ಗದಗ: ವಿಧಾನಪರಿಷತ್ ಕಲಾಪದ ವೇಳೆ ನಡೆದ ಗಲಾಟೆಗೆ ಕಾಂಗ್ರೆಸ್ ಗುಂಡಾಗಿರಿಯೇ ಕಾರಣ. ಕಾಂಗ್ರೆಸ್ ನಾಯಕರು ಈ ಮುಂಚೆ ಹೊರಗಡೆ ಗೂಂಡಾಗಿರಿ ಮಾಡ್ತಿದ್ರು. ಆದ್ರೆ ಈಗ ವಿಧಾನ ಪರಿಷತ್ ಒಳಗೂ ಗೂಂಡಾಗಿರಿ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದ್ದಾರೆ.
ಗದಗನಲ್ಲಿ ಮಾತನಾಡಿದ ಕಟೀಲ್, ವಿಧಾನ ಪರಿಷತ್‍ಗೆ ಇತಿಹಾಸ, ಪರಂಪರೆ ಇದೆ. ತನ್ನದೇ ಆದ ಗೌರವ ಇದೆ. ವಿಧಾನ ಪರಿಷತ್ ಜ್ಞಾನಿಗಳು, ವಿದ್ವಾಂಸರು ಇರುವ ಕ್ಷೇತ್ರ. ಸಮರ್ಪಕವಾಗಿ ಚರ್ಚೆಗಳು ಆಗಬೇಕು. ಕಾಂಗ್ರೆಸ್ ಯಾವಾಗ ಅಧಿಕಾರ ಕಳೆದುಕೊಂಡಿದೆಯೋ ಆವಾಗ ಗೂಂಡಾಗಿರಿ ಮಾಡಿಕೊಂಡು ಬಂದಿದೆ. ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು ಅನ್ನೋದು ಆದರ್ಶ, ಶ್ರೇಷ್ಠ ಪೀಠ. ಪೀಠದಲ್ಲಿ ಕೂತವರನ್ನು ಎತ್ತಿ ಹಾಕೋದು, ಎಳೆದು ಹಾಕೋದು ಕಾಂಗ್ರೆಸ್ ನ ಮಾನಸಿಕತೆ ತೋರಿಸಿಕೊಡುತ್ತದೆ. ಈ ಎಲ್ಲ ಘಟನೆಗೆ ಕಾಂಗ್ರೆಸ್ ಕಾರಣ ಅಂತ ಕಿಡಿಕಾರಿದರು.
ಅಧಿಕಾರ ಇಲ್ಲದಿದ್ದಾಗ ಇಂತಹ ಹತ್ತಾರು ಘಟನೆಗಳನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ನವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಸಂವಿಧಾನದ ಮೇಲೆ ಗೌರವ ಇಲ್ಲ. ಕಾಂಗ್ರೆಸ್ ನವರಿಗೆ ಅಧಿಕಾರ ಹಾಗೂ ಖುರ್ಚಿ ಮೇಲೆ ಗೌರವ ಇದೆ ಅಂತ ನಳಿನ್‍ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಯಡಿಯೂರಪ್ಪ ಸರ್ವಸಮ್ಮತ ನಾಯಕ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಮ್ಮ ಸರ್ವಸಮ್ಮತ ನಾಯಕ ಎಂದು ಪುನರುಚ್ಛರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ವಿಧಾನ ಮಂಡಲ ಕಲಾಪದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ವಿಚಾರದಲ್ಲಿ ಜನಪ್ರತಿನಿಧಿಗಳಿಗೊಂದು ನ್ಯಾಯ. ಜನಸಾಮಾನ್ಯರಿಗೆ ಒಂದು ನ್ಯಾಯ ಎಂಬ ಪ್ರಶ್ನೆಗೆ ಉತ್ತರಿಸಿದ ಕಟೀಲ್, ಬಿಜೆಪಿ ಕಾನೂನು ಹೋರಾಟ ನಡೆಸಿದೆ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel