ಚೀನಾ ಕೈಗಾರಿಕಾ ಉತ್ಪಾದನೆಯಲ್ಲಿ ಏರಿಕೆ
ಬೀಜಿಂಗ್, ಜೂನ್ 16: ಕೊರೋನಾ ಸೋಂಕಿನ ಉಗಮ ಚೀನಾದಲ್ಲಿ ಪಾತಾಳಕ್ಕೆ ಕುಸಿದಿದ್ದ ಕೈಗಾರಿಕಾ ಉತ್ಪಾದನೆ ಮತ್ತೆ ಗರಿಗೆದರಿದೆ. ಕೈಗಾರಿಕಾ ಉತ್ಪಾದನೆಯಲ್ಲಿ ಏರಿಕೆ ಕಾಣುವ ಮೂಲಕ ದೇಶದ ಅರ್ಥಿಕತೆ ಮತ್ತೆ ಮೈಕೊಡವಿ ನಿಲ್ಲುವ ಸೂಚನೆಯನ್ನು ನೀಡಿದೆ. 2020ರ ಏಪ್ರಿಲ್ ನಲ್ಲಿ 3.9 ರಷ್ಟಿದ್ದ ಚೀನಾದ ಕೈಗಾರಿಕಾ ಉತ್ಪಾದನೆಯು ಶೇಕಡಾ 4.4ಕ್ಕೆ ಏರಿಕೆಯಾಗುವ ಮೂಲಕ ಚೇತರಿಸಿಕೊಳ್ಳುತ್ತಿರುವುದರ ಮುನ್ಸೂಚನೆ ನೀಡಿದೆ.

ಆದರೆ ಸೋಮವಾರ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (ಎನ್ಬಿಎಸ್) ಬಿಡುಗಡೆ ಮಾಡಿದ ಅಂಕಿ ಅಂಶವು ವಿಶ್ಲೇಷಕರ ಮುನ್ಸೂಚನೆಗಿಂತ ಕೆಳಗಿದೆ. ವಿಶ್ಲೇಷಕರು ಮೇ ತಿಂಗಳಲ್ಲಿ
ಉತ್ಪಾದನೆಯು ಶೇಕಡಾ 5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಭಿಪ್ರಾಯಪಟ್ಟಿದ್ದರು.
2020 ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಾಗ ಕೈಗಾರಿಕಾ ಉತ್ಪಾದನೆಯು ಶೇ. 13.5ರಷ್ಟು
ಕುಸಿದಿತ್ತು. ನಂತರ ನಿಧಾನವಾಗಿ ಚೇತರಿಕೆ ಕಂಡಿತು. ಹಿಂದಿನ ತಿಂಗಳಿನ 5 ಪ್ರತಿಶತದ ಬೆಳವಣಿಗೆಗೆ ಹೋಲಿಸಿದರೆ ಮೇ ತಿಂಗಳಲ್ಲಿ ಉತ್ಪಾದನೆಯು ಶೇಕಡಾ 5.2 ರಷ್ಟು ಏರಿಕೆಯಾಗಿದೆ.








