Bangalore | ಸರ್ಕಾರದ ಇಚ್ಚಾಶಕ್ತಿಯಿಂದ ವಸತಿ ಯೋಜನೆ ಮಹಾಕ್ರಾಂತಿ
ಬೆಂಗಳೂರು : ಜಾತಿ,ಮತ, ಧರ್ಮ ಭೇದ ಮರೆತು ಬಡವರಿಗೆ ದೇಶದ್ಯಾಂತ ಮನೆಗಳನ್ನು ನಿರ್ಮಿಸಿಕೊಟ್ಟ ಕೀರ್ತಿ ಪ್ರಧಾನಿ ನರೇಂದ್ರಮೋದಿರವರಿಗೆ ಮತ್ತು ಬಿ.ಜೆ.ಪಿ.ಸರ್ಕಾರಕ್ಕೆ ಸಲ್ಲುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಚಿಕ್ಕಪೇಟೆಯ ಪಾರ್ವತಿಪುರಂನಲ್ಲಿ ವಿವಿಧ ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕು ಪತ್ರ ವಿತರಣಾ ಮತ್ತು ಪಾರ್ವತಿಪುರಂನಲ್ಲಿ ನಿರ್ಮಿಸಿರುವ ಬಹುಮಹಡಿ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸೋಮಣ್ಣ, ಸ್ವಾತಂತ್ರ್ಯ ಬಂದು 75ವರ್ಷ ಸವಿ ನೆನಪಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಡವರಿಗೆ ಸೂರನ್ನು ಕೊಡಬೇಕು ಎಂದು ಸೂಚನೆ ಕೊಡುತ್ತಾರೆ.
ಜಾತಿ,ಮತ, ಧರ್ಮ ಭೇದ ಮರೆತು ಬಡವರಿಗೆ ದೇಶದ್ಯಾಂತ ಮನೆಗಳನ್ನು ನಿರ್ಮಿಸಿಕೊಟ್ಟ ಕೀರ್ತಿ ಪ್ರಧಾನಿ ನರೇಂದ್ರಮೋದಿರವರಿಗೆ ಮತ್ತು ಬಿ.ಜೆ.ಪಿ.ಸರ್ಕಾರಕ್ಕೆ ಸಲ್ಲುತ್ತದೆ. ಸರ್ಕಾರದ ಇಚ್ಚಾಶಕ್ತಿಯಿಂದ ವಸತಿ ಯೋಜನೆ ಮಹಾಕ್ರಾಂತಿ ತರಲಾಗಿದೆ.
3ಲಕ್ಷ ಮನೆ ನಿರ್ಮಿಸುವ ಯೋಜನೆ ಕೈಗೊಳ್ಳಲಾಗಿದೆ ,ರಾಜ್ಯದಲ್ಲಿ 2800ಕೊಳಚೆ ಪ್ರದೇಶವಿದೆ. 6300ಎಕರೆ ಪ್ರದೇಶವನ್ನು ಹಕ್ಕುಪತ್ರ ನೀಡಿ ಬಡವರಿಗೆ ಆಸರೆ ನೀಡಲಾಗಿದೆ.
ಹಿಂದೆ ಪರಿಚಯ ಪತ್ರ ನೀಡಲಾಗುತ್ತಿತು ಇದೀಗ ಹಕ್ಕುಪತ್ರ ನೀಡಲಾಗುತ್ತಿದೆ .
ಹಕ್ಕುಪತ್ರವನ್ನು ಮಹಿಳೆಯರಿಗೆ ನೋಂದಣೆ ಮಾಡಿಕೊಡಲಾಗುತ್ತಿದೆ. ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರು ಬಡವರ ವಸತಿ ಯೋಜನೆಗೆ ಸಾವಿರಾರು ಕೋಟಿ ನೀಡಿದ್ದಾರೆ.
ಚಿಕ್ಕಪೇಟೆ ವಿಧಾನಸಭಾ 1000ಸಾವಿರ ಮನೆ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ. ಆಡಳಿತ ಪಕ್ಷ,ವಿರೋಧ ಪಕ್ಷ ಎಂಬ ಭೇದಬಾವ ತೊರೆದು ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಕೈಜೋಡಿಸಿ ಎಂದು ಹೇಳಿದರು.
inauguration of multi storied building in bangalore