========130 ಡಿಗ್ರಿ ವಿದ್ಯಾರ್ಥಿಗಳಿಗೆ ಕೊರೊನಾ===
ಧಾರವಾಡ: ರಾಜ್ಯದಲ್ಲಿ ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಆರಂಭವಾದ ಬಳಿಕ ಸೋಂಕು ಹೆಚ್ಚಳವಾಗಿರಬಹುದು. ಸೋಂಕು ಹೆಚ್ಚಳ ಆದರೆ ಮತ್ತೆ ಕಾಲೇಜು ಬಂದ್ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಧಾರವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, 120ರಿಂದ 130 ವಿದ್ಯಾರ್ಥಿಗಳಿಗೆ ಮಾತ್ರ ಕೊರೊನಾ ಪಾಸಿಟಿವ್ ಬಂದಿದೆ. ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಅವರ ಶೈಕ್ಷಣಿಕ ಭವಿಷ್ಯ ರೂಪಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ. ಈ ಜವಾಬ್ದಾರಿ ಹಿನ್ನೆಲೆ ಕಾಲೇಜುಗಳನ್ನು ಆರಂಭ ಮಾಡಿದ್ದೇವೆ ಎಂದರು.
ಕೊರೊನಾ ಎರಡನೇ ಅಲೆ ಬರುತ್ತೆ..ಬಂದಿದೆ
ಹೆಮ್ಮಾರಿ ಕೊರೊನಾ ಎರಡನೇ ಅಲೆ ವಿಶ್ವದಲ್ಲಿ ಎಲ್ಲಾ ಕಡೆ ಬರುತ್ತೆ, ಬಂದಿದೆ. ನಮ್ಮ ದೇಶದಲ್ಲಿ ದೆಹಲಿ, ಅಹಮದಬಾದ್‍ನಲ್ಲಿ ಬಂದಿದೆ. ಎರಡನೇ ಅಲೆ 45 ದಿನದಿಂದ ಎರಡು ತಿಂಗಳು ಬಳಿಕ ಬರಲಿದೆ. ಬಂದೇ ಬರುತ್ತೇ ಎನ್ನುವುದೇನಿಲ್ಲ. ಅದು ನಮ್ಮ ಜನರ ನಡವಳಿಕೆ ಮೇಲೆ ಆಧಾರವಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಕೋವಿಡ್ ಮಾರ್ಗಸೂಚಿ ಅನ್ವಯ ಜನರು ನಡೆದುಕೊಂಡರೆ ಕೊರೊನಾ ಎರಡನೇ ಅಲೆ ಬರುವುದು ಕಡಿಮೆ. ಗಂಭೀರವಾಗಿ ತೆಗೆದುಕೊಂಡು ನಿಯಮ ಅನಿಷ್ಠಾನಕ್ಕೆ ತರಬೇಕಿದೆ. ಆದರೆ, ನಮ್ಮ ಜನ ಕೊರೊನಾ ಹೋಗಿದೆ ಎಂಬ ಭಾವನೆಯಲ್ಲಿದ್ದಾರೆ. ಲಸಿಕೆ ಸಿಗುವವರೆಗೂ ಕೊರೊನಾ ನಡವಳಿಕೆ ಸ್ವಾಭಾವಿಕವಾಗಿ ಬರಬೇಕು ಎಂದು ತಿಳಿಸಿದ್ದಾರೆ.
ರಾಜ್ಯದ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಸಿಎಂ ಯಡಿಯೂರಪ್ಪ ಹಾಗೂ ದೆಹಲಿಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಪದೇ ಪದೇ ಈ ವಿಚಾರವಾಗಿ ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel