ಪುತ್ತೂರಿನಲ್ಲಿ ಬೃಹತ್ ಹಿಂದು ಐಕ್ಯತಾ ಸಮಾವೇಶ – ನೀನ್ ತಾಂಟ್ರೆ ಬಾ ತಾಂಟ್ ಎಂದು ಸವಾಲು ಹಾಕಿದ ರವೀಶ ತಂತ್ರಿ
ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಮಾರ್ಚ್ 21ರಂದು ಬೃಹತ್ ಹಿಂದೂ ಐಕ್ಯತಾ ಸಮಾವೇಶದ ಧರ್ಮಸಭೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಇವತ್ತು ಎಲ್ಲವನ್ನೂ ಹಿಂದೂ ಸಮಾಜ ಸಹಿಸಿದೆ. ಮುಂದೆ ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಿದರೆ, ನಮ್ಮ ಭಾವನೆಗೆ ಧಕ್ಕೆಯಾದರೆ ನಿಮಗೆ ಮಾತ್ರ ಗೊತ್ತಿರುವುದಲ್ಲ ನಮಗೂ ಗೊತ್ತಿದೆ ನೀನ್ ತಾಂಟ್ರೆ ಬಾ ತಾಂಟ್ ಎಂದು ಸವಾಲು ಹಾಕಿದರು.
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಆದರೆ ಸಾಲದು. ಮಂದಿರ ಮಂದಿರವಾಗಿಯೇ ಉಳಿಯಬೇಕಾದರೆ, ಭವಿಷ್ಯದಲ್ಲಿ ರಾಮ ರಾಜ್ಯದ ನಿರ್ಮಾಣ ಆಗಬೇಕು. ಶ್ರೀ ರಾಮ ಸದ್ಗುಣಗಳ ರಾಶಿ, ಸಂಸ್ಕೃತಿಗಳ ಪ್ರತೀಕ. ಶ್ರೀ ರಾಮ ತೋರಿದ ಆದರ್ಶಗಳನ್ನು ಮುಂದಿನ ಸಂತತಿಯಲ್ಲಿ ಬಿತ್ತುವ ಕೆಲಸ ಮಾಡೋಣ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಶ್ರೀರ್ವಚನ ನೀಡುತ್ತಾ ಹೇಳಿದರು.
ಧರ್ಮಕ್ಕೆ ಚ್ಯುತಿ ಬರುವ ಕಾರ್ಯ ನಡೆದರೆ ನಾವೆಲ್ಲರೂ ಅದರ ವಿರುದ್ಧ ಧ್ವನಿ ಎತ್ತಲು ನಾವೆಲ್ಲರೂ ಸಿದ್ಧರಿರಬೇಕು. ಪ್ರತಿಯೊಬ್ಬರೂ ಕೂಡ ಧರ್ಮ ಕಾರ್ಯಕ್ಕೆ ಹೆಜ್ಜೆ ಇಡೋಣವೆಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಕರೆ ನೀಡಿದರು.
ಸಂಘಟಿತ ಶಕ್ತಿಯೇ ಧರ್ಮವನ್ನು ರಕ್ಷಿಸಬೇಕು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಹಾಗೆ ಸಮಾಜವನ್ನು ನಾವು ರಕ್ಷಿಸಿದರೆ ಸಮಾಜ ನಮ್ಮನ್ನು ಕಾಪಾಡುತ್ತದೆ. ಇದಕ್ಕೆ ಬದ್ಧರಾಗಿ ಅದಕ್ಕೆ ತಕ್ಕಂತೆ ಬದುಕನ್ನು ರೂಪಿಸುವ ಸಂಕಲ್ಪವನ್ನು ಕೈಗೊಂಡರೆ, ಈ ಸಮಾವೇಶ ಅರ್ಥಗರ್ಭಿತವಾಗುವುದು ಎಂದು ಹಿಂದು ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದರು.

ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಕರಿಂಜೆ ವೀರಾಂಜನೇಯ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ, ಕಣಿಯೂರು ಮಠದ ಶ್ರೀ ಮಹಾಬಲ ಸ್ವಾಮೀಜಿ ಮಾತನಾಡಿದರು
ಈ ಸಂದರ್ಭದಲ್ಲಿ ಅಯೋಧ್ಯೆ ಕರಸೇವೆಯಲ್ಲಿ ಭಾಗವಹಿಸಿದ 19 ಮಂದಿಯನ್ನು ಸನ್ಮಾನಿಸಲಾಯಿತು. ಹಿಂಜಾವೇ ವತಿಯಿಂದ ಸಾರ್ವಜನಿಕ ಸೇವೆಗಾಗಿ ಆ್ಯಂಬುಲೆನ್ಸ್ ಅನ್ನು ಲೋಕಾರ್ಪಣೆಗೊಳಿಸಲಾಯಿತು.
ಬಾಳೆಹಣ್ಣಿನೊಂದಿಗೆ ಹಾಲು ಸೇವಿಸುವುದರ ಆರೋಗ್ಯ ಪ್ರಯೋಜನಗಳು https://t.co/vUrt3OH4rL
— Saaksha TV (@SaakshaTv) March 16, 2021
ವಾಟ್ಸಾಪ್ ನಲ್ಲಿ ರೈಲಿನ ಸಮಯದ ಆಪ್ಡೇಟ್ಸ್ (live status) ಪಡೆಯುವುದು ಹೇಗೆ – ಇಲ್ಲಿದೆ ಮಾಹಿತಿ https://t.co/zCUP18XFFs
— Saaksha TV (@SaakshaTv) March 16, 2021
ಚಟ್ಟಂಬಡೆ / ಮಸಾಲ ವಡಾ https://t.co/EgnEuP7qTp
— Saaksha TV (@SaakshaTv) March 16, 2021








