ಕಲಬುರಗಿ : ಜಿಲ್ಲೆಯಲ್ಲಿ ಟ್ರಾನ್ಸಫರ್ ಎನ್ನುವುದು ದಂಧೆಯಾಗಿ ಮಾರ್ಪಟ್ಟಿದೆ ಅಂತ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಎಸ್ ಪಿ ವರ್ಗಾವಣೆ ಆದ್ರೂ ಮತ್ತೆ ಬಂದ್ರು. ಡಿಸಿ ವರ್ಗಾವಣೆ ಆದ್ರೂ ಪುನಃ ಬಂದ್ರು ಇದೆಲ್ಲ ದಂಧೆ ಅಗಿದೆ ಎಂದು ಮಾಜಿಸಚಿವ ಕಿಡಿಕಾರಿದರು. ಕಳ್ಳರಂತೆ ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ಸಂಸದ ಮತ್ತು ಶಾಸಕರು ನಾವು ವರ್ಗಾವರ್ಗಿಯಲ್ಲಿ ಬಾಗವಹಿಸಿಲ್ಲ ಅಂತ ಡೋಂಗಿ ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡು ನೋಡಿದಂತೆ ಎಂದರು.
ರಾಜ್ಯದಲ್ಲಿ ಕೊರೊನಾದಿಂದ ಜನ ತತ್ತರಿಸಿದ್ದಾರೆ. ಮಹಾರಾಷ್ಟ್ರದಿಂದ ಬಂದವರಿಂ ಸೋಂಕು ಹೆಚ್ಚಾಗುತ್ತಿದೆ ಅಂತ ಹೇಳುತ್ತಾರೆ. ಅದ್ರೆ ಸೋಂಕು ಹೆಚ್ಚಳಕ್ಕೆ ಬಿಜೆಪಿ ಕಾರಣ. ಸರಿಯಾದ ಸಮಯಕ್ಕೆ ಲಾಕ್ ಮಾಡದೆ ಸುಮ್ಮನಿದ್ದರು. ಈಗ ಜಾಸ್ತಿ ವ್ಯಾಪಿಸಿರುವಾಗ ಅನಗ ಲಾಕ್ ಮಾಡಿದ್ದಾರೆ. ಆರಂಬದಲ್ಲಿ ತಬ್ಲಿಘಿ ನಂಜು ಅಮತ ಬೊಬ್ಬಿರಿದರು. ಇವಾಗ ಬೇರೆ ಸಮುದಾಯದತ್ತ ಬೊಟ್ಟು ಮಾಡುತ್ತಿದ್ದಾರೆ. ಇನ್ನು ಒಂದು ಲಕ್ಷ ಜನ ಕರ್ನಾಟಕ್ಕೆ ಬರಲು ನೋಂದಣಿ ಮಾಡಿಕೊಂಡಿದ್ದಾರೆ ಬಂದವರನ್ನ ಸರಿಯಾಗಿ ನಿಭಾಯಿಸಬೇಕು ಅಂತ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡರು.








