ಬೆಂಗಳೂರು : ಕಳೆದ ಭಾನುವಾರದಿಂದ ಇವತ್ತಿನವರೆಗೂ ನಿತ್ಯ ಇಂಧನ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಆರು ದಿನಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 3.31 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 3.42 ರೂಪಾಯಿ ಹೆಚ್ಚಾಗಿದೆ. ತತ್ಪರಿಣಾಮವಾಗಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 76.57 ರೂಪಾಯಿ ಹಾಗೂ ಡೀಸೆಲ್ ದರ 69.22 ರೂಪಾಯಿ ಆಗಿದೆ ಎಂದು ಆರೋಪಿಸಿದೆ.
ಇನ್ನೊಂದೆಡೆ ಕೇಂದ್ರ ಸರ್ಕಾರ ಪೆಟ್ರೋಲ್ –ಡಿಸೇಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ. ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಅವರು, ಯುಪಿಎ ಕಾಲದಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕ್ರಮವಾಗಿ ರೂ.10.70 ಮತ್ತು ರೂ.4.90. ಇದ್ದದ್ದು ಈಗ ಕ್ರಮವಾಗಿ ರೂ.32.90 ಮತ್ತು ರೂ.31.80 ಆಗಿದೆ. ಗ್ರಾಹಕರಿಂದ ಸುಲಿದ ಹಣ ಯಾವ ಸ್ವಿಸ್ ಬ್ಯಾಂಕ್ ಖಾತೆಯಲ್ಲಿ ಜಮೆ ಆಗುತ್ತಿದೆ? ಕೇಂದ್ರ ಸರ್ಕಾರ ಸತತ ಏಳನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿದೆ. ಏಳು ದಿನಗಳಲ್ಲಿ ಪೆಟ್ರೋಲ್ ಬೆಲೆ ರೂ. 4.70 ಮತ್ತು ಡೀಸೆಲ್ ಬೆಲೆ ರೂ. 3.40 ಏರಿಕೆಯಾಗಿದೆ. ಆ ಕಡೆ ಕೊರೊನಾ ಸೋಂಕಿತರ ಸಂಖ್ಯೆ, ಈ ಕಡೆ ಪೆಟ್ರೋಲ್-ಡೀಸೆಲ್ ಬೆಲೆ ಎರಡೂ ಅನಿಯಂತ್ರಿತವಾಗಿ ಏರುತ್ತಿದೆ ಎಂದು ಆರೋಪಿಸಿದ್ದಾರೆ.








