ಮುಂಬೈಯಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಉಲ್ಬಣ ( Mumbai covid19 )
ಮುಂಬೈ, ಅಕ್ಟೋಬರ್09: ಅನ್ಲಾಕ್ ಪ್ರಕ್ರಿಯೆಯು ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿದ್ದು, ಹೆಚ್ಚಿನ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ( Mumbai covid19 )
ಇದರೊಂದಿಗೆ ಭಾರತದ ವಾಣಿಜ್ಯ ನಗರ ಮುಂಬೈಯಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಉಲ್ಬಣವು ಕಂಡುಬಂದಿದೆ. ಬುಧವಾರ, ಹೊಸ ಪ್ರಕರಣಗಳು ದಾಖಲೆಯ ಗರಿಷ್ಠ 2,848 ಕ್ಕೆ ತಲುಪಿದೆ.
ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ತಿರುವು
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮತ್ತು ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಇಲಾಖೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಮುಂಬೈಯಲ್ಲಿ, ಒಟ್ಟು ಪ್ರಕರಣಗಳ ಸಂಖ್ಯೆ 2,19,938 ಆಗಿದ್ದು, 9,245 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಅನ್ಲಾಕ್ ಪ್ರಕ್ರಿಯೆಯಿಂದಾಗಿ, ಬೀದಿ ಬದಿ ವ್ಯಾಪಾರ, ರೆಸ್ಟೋರೆಂಟ್ಗಳು ಮತ್ತು ಮಾರುಕಟ್ಟೆ ಸ್ಥಳಗಳನ್ನು ತೆರೆದಿರುವುದು ಇದಕ್ಕೆ ಕಾರಣವಾಗಿದೆ.
ಕಳೆದ ಏಳು ದಿನಗಳಲ್ಲಿ, ಕೊರೊನಾವೈರಸ್ ಪ್ರಕರಣಗಳು ಸರಾಸರಿ 2,200 ಕ್ಕಿಂತ ಹೆಚ್ಚಾಗಿದೆ. ಆದರೂ ಸಾವಿನ ಸಂಖ್ಯೆ 50 ಕ್ಕಿಂತಲೂ ಕಡಿಮೆಯಾಗಿದೆ.
ಭಾರತದ ಟೆಲಿವಿಷನ್ ಮಾರುಕಟ್ಟೆಯಲ್ಲಿ ಆಂಟಿಟ್ರಸ್ಟ್ ಪ್ರಕರಣವನ್ನು ಎದುರಿಸುತ್ತಿರುವ ಗೂಗಲ್
ಮುಂಬಯಿಯಲ್ಲಿ ಕೈಗಾರಿಕೆಗಳು ಮತ್ತು ಕಚೇರಿಗಳು ಸಹ ಪ್ರಾರಂಭವಾಗಿವೆ ಎಂದು ಬಿಎಂಸಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಶುಕ್ರವಾರದಿಂದ ಕೇಂದ್ರ ರೈಲ್ವೆ ಮುಂಬೈ ಮತ್ತು ಪುಣೆ ನಡುವಿನ ಐದು ಅಂತರ್ ನಗರ ರೈಲುಗಳು ಸಂಚಾರ ಪ್ರಾರಂಭಿಸುತ್ತದೆ ಎಂದು ಅವರು ಹೇಳಿದ್ದಾರೆ.
ಅನ್ಲಾಕ್ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿದ್ದು, ನವರಾತ್ರಿ / ದಸರಾ ಉತ್ಸವವು ಇರುವುದರಿಂದ, ಕೋವಿಡ್ -19 ಪ್ರಕರಣಗಳಲ್ಲಿ ಉಲ್ಬಣವುಂಟಾಗಬಹುದು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ