ಜನಪ್ರಿಯ 105 ಆಯಪ್ ಬ್ಯಾನ್https://t.co/FBGew6I7vG
— Saaksha TV (@SaakshaTv) December 9, 2020